Tuesday, 19th November 2024

Champions Trophy: ʻಭಾರತ ತಂಡವಿಲ್ಲದೆ ಟೂರ್ನಿ ನಡೆಯಲ್ಲʼ-ಪಾಕ್‌ಗೆ ಐಸಿಸಿ ವಾರ್ನಿಂಗ್‌!

ICC Tell PCB No Tournament Possible Without India, Told To Stop Giving Statements Against-Report

ನವದೆಹಲಿ. ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy) ಟೂರ್ನಿಯ ಆಯೋಜನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ದಿನದಿಂದ ಒಂದೊಂದು ಹೇಳಿಕೆಗಳನ್ನು ನೀಡುತ್ತಿದೆ. ಪಾಕಿಸ್ತಾನಕ್ಕೆ ಭಾರತ ತಂಡ ಬರಲೇಬೇಕೆಂದು ಪಟ್ಟು ಹಿಡಿಯುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ (PCB) ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಎಚ್ಚರಿಕೆ ನೀಡಿದೆ. ಭಾರತ ತಂಡವಿಲ್ಲದೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಆಡಿಸಲು ಸಾಧ್ಯವಿಲ್ಲ ಎಂದು ಪಿಸಿಬಿಗೆ ಐಸಿಸಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.

ಪಾಕಿಸ್ತಾನವು ತನ್ನ ಆತಿಥ್ಯದಲ್ಲಿ 29 ವರ್ಷಗಳ ನಂತರ ಐಸಿಸಿ ಟೂರ್ನಿಯನ್ನು ಆಯೋಜಿಸಲು ಸಜ್ಜಾಗುತ್ತಿದೆ. ಆದರೆ ಇದೀಗ ಈ ಮೆಗಾ ಟೂರ್ನಿಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ. ಟೀಂ ಇಂಡಿಯಾದ ಪಂದ್ಯಗಳು ಎಲ್ಲಿ ನಡೆಯಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ, ಏಕೆಂದರೆ ಭಾರತ ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿದೆ.

ಇದರ ನಡುವೆ ಐಸಿಸಿ ಹೈಬ್ರಿಡ್ ಮಾದರಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೀಡಿತ್ತು. ಆದರೆ ಪಿಸಿಬಿ ಅದನ್ನು ನಿರಾಕರಿಸಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಭಾರತ ತಂಡ ಭಾಗವಹಿಸಿಲ್ಲವಾದರೆ, ಇದರ ಪಂದ್ಯಗಳು ಎಲ್ಲಿ ನಡೆಯುತ್ತವೆ? ಎಂಬ ಪ್ರಶ್ನೆಗಳು ಎದುರಾಗಿವೆ. ಇದರ ನಡುವೆ ಭಾರತದ ವಿರುದ್ಧ ಹೇಳಿಕೆ ನೀಡಿರುವ ಪಾಕಿಸ್ತಾನಕ್ಕೆ ಐಸಿಸಿ ಛೀಮಾರಿ ಹಾಕಿದೆ.

Champions Trophy Schedule: ಇನ್ನೆರಡು ದಿನದಲ್ಲಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಪ್ರಕಟ

ಭಾರತ ಭಾಗವಹಿಸಿಲ್ಲವಾದರೆ ಟೂರ್ನಿ ನಡೆಯಲ್ಲ: ಐಸಿಸಿ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ), ಪಾಕಿಸ್ತಾನ ಕ್ರಿಕೆಟ್‌ನೊಂದಿಗೆ ನಿರಂತರವಾಗಿ ಮಾತನಾಡುತ್ತಿದೆ. ಇದಲ್ಲದೆ, ಐಸಿಸಿ ಮತ್ತೊಮ್ಮೆ ಪಿಸಿಬಿಗೆ ಹೈಬ್ರಿಡ್ ಮಾದರಿಯನ್ನು ನೀಡಿದೆ. ಅಷ್ಟೇ ಅಲ್ಲ, ಭಾರತ ತಂಡವಿಲ್ಲದೆ ಯಾವುದೇ ಐಸಿಸಿ ಟೂರ್ನಿ ನಡೆಯಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದೆ. ಅಲ್ಲದೆ ಭಾರತದ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡಬಾರದೆಂದು ಪಿಸಿಬಿಗೆ ಐಸಿಸಿ ಸೂಚನೆ ನೀಡಿದೆ.

16 ವರ್ಷಗಳಿಂದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿಲ್ಲ

ಭದ್ರತಾ ಕಾರಣಗಳಿಂದಾಗಿ ಟೀಮ್‌ ಇಂಡಿಯಾ ಕಳೆದ 16 ವರ್ಷಗಳಿಂದ ಪಾಕಿಸ್ತಾನ ಪ್ರವಾಸ ಮಾಡಿಲ್ಲ. ಉಭಯ ತಂಡಗಳ ನಡುವೆ ಕೊನೆಯ ದ್ವಿಪಕ್ಷೀಯ ಸರಣಿ 2012-13ರಲ್ಲಿ ನಡೆದಿತ್ತು. ಇದಾದ ಬಳಿಕ ಭಾರತ-ಪಾಕಿಸ್ತಾನ ನಡುವಣ ಪಂದ್ಯ ಐಸಿಸಿಯ ದೊಡ್ಡ ಟೂರ್ನಿಗಳಲ್ಲಿ ಮಾತ್ರ ಕಂಡುಬರುತ್ತಿದೆ. 2008ರ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಪಾಕಿಸ್ತಾನದಲ್ಲಿ ಆಡಿತ್ತು. ಇದಲ್ಲದೇ ಪಾಕಿಸ್ತಾನ ಕೊನೆಯ ಬಾರಿಗೆ 1996ರಲ್ಲಿ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು.

Champions Trophy: ಚಾಂಪಿಯನ್ಸ್​ ಟ್ರೋಫಿ ಆತಿಥ್ಯ ಕೈ ತಪ್ಪಿದರೆ ಪಾಕ್‌ಗೆ 548 ಕೋಟಿ ರೂ. ನಷ್ಟ

ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆ

ಪಿಸಿಬಿಯೊಂದಿಗೆ ಮಾತುಕತೆ ನಡೆಸಿದ ನಂತರ ಐಸಿಸಿ ಶೀಘ್ರದಲ್ಲೇ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬಹುದು. ಎಂಬುದರ ಬಗ್ಗೆ ಬೇರೆ ಬೇರೆ ವರದಿಗಳು ಬರುತ್ತಿವೆ. ಪಿಸಿಬಿ ಸಿದ್ಧಪಡಿಸಿದ ಕರಡು ವೇಳಾಪಟ್ಟಿಯಲ್ಲಿ ಟೀಂ ಇಂಡಿಯಾದ ಎಲ್ಲಾ ಪಂದ್ಯಗಳು ಲಾಹೋರ್‌ನಲ್ಲಿ ನಡೆಯಬೇಕಿತ್ತು, ಆದರೆ ಈಗ ಅದು ಬದಲಾಗಲಿದೆ.