Wednesday, 20th November 2024

PPF Investment: ಸುರಕ್ಷಿತ ಭವಿಷ್ಯಕ್ಕೆ ಅತ್ಯುತ್ತಮ ಆಯ್ಕೆ; ತಿಂಗಳಿಗೆ 6 ಸಾವಿರ ರೂ. ಉಳಿಸಿ, 20 ಲಕ್ಷ ರೂ. ಪಡೆಯಿರಿ!

PPF Investment

ಸುರಕ್ಷಿತ ಮತ್ತು ಸ್ಥಿರವಾದ ಭವಿಷ್ಯದ ಕನಸು ಎಲ್ಲರಲ್ಲೂ ಇದೆ. ಆದರೆ ಇದಕ್ಕಾಗಿ ನಿಯಮಿತ ಠೇವಣಿ ಮಾಡುವುದು ಕೂಡ ಮುಖ್ಯ. ಸರ್ಕಾರದ ಈ ಒಂದು ಯೋಜನೆಯಲ್ಲಿ ಹೂಡಿಕೆ (PPF Investment) ಮಾಡುವುದರಿಂದ ಲಕ್ಷಾಂತರ ರೂಪಾಯಿ ಆದಾಯವನ್ನು ಮರಳಿ ಪಡೆಯಲು ಸಾಧ್ಯವಿದೆ. ಏರುತ್ತಿರುವ ಹಣದುಬ್ಬರದಿಂದಾಗಿ ಖರ್ಚು ಹೆಚ್ಚಾಗುತ್ತಿದೆ. ಕೆಲವೊಮ್ಮೆ ಖರ್ಚುಗಳು ಹೆಚ್ಚಾಗಿ ಆದಾಯವನ್ನು ಮೀರಿಸುತ್ತವೆ. ಇದರಿಂದ ಭವಿಷ್ಯಕ್ಕಾಗಿ ಉಳಿತಾಯ, ಹೂಡಿಕೆ ಮಾಡುವುದು ಸವಾಲಾಗುತ್ತಿದೆ.

ಪ್ರತಿಯೊಬ್ಬರೂ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಇಷ್ಟ ಪಡುವುದಿಲ್ಲ. ಅದಕ್ಕಾಗಿ ಇಂದು ಹೆಚ್ಚಿನವರು ಯಾವುದೇ ಅಪಾಯವಿಲ್ಲದೆ ಉತ್ತಮ ಆದಾಯವನ್ನು ನೀಡುವ ಸುರಕ್ಷಿತ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಪಿಪಿಎಫ್‌ನಲ್ಲಿ ಹೂಡಿಕೆ

ಹೂಡಿಕೆಯ ಮೇಲೆ ಉತ್ತಮ ಆದಾಯವನ್ನು ಪಡೆಯಲು ಬಯಸುವವರು, ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧವಿಲ್ಲದೇ ಇದ್ದರೆ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (Public Provident Fund ) ಹೂಡಿಕೆ ಮಾಡಬಹುದು. ಇದರಲ್ಲಿ ಶೇಕಡಾ 7.1 ರಷ್ಟು ಲಾಭವನ್ನು ಪಡೆಯಬಹುದು, ಐದು ವರ್ಷಗಳವರೆಗೆ ಹೂಡಿಕೆ ಮಾಡಿ ಬಳಿಕ ಹೂಡಿಕೆಯ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.

ಹೇಗೆ ಹೂಡಿಕೆ ಮಾಡುವುದು?

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) ಐದು ವರ್ಷಗಳವರೆಗೆ ಪ್ರತಿ ತಿಂಗಳು 6 ಸಾವಿರ ರೂಪಾಯಿಗಳಂತೆ ವರ್ಷಕ್ಕೆ 72 ಸಾವಿರ ರೂಪಾಯಿವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಇದರ ಅನಂತರ ಹೂಡಿಕೆಯು 15 ವರ್ಷಗಳನ್ನು ಪೂರ್ಣಗೊಳಿಸಿದಾಗ ಮುಕ್ತಾಯದ ಸಮಯದಲ್ಲಿ ಒಟ್ಟು 19,52,740 ರೂ. ಮರಳಿ ಪಡೆಯಬಹುದು.

PPF Investment

8.72 ಲಕ್ಷ ರೂ.ವರೆಗೆ ಲಾಭ

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF) 15 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಆದಾಯವು ಸಾಕಷ್ಟು ಲಾಭದಾಯಕವಾಗಿರುತ್ತದೆ. ಐದು ವರ್ಷಗಳಲ್ಲಿ ಸ್ಥಿರವಾಗಿ ವಾರ್ಷಿಕ ಕೊಡುಗೆಗಳನ್ನು ನೀಡಿದರೆ ಒಟ್ಟು 10.80 ಲಕ್ಷ ರೂ. ಹೂಡಿಕೆಯಾಗುತ್ತದೆ. 15 ವರ್ಷಗಳ ಅವಧಿಯ ಅಂತ್ಯದಲ್ಲಿ ಹೂಡಿಕೆಯು 8,72,740 ರೂ. ವರೆಗೆ ಆದಾಯವನ್ನು ನೀಡುತ್ತದೆ. ಇದು ಅಸಲು ಮೊತ್ತದೊಂದಿಗೆ ಸೇರಿ ಒಟ್ಟು 19,52,740 ರೂ. ಮೆಚುರಿಟಿ ಮೌಲ್ಯವಾಗುತ್ತದೆ.

ಏನು ಪ್ರಯೋಜನ?

ಪಿಪಿಎಫ್ ಯೋಜನೆಯನ್ನು ಪ್ರತಿ ಆರ್ಥಿಕ ಪರಿಸ್ಥಿತಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ.

ಇದರಲ್ಲಿ ಕನಿಷ್ಠ ಹೂಡಿಕೆ ಮೊತ್ತ ವರ್ಷಕ್ಕೆ 500. ಗರಿಷ್ಠ ಹೂಡಿಕೆ ವರ್ಷಕ್ಕೆ 1.5 ಲಕ್ಷ ರೂ. ಇದರಲ್ಲಿ ದೊಡ್ಡ ಮತ್ತು ಸಣ್ಣ ಹೂಡಿಕೆದಾರರಿಗೆ ಭಾಗವಹಿಸುವ ಅವಕಾಶವಿದೆ.

ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳಿವೆ. ಪಿಪಿಎಫ್ ಎರಡು ಪ್ರಯೋಜನಗಳನ್ನು ನೀಡುತ್ತದೆ. ಒಂದು ಉಳಿತಾಯ, ಇನ್ನೊಂದು ತೆರಿಗೆ ಪ್ರಯೋಜನಗಳು. ಕೊಡುಗೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ಕಡಿತಕ್ಕೆ ಅರ್ಹವಾಗಿವೆ.

ಈ ಯೋಜನೆಯಡಿ ಹೂಡಿಕೆಯು ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತವು ತೆರಿಗೆ ಮುಕ್ತವಾಗಿದೆ.

ಸರ್ಕಾರದ ಬೆಂಬಲಿತ ಯೋಜನೆಯಾಗಿರುವ ಪಿಪಿಎಫ್ ಮಾರುಕಟ್ಟೆಯ ಅಪಾಯಗಳಿಂದ ಮುಕ್ತವಾಗಿದೆ. ಸುರಕ್ಷಿತ, ದೀರ್ಘಕಾಲೀನ ಹೂಡಿಕೆಯ ಆಯ್ಕೆಯನ್ನು ಹುಡುಕುತ್ತಿರುವವರಿಗೆ ಇದು ಸೂಕ್ತವಾಗಿದೆ.

8th Pay Commission: 8ನೇ ವೇತನ ಆಯೋಗ; ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 51,451 ರೂ.ಗೆ ಹೆಚ್ಚಳ!

ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ಸಾಧಿಸಲು ಪಿಪಿಎಫ್ ಅತ್ಯುತ್ತಮ ಆಯ್ಕೆಯಾಗಿದೆ. ನಿವೃತ್ತಿ ಯೋಜನೆ, ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಸುರಕ್ಷತೆಯನ್ನು ಸಾಧಿಸಬಹುದು.