ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ(IND vs AUS) ನಡುವಿನ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್(Border-Gavaskar Trophy) ಸರಣಿ ಆರಂಭಕ್ಕೆ ಕೇವಲ 2 ದಿನ ಬಾಕಿ ಇದೆ. ನಾಯಕ ರೋಹಿತ್ ಶರ್ಮಾರ ಅಲಭ್ಯತೆ ಹಾಗೂ ಶುಭ್‌ಮನ್ ಗಿಲ್ ಗಾಯದ ಮಧ್ಯೆಯೂ ಭಾರತ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸುವ ಸಂಭಾವ್ಯ ಆಟಗಾರರ(India predicted XI for 1st test) ಪಟ್ಟಿಯೊಂದು ಹೊರಬಿದ್ದಿದೆ. ಅಭ್ಯಾಸ ವೇಳೆ ಮೊಣಕ್ಕೆ ಗಾಯಕ್ಕೆ ತುತ್ತಾಗಿದ್ದ ರಾಹುಲ್ ಫಿಟ್ ಪರಿಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ತಂಡದ ದೊಡ್ಡ ಆತಂಕವೊಂದು ಕಡಿಮೆಯಾಗಿದೆ.
ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್ ಪರ್ತ್ ಟೆಸ್ಟ್‌ನ ಆಡುವ ಹನ್ನೊಂದರ ಬಳಗದ ಮೊದಲ ಆಯ್ಕೆಯ ಆಟಗಾರರು.
ರೋಹಿತ್ ಇಲ್ಲದ ಕಾರಣ, ರಾಹುಲ್ ಅವರು ಯಶಸ್ವಿ ಜೈಸ್ವಾಲ್ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಆಗ 6ನೇ ಕ್ರಮಾಂಕದಲ್ಲಿ ಧೃವ್ ಜುರೆಲ್ ಆಡಬಹುದು. ವಿಕೆಟ್ ಕೀಪರ್ ಆಗಿರುವ ಜುರೆಲ್ ತಜ್ಞ ಬ್ಯಾಟರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಆಸ್ಟ್ರೇಲಿಯಾದಲ್ಲೇ ನಡೆದಿದ್ದ ಆಸ್ಟ್ರೇಲಿಯಾ ‘ಎ’ ವಿರುದ್ಧ ನಡೆದ 2ನೇ ಅನಧಿಕೃತ ಟೆಸ್ಟ್‌ನಲ್ಲಿ ನಿರೀಕ್ಷತ ಬ್ಯಾಟಿಂಗ್ ಪ್ರರ್ದರ್ಶನ ತೋರಿದ್ದರು. ಎರಡೂ ಇನಿಂಗ್ಸ್‌ನಲ್ಲಿಯೂ ಅರ್ಧಶತಕ ಬಾರಿಸಿ ಮಿಂಚಿದ್ದರು. ಅವರ ಬ್ಯಾಟಿಂಗ್ ಕೌಶಲ್ಯಗಳ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್‌ಗೂ ತೃಪ್ತಿ ಇದೆ. ಹೀಗಾಗಿ 6ನೇ ಕ್ರಮಾಂಕದಲ್ಲಿ ಜುರೇಲ್ ಆಡಬಹುದು.
ಇದನ್ನೂ ಓದಿ IND vs AUS: ಸ್ಲಿಪ್ ಕ್ಯಾಚ್ ಅಭ್ಯಾಸ ನಡೆಸಿದ ಭಾರತ ತಂಡ
ಯುವ ಆಲ್ರೌಂಡರ್ ನಿತೀಶ್ ರೆಡ್ಡಿ ಅವರು ಪದಾರ್ಪಣೆ ಮಾಡುವ ನಿರೀಕ್ಷೆ ಹೆಚ್ಚಿದೆ. ಇವರನ್ನು ಆಡಿಸಿದರೆ ಬೌಲಿಂಗ್ ಜತೆಗೆ ಬ್ಯಾಟಿಂಗ್ ಸೇವೆ ಕೂಡ ತಂಡಕ್ಕೆ ಲಭ್ಯವಾಗಲಿದೆ. ವೇಗದ ಬೌಲರ್ ಆಗಿರುವ ಕಾರಣ 4ನೇ ವೇಗದ ಬೌಲರ್ ಆಗಿ ಕೂಡ ಬಳಸಿಕೊಳ್ಳಬಹುದು. ಶುಭಮನ್ ಗಿಲ್ ಸ್ಥಾನದಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್ ಅವಕಾಶ ಗಿಟ್ಟಿಸಿಕೊಳ್ಳಬಹುದು. ಆಸ್ಟ್ರೆಲಿಯಾ ಎ ವಿರುದ್ಧದ 2 ಚತುರ್ದಿನ ಪಂದ್ಯಗಳಲ್ಲಿ ಪಡಿಕ್ಕಲ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್‌ದೀಪ್ ಕಾಣಿಸಿಕೊಳ್ಳಲಿದ್ದಾರೆ. ವೇಗದ ಬೌಲಿಂಗ್ ಪಿಚ್ ಆದ ಕಾರಣ ರವೀಂದ್ರ ಜಡೇಜಾ ಮಾತ್ರ ಅವಕಾಶ ಪಡೆಯಬಹುದು.
ಸಂಭಾವ್ಯ ಆಡುವ ಬಳಗ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್,ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಧ್ರುವ್ ಜುರೆಲ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ (ನಾಯಕ), ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.