ಸಂದರ್ಶನ: ಶೀಲಾ ಸಿ. ಶೆಟ್ಟಿ
ನವೆಂಬರ್ 19 ಇಂಟರ್ ನ್ಯಾಷನಲ್ ಮೆನ್ಸ್ ಡೇ! ಹೌದು, ಎಲ್ಲರಿಗೂ ಗೊತ್ತಿರುವಂತೆ ವುಮೆನ್ಸ್ ಡೇ ಆಚರಿಸುವ ರೀತಿಯಲ್ಲಿ ಮೆನ್ಸ್ ಡೇ (International Men’s Day 2024) ಆಚರಿಸುವವರು ತೀರಾ ಕಡಿಮೆ. ಆದರೆ, ಫ್ಯಾಷನ್ ಕ್ಷೇತ್ರದ ಕೆಲವು ಸೆಲೆಬ್ರೆಟಿಗಳು ಮಾತ್ರ, ಈ ದಿನದಂದು ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದಾರೆ. ವಿಶ್ವವಾಣಿ ಡಿಜಿಟಲ್ ನ್ಯೂಸ್‌ನೊಂದಿಗೆ ಮಾತನಾಡಿರುವ ಇವರೆಲ್ಲರೂ ಫ್ಯಾಷನ್ ಪ್ರಿಯರಿಗೆ ತಮ್ಮದೇ ಆದ ಸ್ಟೈಲ್‌ನಲ್ಲಿ ವಿಶ್ ಮಾಡುವುದರೊಂದಿಗೆ ಈ ದಿನದಂದು ವಿಶೇಷವಾಗಿ ಯೂನಿಕ್ ಮೆನ್ಸ್ ಸ್ಟೈಲಿಂಗ್ ಟಿಪ್ಸ್ ಕೂಡ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.
ಕಾರ್ತಿಕ್ ಜಯರಾಮ್/ಜೆಕೆ, ನಟ/ಮಾಡೆಲ್
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಕಾರ್ತಿಕ್ ಜಯರಾಮ್ ಸದಾ ಫ್ಯಾಷೆನಬಲ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಈ ದಿನದಂದು ಆಕರ್ಷಕ ಬ್ಲ್ಯಾಕ್ ಕೋಟ್ ಸೂಟ್‌ನಲ್ಲಿ ಕಾಣಿಸಿಕೊಂಡಿರುವ ಇವರು, ಸದಾ ಫ್ಯಾಮಿಲಿಗೆ ಮುಡಿಪಾಗಿಡುವ ಪುರುಷರನ್ನು ಗೌರವಿಸುವ ದಿನವಿದು ಎಂದು ಹೇಳಿದ್ದಾರೆ. ಅಲ್ಲದೇ, ಪುರುಷರು ಆಕರ್ಷಕ ಲುಕ್ ಜತೆ ಸದಾ ನೋಡಲು ಯೂನಿಕ್ ಆಗಿ ಕಾಣಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ವಿನಯ್ ಸಿಂಧ್ಯಾ, ನಟ/ಮಾಡೆಲ್
ಮಾಡೆಲಿಂಗ್ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾಣಿಸಿಕೊಂಡ ಕನ್ನಡಿಗರ ಲಿಸ್ಟ್‌ನಲ್ಲಿ ವಿನಯ್ ಸಿಂಧ್ಯಾ ಹೆಸರು ಟಾಪ್ ಲಿಸ್ಟ್‌ನಲ್ಲಿ ಸಿಗುತ್ತದೆ. ಇದೀಗ ನಟನೆಯಲ್ಲೂ ಬ್ಯುಸಿಯಾಗಿರುವ ವಿನಯ್ ಸಿಂಧ್ಯಾ, ಮೆನ್ಸ್ ಡೇಯಂದು ಹೇಳಿರುವುದು ಹೀಗೆ., ಏನೇ ಬರಲಿ, ಯಾವುದೇ ಕ್ಷೇತ್ರದಲ್ಲಾದರೂ ಸರಿಯೇ ಪುರುಷರು ಸ್ಟ್ರಾಂಗ್ ಆಗಿರುವುದನ್ನು ಕಲಿಯಬೇಕು. ಇದರೊಂದಿಗೆ ಔಟ್‌ಲುಕ್ ಕೂಡ ಆದ್ಯತೆ ನೀಡಬೇಕು ಎಂದಿದ್ದಾರೆ.
ಹರ್ಷ್ ಬೇಡಿ ಕುಮಾರ್, ಮಾಡೆಲ್/ ಸೆಲೆಬ್ರೆಟಿ ಡಿಸೈನರ್
ಮೂಲತಃ ಪಂಜಾವಿನವರಾದರೂ ಇದೀಗ ಕನ್ನಡಿಗನೇ ಆಗಿರುವ ಮಾಡೆಲ್/ಡಿಸೈನರ್ ಹರ್ಷ್ ಬೇಡಿ ಕುಮಾರ್, ಅಚ್ಚುಕಟ್ಟಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ಪುರುಷರು ಕೇವಲ ಹಾರ್ಡ್‌ವರ್ಕ್ ಮಾಡಿದರೇ ಸಾಲದು! ಜತೆಗೆ ತಮ್ಮದೇ ಆದ ಸೀಸನ್ ಸ್ಟೈಲಿಂಗ್ ಸೆನ್ಸ್ ಹೊಂದಿರಬೇಕು ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Winter Wedding Fashion 2024: ವಿಂಟರ್ ವೆಡ್ಡಿಂಗ್ ಫ್ಯಾಷನ್ ಎಥ್ನಿಕ್ ಉಡುಪುಗಳಿಗೆ ಸಿಕ್ತು ಹೊಸ ಲುಕ್!
ವಂಶಿ ಕೃಷ್ಣ ರವಿ, ಮಾಡೆಲ್/ಉದ್ಯಮಿ/ಫಿಟ್ನೆಸ್ ಫ್ರೀಕ್
ಸುಮಾರು 21 ವರ್ಷಗಳಿಂದಲೂ ಮಾಡೆಲಿಂಗ್ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ವಂಶಿ ಕೃಷ್ಣ ಅವರು ಉದ್ಯಮಿ ಹಾಗೂ ನಟ ಕೂಡ. ಫುರುಷರು ತಮ್ಮ ಲೈಫ್‌ಸ್ಟೈಲ್‌ನಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಆರೋಗ್ಯಕರ ಲೈಫ್‌ಸ್ಟೈಲ್ ಹಾಗೂ ಫಿಟ್ನೆಸ್ ರುಟೀನ್ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)