ಪುಣೆ: ವಿಶ್ವದ ಅತೀ ದೊಡ್ಡ ಜೈನ ವಸ್ತು ಸಂಗ್ರಹಾಲಯ (Jain Museum) “ಅಭಯ ಪ್ರಭಾವನ” (Abhay Prabhavana) ಪುಣೆಯಲ್ಲಿ (Pune Museum) ತೆರೆದಿದ್ದು, ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಾಗಿದೆ. ಇತ್ತೀಚೆಗೆ ನಡೆದ ಅದ್ದೂರಿ ಕಾರ್ಯಕ್ರಮದ ಮೂಲಕ ಭಾರತದ ಮತ್ತೊಂದು ವಾಸ್ತುಶಿಲ್ಪದ ಅದ್ಭುತ ವಸ್ತುಸಂಗ್ರಹಾಲಯ ಮತ್ತು ಜ್ಞಾನ ಕೇಂದ್ರವನ್ನು ಉದ್ಘಾಟಿಸಲಾಯಿತು.
ವಿಶ್ವದ ಅತಿದೊಡ್ಡ ಜೈನ ವಸ್ತುಸಂಗ್ರಹಾಲಯ ಮತ್ತು ಜ್ಞಾನ ಕೇಂದ್ರವಾಗಿರುವ ಅಭಯ ಪ್ರಭಾವನ ವಾಸ್ತುಶಿಲ್ಪ, ಸ್ಫೂರ್ತಿ, ವೈಶಿಷ್ಟ್ಯಗಳು ಮತ್ತು ಪ್ರದರ್ಶನದಲ್ಲಿ ಏನೇನಿವೆ ಗೊತ್ತೇ?
ಪ್ರಶಾಂತ ವಾತಾವರಣದಲ್ಲಿ ನೆಲೆಗೊಂಡಿರುವ ಅಭಯ ಪ್ರಭಾವನ ವಾಸ್ತುಶಿಲ್ಪದ ಅದ್ಭುತವಾಗಿದ್ದು, ಇಲ್ಲಿ ಜೈನ ಧರ್ಮದ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಬೋಧನೆಗಳನ್ನು ಸಂರಕ್ಷಿಸಲು ಮತ್ತು ಪ್ರದರ್ಶಿಸಲಾಗಿದೆ.
ಅಭಯ ಪ್ರಭಾವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಗತ್ತಿನಾದ್ಯಂತದ ಆಧ್ಯಾತ್ಮಿಕ ನಾಯಕರು, ಇತಿಹಾಸಕಾರರು ಮತ್ತು ಕಲಾ ಉತ್ಸಾಹಿಗಳು ಸೇರಿದ್ದರು.
“ಅಭಯ” ಎಂದರೆ ನಿರ್ಭಯತೆ ಮತ್ತು “ಪ್ರಭಾವನ” ಎಂದರೆ ಆಧ್ಯಾತ್ಮಿಕ ಮೌಲ್ಯಗಳ ಪ್ರಚಾರ ಎಂಬ ಜೈನ ತತ್ತ್ವ ಗಳ ಸಂದೇಶವನ್ನು ಹೊಂದಿರುವ ಈ ವಸ್ತುಸಂಗ್ರಹಾಲಯವು ಜೈನ ತತ್ತ್ವಶಾಸ್ತ್ರದ ಸಾರ ಮತ್ತು ಇಂದಿನ ಜಗತ್ತಿನಲ್ಲಿ ಅದರ ಪ್ರಸ್ತುತತೆಯ ಬಗ್ಗೆ ಸಂದರ್ಶಕರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ.
ಜೈನ ತತ್ತ್ವಶಾಸ್ತ್ರಕ್ಕೆ ಗೌರವ
ಅಭಯ ಪ್ರಭಾವನ ವಸ್ತುಸಂಗ್ರಹಾಲಯವು ಜೈನ ಧರ್ಮದ ಶತಮಾನಗಳ ಪ್ರಯಾಣವನ್ನು ಕಲಾಕೃತಿಗಳು, ಹಸ್ತಪ್ರತಿಗಳು ಮತ್ತು ಕಲಾತ್ಮಕ ನಿಧಿಗಳ ವ್ಯಾಪಕ ಸಂಗ್ರಹದ ಮೂಲಕ ಪ್ರಸ್ತುತಪಡಿಸುತ್ತಿದೆ.
ಅಭಯ ಪ್ರಭಾವನ ಕೇವಲ ವಸ್ತುಸಂಗ್ರಹಾಲಯವಲ್ಲ. ಜಾಗತಿಕ ಹೆಗ್ಗುರುತಾಗಿದೆ. ಜೈನ ಧರ್ಮದ ಮೂಲ ಮೌಲ್ಯಗಳೊಂದಿಗೆ ಸಂಪರ್ಕ ಸಾಧಿಸಲು ಜಗತ್ತಿನಾದ್ಯಂತ ಜನರಿಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ಮ್ಯೂಸಿಯಂನ ಸಂಸ್ಥಾಪಕರಾದ ಅಭಯ್ ಎನ್. ಫಿರೋಡಿಯಾ.
ಮ್ಯೂಸಿಯಂ ಪ್ರಾಚೀನ ಹಸ್ತಪ್ರತಿಗಳನ್ನು ಒಳಗೊಂಡಿದೆ. ತಾಳೆ ಎಲೆಗಳ ಗ್ರಂಥಗಳು ಮತ್ತು ಜೈನ ಬೋಧನೆಗಳನ್ನು ವಿವರಿಸುವ ಕೈಬರಹದ ಪಠ್ಯಗಳು, ಅಮೃತಶಿಲೆ, ಕಂಚು ಮತ್ತು ಇತರ ಅಮೂಲ್ಯ ವಸ್ತುಗಳಿಂದ ಮಾಡಿದ ಜೈನ ತೀರ್ಥಂಕರರ ಸೊಗಸಾದ ಪ್ರತಿಮೆಗಳನ್ನು ಇದು ಒಳಗೊಂಡಿದೆ.
ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಹೊಲೊಗ್ರಾಮ್, ವರ್ಚುವಲ್ ರಿಯಾಲಿಟಿ ಮತ್ತು ಮಲ್ಟಿಮೀಡಿಯಾ ಪ್ರಸ್ತುತಿಗಳ ಮೂಲಕ ಜೈನ ಧರ್ಮದ ಮೌಲ್ಯಗಳನ್ನು ಸಾರಲಾಗುತ್ತದೆ.
ಜೈನ ಪುರಾಣ, ಐತಿಹಾಸಿಕ ಘಟನೆಗಳ ಕಥೆಗಳನ್ನು ಚಿತ್ರಿಸುವ ಅದ್ಭುತ ಕಲಾಕೃತಿಗಳು ಮ್ಯೂಸಿಯಂನ ಗೋಡೆಗಳಲ್ಲಿ ಕಾಣಬಹುದು. ಭಾರತ ಮತ್ತು ಪ್ರಪಂಚದಾದ್ಯಂತ ಇರುವ ಪ್ರಸಿದ್ಧ ಜೈನ ದೇವಾಲಯ ಮತ್ತು ಸ್ತೂಪಗಳ ಚಿಕಣಿ ಪ್ರತಿಕೃತಿಗಳು ಸಹ ಇಲ್ಲಿವೆ.
ಏನು ವಿಶೇಷ?
ತಂತ್ರಜ್ಞಾನ ಮತ್ತು ಸಂಪ್ರದಾಯದ ಮಿಶ್ರಣ ಇಲ್ಲಿನ ವಿಶೇಷತೆಯಾಗಿದೆ. ವಿವಿಧ ಪ್ರದರ್ಶನಗಳು ಎಲ್ಲಾ ವಯಸ್ಸಿನ ಸಂದರ್ಶಕರನ್ನು ಆಕರ್ಷಿಸುತ್ತವೆ. ಪುರಾತನ ವಸ್ತುಗಳು ಗತಕಾಲಕ್ಕೆ ಕಿಟಕಿಯಂತಿದೆ. ಉದಾಹರಣೆಗೆ ಪ್ರಸಿದ್ಧ ಜೈನ ದೇವಾಲಯಗಳಿಗೆ ವರ್ಚುವಲ್ ರಿಯಾಲಿಟಿ ಮೂಲಕ ಭೇಟಿ ನೀಡಬಹುದಾಗಿದೆ.
ಇಲ್ಲಿರುವ ಪೀಸ್ ಡೋಮ್ ಧ್ಯಾನ ಮಾಡಬಹುದಾದ ಕೇಂದ್ರ ಕೊಠಡಿ ಮತ್ತೊಂದು ಆಕರ್ಷಣೆಯಾಗಿದೆ. ಅಹಿಂಸೆಯ ಜೈನ ಆದರ್ಶಗಳಿಂದ ಸ್ಫೂರ್ತಿ ಪಡೆದ ಗುಮ್ಮಟವು ಆತ್ಮಾವಲೋಕನಕ್ಕೆ ಸೂಕ್ತವಾದ ಪ್ರಶಾಂತ ಸ್ಥಳವನ್ನು ಒದಗಿಸುತ್ತದೆ.
ವಿಶ್ವದ ಅತಿ ದೊಡ್ಡ ಜೈನ ಮ್ಯೂಸಿಯಂ
ಸಾವಿರಾರು ಚದರ ಅಡಿಗಳಷ್ಟು ವ್ಯಾಪಿಸಿರುವ ಅಭಯ ಪ್ರಭಾವನ ವಸ್ತುಸಂಗ್ರಹಾಲಯವು ಜಾಗತಿಕವಾಗಿ ಅತಿದೊಡ್ಡ ಜೈನ ಮ್ಯೂಸಿಯಂ ಎಂಬ ಖ್ಯಾತಿಯನ್ನು ಪಡೆದಿದೆ. ಇದು ಕೇವಲ ಜೈನ ಸಮುದಾಯಕ್ಕೆ ಮೀಸಲಾಗಿಲ್ಲ. ಆಧ್ಯಾತ್ಮಿಕತೆ, ಇತಿಹಾಸ ಮತ್ತು ಕಲೆಯಲ್ಲಿ ಆಸಕ್ತಿ ಇರುವ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ.
10,000ಕ್ಕೂ ಹೆಚ್ಚು ವಸ್ತುಗಳ ಸಂಗ್ರಹವನ್ನು ಹೊಂದಿರುವ ಅಭಯ ಪ್ರಭಾವನ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಮಾರ್ಗದರ್ಶಿ ಪ್ರವಾಸ, ಕಾರ್ಯಾಗಾರ ಮತ್ತು ಸಂವಾದಾತ್ಮಕ ಚಟುವಟಿಕೆಗಳು ನಿರಂತರ ನಡೆಯುತ್ತಲಿದ್ದು, ಕಲಿಕೆಯ ಕೇಂದ್ರವನ್ನಾಗಿಸಿದೆ.
ಹಸಿರು ವಸ್ತುಸಂಗ್ರಹಾಲಯ
ಜೈನ ಧರ್ಮದ ಬಗ್ಗೆ ತಿಳಿದುಕೊಳ್ಳ ಬಯಸುವವರು ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬಹುದು. ಇದು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದೆ. ಇದು ಸಂಪೂರ್ಣವಾಗಿ ಹೆಚ್ ವಿಎಸಿ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತದೆ.
Vishweshwar Bhat Column: ರ್ಪೋರ್ಚುಗೀಸರಿಂದ ಬಂದ ಪದಗಳು
ಹೆಚ್ ವಿ ಎ ಸಿ ಎನ್ನುವುದು ಹೀಟಿಂಗ್, ವೆಂಟಿಲೇಶನ್ ಮತ್ತು ಹವಾನಿಯಂತ್ರಣವನ್ನು ಸೂಚಿಸುತ್ತದೆ. ಹೆಚ್ ವಿಎಸಿ ವ್ಯವಸ್ಥೆಯು ಸಂಪೂರ್ಣ ಗೃಹ ಸೌಕರ್ಯ ವ್ಯವಸ್ಥೆಯಾಗಿದ್ದು ಇದು ವಾತಾವರಣವನ್ನು ಬಿಸಿ ಮಾಡುವ ಮತ್ತು ತಂಪಾಗಿಸುವ ವ್ಯವಸ್ಥೆಯನ್ನು ಹೊಂದಿದೆ. ಒಳಾಂಗಣದಲ್ಲಿ ಗಾಳಿಯ ಗುಣಮಟ್ಟ ಮತ್ತು ತೇವಾಂಶ ನಿಯಂತ್ರಣವನ್ನು ಮಾಡುತ್ತದೆ.