8ನೇ ವೇತನ ಆಯೋಗಕ್ಕೆ (8th Pay Commission) ಸಂಬಂಧಿಸಿದ ಘೋಷಣೆಯ ಮೇಲೆ ಸರ್ಕಾರಿ ನೌಕರರ ನಿರೀಕ್ಷೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಎಲ್ಲರೂ ಫಿಟ್‌ಮೆಂಟ್ ಅಂಶದ (fitment factor) ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ. ಫಿಟ್‌ಮೆಂಟ್ ಅಂಶವೆಂದರೆ ಸರ್ಕಾರಿ ನೌಕರರು ಮತ್ತು ನಿವೃತ್ತರ (central employees and pensioners) ಮೂಲ ವೇತನ ಮತ್ತು ಪಿಂಚಣಿಗಳನ್ನು ಕ್ರಮವಾಗಿ ಪರಿಷ್ಕರಿಸಲು ಬಳಸುವ ಲೆಕ್ಕಾಚಾರವಾಗಿದೆ.
ಇದೀಗ ಸರ್ಕಾರವು ಫಿಟ್‌ಮೆಂಟ್ ಅಂಶವನ್ನು ಶೀಘ್ರದಲ್ಲೇ ಹೆಚ್ಚಿಸಲಿದೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು ಕೇಂದ್ರ ಸರ್ಕಾರಕ್ಕೆ ಕೆಲವು ದಿನಗಳ ಹಿಂದೆ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವಂತೆ ಸೂಚಿಸಿದ್ದಾರೆ. 2.86ಕ್ಕೆ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಅವರು ಸರ್ಕಾರವನ್ನು ಒತ್ತಾಯಿಸಿದ್ದು, ಈ ಬಗ್ಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಮಿಶ್ರಾ, ನಾವು ಕನಿಷ್ಠ 2.86ರ ಫಿಟ್‌ಮೆಂಟ್ ಅಂಶವನ್ನು ನೋಡುತ್ತಿದ್ದೇವೆ. ಈ ರೀತಿಯ ಪರಿಷ್ಕರಣೆಯು 10 ವರ್ಷಗಳಲ್ಲಿ ಒಮ್ಮೆ ಮಾತ್ರ ನಡೆಯುತ್ತದೆ. 8ನೇ ವೇತನ ಆಯೋಗ ರಚನೆಯಾದ ಅನಂತರ ಈ ಬೇಡಿಕೆಯನ್ನು ಮುಂದಿಡುತ್ತೇವೆ ಎಂದು ಹೇಳಿದ್ದಾರೆ.
ಹಣದುಬ್ಬರದ ವೇಗವನ್ನು ಪರಿಗಣಿಸಿ 8ನೇ ವೇತನ ಆಯೋಗವು ಈ ಶಿಫಾರಸು ಮಾಡಿದೆ. ಕಳೆದ ವೇತನ ಆಯೋಗ ಮಾಡಿರುವ ಶಿಫಾರಸ್ಸಿಗಿಂತ ಇದು ಹೆಚ್ಚಾಗಿದೆ. ಈ ಬಗ್ಗೆ ಖಂಡಿತಾ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ವೇತನ ಎಷ್ಟಾಗಲಿದೆ?
ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗುವಂತೆಎನ್‌ಸಿ-ಜೆಸಿಎಂ ಕಾರ್ಯದರ್ಶಿ 8 ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು 2.86ಕ್ಕೆ ಹೆಚ್ಚಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಹಿಂದೆ 7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು 2.57ಕ್ಕೆ ಹೆಚ್ಚಿಸುವ ಶಿಫಾರಸು ಜಾರಿಯಾಗಿತ್ತು. ಆಗ ನೌಕರರ ಕನಿಷ್ಠ ವೇತನ 7 ಸಾವಿರದಿಂದ 17,990 ರೂ.ಗೆ ಏರಿಕೆಯಾಗಿತ್ತು.
8 ನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಫಿಟ್‌ಮೆಂಟ್ ಅಂಶವನ್ನು 2.86ಕ್ಕೆ ಹೆಚ್ಚಿಸಿದರೆ, ಉದ್ಯೋಗಿಗಳ ಕನಿಷ್ಠ ವೇತನವು 17,990 ರಿಂದ 51,451 ರೂ. ಗೆ ಹೆಚ್ಚಾಗಲಿದೆ. ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಫಿಟ್‌ಮೆಂಟ್ ಅಂಶ ಯಾವುದು ಗೊತ್ತಾ?
ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಸರ್ಕಾರವು ಸಂಬಳ ಮತ್ತು ಪಿಂಚಣಿಯನ್ನು ಪರಿಷ್ಕರಿಸುತ್ತದೆ. 2016ರಲ್ಲಿ 7ನೇ ವೇತನ ಆಯೋಗ ಇದನ್ನು ಜಾರಿಗೊಳಿಸಿತ್ತು. ಬಳಿಕ ಫಿಟ್‌ಮೆಂಟ್ ಅಂಶವನ್ನು 2.57 ಎಂದು ಮಾಡಲು ನಿರ್ಧರಿಸಲಾಯಿತು.
ಇದೀಗ 8ನೇ ವೇತನ ಆಯೋಗ ರಚನೆ ಕುರಿತು ಕೇಂದ್ರ ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ. 2026ರ ವೇಳೆಗೆ ಸರ್ಕಾರವು ಇದನ್ನು ರಚಿಸುತ್ತದೆ. ಇದರ ನಂತರ ಸುಮಾರು ಒಂದು ವರ್ಷವನ್ನು ಪರಿಶೀಲನೆಯಲ್ಲಿ ಕಳೆಯಲಿದೆ. ಬಳಿಕ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ವೇತನ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.