ಹೊಸದಿಲ್ಲಿ: ಕ್ರಿಸ್ಮಸ್ಗೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಲು ಕೇಂದ್ರ ಸರ್ಕಾರ (central government) ಮುಂದಾಗಿದೆ. ಶೇ. 3ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಲು (DA Hike) ನಿರ್ಧರಿಸಿದೆ. ಕೇಂದ್ರ ಸಚಿವ ಸಂಪುಟದ ಇತ್ತೀಚಿನ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಪ್ರಸ್ತುತ ಶೇ. 42ರಷ್ಟು ತುಟ್ಟಿಭತ್ಯೆಯನ್ನು (Dearness Allowance) ನೀಡಲಾಗುತ್ತಿದ್ದು, ಇದನ್ನು ಶೇ. 3ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಹೆಚ್ಚಳದೊಂದಿಗೆ ತುಟ್ಟಿಭತ್ಯೆ ಮತ್ತು ಡಿಯರ್ನೆಸ್ ರಿಲೀಫ್ (Dearness Relief) ಶೇ. 45ಕ್ಕೆ ಏರಲಿದೆ.
ಈ ಹೊಸ ದರವು 2024ರ ಜುಲೈ 1ರಿಂದ ಅನ್ವಯವಾಗುವಂತೆ ಜಾರಿಯಾಗಲಿದೆ. ಈ ಹಿಂದೆ 2023ರ ಮಾರ್ಚ್ ತಿಂಗಳಲ್ಲಿ ಶೇ. 4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿತ್ತು. ತುಟ್ಟಿಭತ್ಯೆ ಹೆಚ್ಚಳವು ಜುಲೈನಿಂದ ಡಿಸೆಂಬರ್ವರೆಗಿನ ಅವಧಿಯನ್ನು ಒಳಗೊಂಡಿದೆ. ಕೇಂದ್ರ ನೌಕರರು ಆಗಸ್ಟ್ ಮತ್ತು ಸೆಪ್ಟೆಂಬರ್ನ ತುಟ್ಟಿಭತ್ಯೆ ಬಾಕಿಯನ್ನು ಸಹ ಇದರೊಂದಿಗೆ ಪಡೆಯಲಿದ್ದಾರೆ.
ಛತ್ತೀಸ್ಗಢ ರಾಜ್ಯ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿತ್ತು. ರಾಜ್ಯ ಹಣಕಾಸು ಸಚಿವ ವಿಷ್ಣುದೇವ್ ಸಾಯಿ ಅವರು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ ಶೇ. 4ರಷ್ಟು ಹೆಚ್ಚಳವನ್ನು ಘೋಷಿಸಿದ್ದರು. ಇದರಿಂದ ರಾಜ್ಯಾದ್ಯಂತ ಸುಮಾರು ಒಂದು ಕೋಟಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನ ಸಿಗಲಿದೆ.
ಡಿಎ ಹೆಚ್ಚಳದಿಂದ ಉದ್ಯೋಗಿಯ ಮೂಲ ವೇತನವು 18,000 ರೂ. ಆಗಿದ್ದರೆ ಅವರು ತಮ್ಮ ಮಾಸಿಕ ವೇತನದಲ್ಲಿ 540 ರೂ. ಹೆಚ್ಚಳವನ್ನು ಪಡೆಯಬಹುದು. ಇದರ ಪ್ರಯೋಜನವನ್ನು ಎಲ್ಲ ಅರ್ಹ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪಡೆಯಲಿದ್ದಾರೆ.
ಹಣದುಬ್ಬರದ ಮಧ್ಯೆಯೂ ಡಿಎ ಹೆಚ್ಚಳ
ಡಿಎ ಹೆಚ್ಚಳವು ನೌಕರರಿಗೆ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಸಹಾಯ ಮಾಡುವ ಸರ್ಕಾರದ ನಿರಂತರ ಪ್ರಯತ್ನಗಳ ಭಾಗವಾಗಿದೆ.
ಡಿಎ ಹೆಚ್ಚಳದ ಕುರಿತು ಇಲ್ಲಿ ಪರಿಶೀಲಿಸಿ
ಹಣಕಾಸು ಸಚಿವಾಲಯ www.finmin.nic.in ಅಥವಾ ರಾಜ್ಯ ಸರ್ಕಾರದ ಅಧಿಕೃತ ಸೈಟ್ಗೆ ಭೇಟಿ ನೀಡಿ. ಇಲ್ಲಿರುವ ಪತ್ರಿಕಾ ಪ್ರಕಟಣೆಗಳನ್ನು ಪರಿಶೀಲಿಸಿ. ಅಧಿಕೃತ ಡಿಎ ಹೆಚ್ಚಳದ ಪ್ರಕಟಣೆಗಳಿಗಾಗಿ “ಪತ್ರಿಕಾ ಪ್ರಕಟಣೆಗಳು” ಅಥವಾ “ಸುತ್ತೋಲೆಗಳು” ವಿಭಾಗದಲ್ಲಿ ನವೀಕರಣಗಳನ್ನು ಪರಿಶೀಲಿಸಿ.
NPS Vatsalya Scheme: ಎನ್ಪಿಎಸ್ ವಾತ್ಸಲ್ಯ ಯೋಜನೆ; ಮಕ್ಕಳ ನಿವೃತ್ತಿ ಜೀವನವನ್ನು ಪೋಷಕರೇ ರೂಪಿಸಬಹುದು!
ಕೇಂದ್ರ ಸರ್ಕಾರದ ಡಿಎ ನವೀಕರಣವನ್ನು www.dopt.gov.inನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ವೆಬ್ಸೈಟ್ನಲ್ಲಿ ಕಾಣಬಹುದು.