Thursday, 12th December 2024

ಸೇವಾ ನಿಷ್ಠೆಯುಳ್ಳ ಡಾಕ್ಟರುಗಳಿಗೆ ಗೌರವ ಇದ್ದೇ ಇದೆ

ಅಭಿವ್ಯಕ್ತಿ

ಉಮಾ ಮಹೇಶ್ ವೈದ್ಯ

ಅಲೋಪಥಿ ಡಾಕ್ಟರುಗಳು ಹಾಗೂ ಕಾರ್ಪೋರೇಟ್ ಆಸ್ಪತ್ರೆಗಳು ಸತ್ಯವನ್ನು ಮರೆಮಾಚಿ ತಮ್ಮ ಹಣದ ದಾಹದ ತಣಿಕೆಗೆ ರೋಗಿಗಳನ್ನು ಬಳಸಿಕೊಳ್ಳುತ್ತಿರುವ ರೀತಿಗಳ ಬಗ್ಗೆ ಬರೆದ ಲೇಖನಗಳು ನಿಜಕ್ಕೂ ಆ ವಲಯದ ಡಾಕ್ಟರುಗಳಿಗೆ ಅಪಥ್ಯ ವೆನಿಸುವುದರಲ್ಲಿ ತಪ್ಪೇನಿಲ್ಲ.

ಈ ಹಿನ್ನಲೆಯಲ್ಲಿ ಡಾ.ಸಿಂಚನ. ವಿ ಇವರು ನನ್ನ ಲೇಖನ ‘ಔಷಧ ಇಲ್ಲದ ರೋಗಕ್ಕೆ ಚಿಕತ್ಸೆ ನೀಡಿ ಲೂಟಿ ಹೊಡೆದರೇ ಕೋಟಿ, ಕೋಟಿ’ ಲೇಖನಕ್ಕೆ ಪ್ರತಿಕ್ರಿಯೆಯಾಗಿ ವೈದ್ಯರ ಸೇವೆಗೆ ಸಿಗಲಿ ಗೌರವ ಎಂದು ಹೇಳುತ್ತ ಆಧುನಿಕ ವೈದ್ಯ ಪದ್ಧತಿಯ ಬಗ್ಗೆ ಸೀಮಿತ ಜ್ಞಾನವಿದ್ದು ಕಾರಣ ತಜ್ಞ ವೈದ್ಯರೊಂದಿಗೆ ಚರ್ಚೆ ಅಗತ್ಯವೆಂದು ಹೇಳಿದ್ದು ಸಂತೋಷ. ಆಧುನಿಕ ವೈದ್ಯ ಪದ್ಧತಿಯ ಬಗ್ಗೆ ಮುಕ್ತವಾಗಿ ಚರ್ಚೆಯಾಗಲಿ ಎಂಬ ಸದಾಶಯದೊಂದಿಗೇ ಲೇಖನಗಳನ್ನು ಬರೆಯುತ್ತಿರುವುದು.

ಅನೇಕ ಬಾರಿ ಉಲ್ಲೇಖಿಸಿದಂತೆ, ಈ ಅಲೋಪಥಿ ಚಿಕಿತ್ಸಾ ಪದ್ಧತಿ ರೋಗಿಗಳನ್ನು ತಮ್ಮ ಔಷಧ ಪ್ರಯೋಗಕ್ಕೆ ಗಿನಿಪಿಗ್ ರೀತಿ  ಉಪಯೋಗಿಸಿಕೊಂಡು, ‘Trial and Error’ ರೀತಿಯಲ್ಲಿ ತಮ್ಮ ಚಿಕಿತ್ಸಾ ವಿಧಾನವನ್ನು ಕೈಗೊಳ್ಳುತ್ತಿದ್ದಾರೆ ಎಂಬುದು. ಇದನ್ನು
ಪುಷ್ಠೀಕರಿಸುವಂತೆ ಡಾ.ಸಿಂಚನಾ ಇವರು ತಮ್ಮ ಲೇಖನದಲ್ಲಿ ‘ಯಾವುದೇ ರೋಗವನ್ನು ಸೂಕ್ತ ಚಿಕಿತ್ಸೆಯಿಲ್ಲವೆಂದು ಕೈಬಿಡ ಲಾಗುವ ಪ್ರಮೆಯವೇ ಇರುವುದಿಲ್ಲ. ಹಿಪೊಕ್ರೆಟಿಕ್ ಪ್ರಮಾಣ ಪಡೆದಿರುವ ಅಲೋಪತಿ ವೈದ್ಯರು ಕಡೆಯವರೆಗೂ ಸಾವಿನಿಂದ ರೋಗಿಯನ್ನು ಉಳಿಸಲು ಪ್ರಯತ್ನ ಪಟ್ಟೇಪಡುತ್ತಾರೆ.”

ಇದರ ಅರ್ಥ ಬಹಳ ಸರಳ, ಆ ರೋಗಿಯ ಮೇಲೆ ಅನೇಕ ಔಷಧಗಳನ್ನು ಪ್ರಯೋಗಿಸಿ ಅವುಗಳ ಪರಿಣಾಮಗಳನ್ನು ಅವಲೋಕಿ ಸುವುದು ಹಾಗೂ ಆ ರೀತಿಯಾಗಿ ಕಂಡುಕೊಂಡ ಫಲಿತಾಂಶಗಳನ್ನು ಅಲೋಪಥಿ ವೈದ್ಯಲೋಕದ ಜರ್ನಲ್‌ಗಳಲ್ಲಿ ಪ್ರಕಟಿಸು ವುದು. ಹಾಗೆಂದ ಮೇಲೆ ರೋಗಿಗಳು ಈ ಅಲೋಪಥಿ ಡಾಕ್ಟರುಗಳು ರೋಗಿಗಳನ್ನು ಗಿನಿಪಿಗ್ ರೀತಿಯಲ್ಲಿ ಬಳಸಿಕೊಳ್ಳು ತ್ತಿರುವುದುನ್ನು ಒಪ್ಪಿಕೊಂಡಂತಲ್ಲವೇ.

ಇನ್ನು ಗಂಭೀರ ಅಡ್ಡ ಪರಿಣಾಮಗಳನ್ನು ಬೀರುವ ರೆಮೆಡಿಸಿವಿರ್ ಚುಚ್ಚುಮದ್ದನ್ನು ಔಷಧಯೇ ಇಲ್ಲದ ಕರೋನಾಕ್ಕೆ ಉಪಯೋಗಿಸಿದ್ದರ ಬಗ್ಗೆ ಉಲ್ಲೇಖಿಸುತ್ತಾ ಅನೇಕ ದೇಶಗಳಲ್ಲಿ ಬಳಕೆಯಾಗುತ್ತಿರುವ ಔಷಧವೆಂದು ಹೇಳಿದ್ದೀರಿ. ಆದರೆ, ನೀವು ನಂಬುವ ಅಮೆರಿಕ ದೇಶದ https://www.sciencemag.org/news/2020/10/very-verybad-look-remdesivir-first-fdaapproved-covid-19-drug ವೆಬ್ ಸೈಟ್‌ನಲ್ಲಿಯೇ ಈ ಔಷಧಯ ಬಂಡವಾಳವನ್ನು ಈ ಕೆಳಗಿನಂತೆ ಬಯಲು ಮಾಡಿದ್ದಾರೆ.

“Martin Landray of the University of Oxford, who is coleading the world’s largest study of various COVID-19 treatments, says remdesivir “definitely doesn’t work in the sickest patients where the biggest gains would be” but
might help people at earlier stages of disease. Further complicating the matter, most people infected with SARS-CoV-2 recover without any intervention. “The argument that the earlier you use it the better is great until you realize what the implications of that are: You won’t save many lives, and you’ll have to treat a lot of patients,” Landray says.
“It’s very inconvenient, and it’ll cost you a fortune.” Questions have also arisen about the potential of remdesivir to do harm. WHO has a regular overview of possible adverse drug events related to COVID-19 treatments. In late August it noted a disproportionately high number of reports of liver and kidney problems in patients receiving remdesivir compared with patients receiving other drugs for COVID-19. The European Medicines Agency (EMA)
also announced this month that its safety committee had started a review to assess reports of acute kidney injuries in some patients taking remdesivir.”

ಈಗ ಹೇಳಿ ಡಾಕ್ಟ್ರೇ ನೀವು ಯಾವ ಕಾರಣಕ್ಕೆ ಈ ಅಪಾಯದ ಅಡ್ಡ ಪರಿಣಾಮ ಬೀರುವ ರೆಮಿಡಿಸಿವಿರ್ ಔಷಧವನ್ನು ರೋಗಿ ಗಳಿಗೆ ನೀಡಿದಿರಿ ?  ಅಲೋಪಥಿಕ್ ವೈದ್ಯ ಪದ್ಧತಿಯು Evidence Based Medicine ತತ್ವದಲ್ಲಿ ಪ್ರಯೋಗಿಸಲಾಗುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ, ಐಸಿಎಂಆರ್, ಎಫ್ಡಿಎಗಳು ಸೂಚಿಸದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿಕೊಂಡಿರುವ ಡಾ.
ಸಿಂಚನ ಇವರು ಗಮನಿಸಬೇಕಾದ್ದೇನೆಂದರೆ ರೋಗಿ ಬಯಸುವದು, ಡಾಕ್ಟರುಗಳು ತಮ್ಮ ಜಾಣ್ಮೆ, ಅನುಭವ ಹಾಗೂ ಆ ರೋಗಿಯ ರೋಗದ ಮೂಲಕ್ಕೆ ಹೋಗಿ ಕಾರಣ ತಿಳಿದು ಮೂಲೋತ್ಪಾಟನೆ ಮಾಡಲು ಸೂಕ್ತ ಔಷಧವನ್ನು ತಾನೇ ನಿರ್ಧರಿಸಿ
ರೋಗಿಗೆ ನೀಡಿ ರೋಗವನ್ನು ವಾಸಿ ಮಾಡಬೇಕೆಂದು. ಈ ಕುರಿತಂತೆಯೇ Drugs and Cosmetics Act ನ Schedule K ಅಡಿಯಲ್ಲಿ ವೈದ್ಯರೇ ಸ್ವತಃ ಯಾವುದೇ ಲೈಸನ್ಸ್ ಪಡೆಯದೇ ಔಷಧವನ್ನು ತಯಾರಿಸಿ ರೋಗಿಗಳಿಗೆ ನೀಡಲು ಅನುವು ಮಾಡಿಕೊಟ್ಟಿದ್ದು.

ಆದರೆ ಈಗ, ಹೆಸರಿಗಷ್ಟೇ ದೊಡ್ಡ ಡಾಕ್ಟರುಗಳು ಆದರೆ ಚಿಕಿತ್ಸೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ, ಐಸಿಎಂಆರ್, ಎಫ್‌ಡಿಎಗಳ “ಪ್ರೊಟೋಕಾಲ್”ಗಳಿಗೆ ಜೋತು ಬೀಳುವುದು ಎಷ್ಟು ಸರಿ?. ಆದರೆ ಈ ಪ್ರೊಟೋಕಾಲ್‌ಗಳನ್ನು ಡಾಕ್ಟರುಗಳು ತಮ್ಮ ಪ್ರಮಾದ ಗಳಿಂದ ರೋಗಿಗಳಿಗೆ ಉಂಟಾಗುವ ಅನಾಹುತಗಳನ್ನು ಹಾಗೂ ಅದರಿಂದುಂಟಾಗುವ ಬಾಧ್ಯತೆಗಳ ಜವಾಬ್ದಾರಿಗಳನ್ನು ಒಪ್ಪಿ ಕೊಳ್ಳದೇ ನಿರಾಕರಿಸಲು ಕಂಡುಕೊಂಡ ದಾರಿ ಎಂದರೆ ತಪ್ಪಾಗಲಿಕ್ಕಿಲ್ಲ.

ಔಷಧಗಳ ಪರಿಣಾಮ ಹಾಗೂ ಅಡ್ಡಪರಿಣಾಮಗಳನ್ನು ತಿಳಿ ಹೇಳಿದ ನಂತರ ರೋಗಿಗಳ ಅಥವಾ ಸಂಬಂಧಿಕರ ಅನುಮತಿ ಪಡೆದು ಔಷಧಗಳನ್ನು ನೀಡುತ್ತೇವೆ ಎಂದು ಹೇಳಿದ್ದರಲ್ಲಿ ಎಷ್ಟು ಸತ್ಯವಿದೆ? ರೋಗಿಗಳಿಗೆ ಬೇಕಿರುವುದು ಡಾಕ್ಟರುಗಳು ತಾವು
ನೀಡುವ ಔಷಧಯ ಪರಿಣಾಮ ಹಾಗೂ ಅಡ್ಡಪರಿಣಾಮಗಳನ್ನು ಲಿಖಿತವಾಗಿ ನೀಡುವ ಕುರಿತಂತಯೇ ಹೊರತು, ಮೌಖಿಕವಾಗಿ ಆ ತುರ್ತು ಸಂದರ್ಭದಲ್ಲಿ, ಭಯದ ವಾತಾವರಣದಲ್ಲಿ ಹೇಳುವುದಲ್ಲ. ಕ್ಲಿನಿಕ್ ಡಾಕ್ಟರಿಂದ ಹಿಡಿದು ಕಾರ್ಪೋರೇಟ್ ಆಸ್ಪತ್ರೆಯ ತಜ್ಞ ಡಾಕ್ಟರುಗಳು ತಮ್ಮ ಆತ್ಮ ಸಾಕ್ಷಿಯನ್ನು ಕೇಳಿ ಹೇಳಲಿ, ತಾವು ಎಷ್ಟು ರೋಗಿಗಳಿಗೆ ಈ ಔಷಧಗಳ ಅಡ್ಡಪರಿಣಾಮದ ಬಗ್ಗೆ
ಲಿಖಿತವಾಗಿ ತಿಳಿ ಹೇಳಿದ್ದೇವೆ ಎಂದು.

ಕೇವಲ ಕರೋನಾ ಕಾಲದಲ್ಲಿ ಅಹರ್ನಿಶಿಯಾಗಿ, ನಿಸ್ವಾರ್ಥ ಸೇವೆ ನೀಡಿದ್ದಾರೆಂದು ಡಾಕ್ಟರುಗಳು ಹೇಳಬೇಕಿಲ್ಲ, ಸಾರ್ವಜನಿಕರು ಹೇಳಬೇಕು. ಕರೋನಾ ರೋಗಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಿ ಈ ಅಲೋಪಥಿಕ್ ಡಾಕ್ಟರುಗಳು ಲೂಟಿ ಮಾಡಿದ ಹಣದಿಂದ
ಬೆಂಕಿ ಬಿದ್ದ ಮನೆಯಲ್ಲಿನ ಗಳೆಗಳನ್ನು ಹಿರಿದು ತಮ್ಮ ಮನೆಕಟ್ಟಿಕೊಂಡ, ಸಾಲಗಳನ್ನು ತೀರಿಸಿದ, ಲಗ್ಙುರಿ ಕಾರುಗಳನ್ನು ಖರೀದಿಸಿದ, ಸ್ವತ್ತುಗಳಿಗೆ ಮಾಲೀಕರಾದುದಕ್ಕೆ ಸಾರ್ವಜನಿಕರೇ ಪ್ರತ್ಯಕ್ಷದರ್ಶಿಗಳು ಎಂಬುದನ್ನು ಮರೆಯಬಾರದು. ಬಿಳಿ ಬಣ್ಣದ ಎಪ್ರಾನ್ ಧರಿಸಿದ ಕೂಡಲೇ ಮನಸ್ಸೂ ಬಿಳಿಯಾಗಿರುತ್ತದೆ ಎಂದು ನಂಬುವಷ್ಟು ಜನರು ಮೂರ್ಖರಲ್ಲ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ.

ಡಾಕ್ಟರಾಗಲಿ ಅಥವಾ ಯಾವುದೇ ವೃತ್ತಿ ನಿರತನಾಗಿರಲಿ, ತಾನು ಜನರಿಗೆ ನೀಡುವ ನಿಸ್ವಾರ್ಥ ಸೇವೆಯನ್ನು ಮನಗಂಡ ಜನರು ಅವರಿಗೆ ಗೌರವ ನೀಡುತ್ತಾರೆಯೇ ಹೊರತು, ಅವರು ಹೊಂದಿದ ಪದವಿಯಿಂದಲ್ಲ. ಅನುಭವದ ಮಾತಿನಂತೆ, ‘ಗೌರವವನ್ನು ಕೇಳಿ ಪಡೆಯುವುದಕ್ಕಿಂತ ತಾನಾಗಿಯೇ ಗೌರವ ಒಲಿಯುವಂತೆ ಇರಬೇಕು’ ಎಂಬುದನ್ನು ಮರೆಯಬಾರದು.

ವೈದ್ಯ ಲೋಕದಲ್ಲಿಯೇ ಹೆಸರಾಂತ ವೈದ್ಯರು ಹಣ ಗಳಿಕೆಯನ್ನು ನಗಣ್ಯವಾಗಿಸಿ ರೋಗಿಗಳ ಸೇವೆಯನ್ನು ನಾರಾಯಣನ ಸೇವೆ ಎಂದು ಪರಿಗಣಿಸಿ ದುಡಿದು ಕೀರ್ತಿಶೇಷರಾದ ಅನೇಕ ಮಹನಿಯರು ನಮ್ಮ ನಡುವೆ ಇದ್ದರು ಹಾಗೂ ಇನ್ನೂ ಇದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಉದಾಹರಣೆಗೆ ಐದು ರೂಪಾಯಿ ಡಾಕ್ಟರು ಎಂದೇ ಪ್ರಸಿದ್ಧಿ ಪಡೆದ ಮಂಡ್ಯದ ಡಾ.ಶಂಕರೇ ಗೌಡ್ರು, ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಹಲವಾರು ಡಾಕ್ಟರುಗಳು, ಜನಾನುರಗಿಯಾಗಿರುವ ವೈದ್ಯರುಗಳು ತಮ್ಮ ಸೇವಾ ನಿಷ್ಠೆಯಿಂದ ಗಳಿಸಿದ ಗೌರವವೇ ಹೊರತು ಬೇಡಿ ಪಡೆದದ್ದಲ್ಲ.

ರೋಗಿಗಳು ಡಾಕ್ಟರ್ ಬಳಿ ಬರುವುದು ತಮ್ಮ ರೋಗ ಗುಣವಾಗಲಿ ಎಂಬ ಹಿರಿದಾಸೆಯಿಂದ. ಯಾವುದೇ ರೋಗಿ ತನಗೆ ಚಿಕಿತ್ಸೆ ನೀಡುವ ವೈದ್ಯರ ಜಾತಿ, ಧರ್ಮ, ಪದವಿ, ಗಳಿಸಿದ ಅಂಕಗಳು, ಯಾವುದನ್ನೂ ನೋಡುವುದಿಲ್ಲ. ಅವರಿಗೆ ಬೇಕಾಗಿರುವುದು ರೋಗದಿಂದ ಮುಕ್ತನಾಗುವುದು. ತಮ್ಮ ಸೇವೆಗೆ ನಿಂತ ವೈದ್ಯರು ಧನ್ವಂತರಿಯ ಪ್ರತಿರೂಪವೆಂದೇ ಪರಿಗಣಿಸಿ ಅವರು ನೀಡುವ ಎಲ್ಲ ಸೂಚನೆಗಳನ್ನು ಚಾಚೂತಪ್ಪದೇ ಪಾಲಿಸಿ ಖರ್ಚು ಎಷ್ಟೇ ಆದರೂ ರೋಗವನ್ನು ವಾಸಿ ಮಾಡುತ್ತಾರಲ್ಲ ಎಂಬ ಮುಗ್ಧ ನಂಬುಗೆಯನ್ನು ಕಾಪಾಡಿಕೊಳ್ಳುವ ಮನಸ್ಥಿತಿ ಡಾಕ್ಟರ್‌ಗಳಿಗೆ ಬೇಕಾಗಿದೆ. ತಾನು ಧನ್ವಂತರಿಯ ಹೆಸರಿನಲ್ಲಿ ಧನವಂತನಾಗ ಬಯಸುವ ಡಾಕ್ಟರುಗಳ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಮರೆಯಬಾರದೆಂದೇ
ಕಾನೂನಿನ ಕಲಂಗಳನ್ನು ಉಲ್ಲೇಖಿಸಿದ್ದು.

ಅರಿತು ಮರಣವನ್ನುಂಟುಮಾಡಿದರೆ ಕೊಲೆಯಾಗುತ್ತದೆ ಆದರೆ ನಿರ್ಲಕ್ಷ್ಯತನದಿಂದ ಮರಣಪಡಿಸಿದರೆ ಅದು ನರಹತ್ಯೆಯಾಗು ತ್ತದೆ ಎಂಬ ಕಾನೂನಿನ ಕಲಿಕೆಗಳು ಡಾಕ್ಟರ್‌ಗಳಿಗೂ ಬೇಕು. ಕೇವಲ Medical jurisprudence  ಮತ್ತು Forensic Science ವಿಷಯಗಳನ್ನು ಎಂ.ಬಿ.ಬಿ.ಎಸ್. ಪದವಿ ಓದುವ ಕಾಲಕ್ಕೆ ಅಭ್ಯಸಿಸಿ ಕಾನೂನುಗಳನ್ನು ಅರಿತುಕೊಂಡಿದ್ದೇವೆ ಎನ್ನುವುದು ಬೇಡ. ಕಾನೂನಿನ ಪ್ರಪಂಚದಲ್ಲಿ ವೈದ್ಯರ ನಿರ್ಲಕ್ಷತೆಯನ್ನು ಪ್ರಶ್ನಿಸಿ ಪರಿಹಾರ ಪಡೆಯಲು ಸಾಕಷ್ಟು ಅವಕಾಶಗಳಿವೆ.

ಅವುಗಳು ಸಾರ್ವಜನಿಕರ ಗಮನಕ್ಕೆ ಬರಬೇಕು ಹಾಗೂ ಅವುಗಳ ಬಳಕೆಯಾಗಬೇಕು ಅಂದಾಗಲೇ ಬಿಳಿ ಎಪ್ರಾನದೊಳಗಿರುವ ಕಪ್ಪು ಮನಸ್ಸುಗಳನ್ನು ಕಟ್ಟಿ ಹಾಕಲು ಸಾಧ್ಯ. ಧನದಾಹಿ ಡಾಕ್ಟರುಗಳಿಂದ ರೋಗಿಗಳಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಅರಿತು ರಕ್ಷಿಸುವ ಹಾಗೂ ಸಾರ್ವಜನಿಕ ಸ್ವಾಸ್ಥ್ಯವನ್ನು ಕಾಪಾಡುವ ಗುರುತರವಾದ ಜವಾಬ್ದಾರಿ ಇರುವುದು ನಮ್ಮ ಸರಕಾರಗಳ ಮೇಲೆ. ಆದರೆ ಈ ಸರಕಾರಗಳ ಮೇಲೆ ಪರೋಕ್ಷವಾಗಿ ಹಿಡಿತ ಸಾಽಸಿರುವುದು ಈ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಔಷಧಗಳ ತಯಾರಿಕಾ ಕಂಪನಿಗಳು.

ಉದಾಹರಣೆಗೆ ಹೇಳಬೇಕೆಂದರೆ, ಈ ಕರೋನಾ ವೈರಾಣುವಿನಿಂದ ರಕ್ಷಿಸಿಕೊಳ್ಳಲು ಹಾಗೂ ಸಕ್ಷಮರಾಗಲು ಕೇಂದ್ರ
ಸರಕಾರ ಆಯುರ್ವೇದ ಔಷಧಗಳನ್ನು ಸೇವಿಸಲು ಸೂಚಿಸಿದ ತಕ್ಷಣ ಭಾರತೀಯ ವೈದ್ಯ ಮಂಡಳಿ (ಐಎಂಎ) ತೀಕ್ಷಣವಾಗಿ ವಿರೋಧ ವ್ಯಕ್ತಪಡಿಸಿದ್ದು ಜನ ಮರೆತಿಲ್ಲ. ಆದರೆ ಈ ಎಲ್ಲ ಧನದಾಹಿ ಕಾರ್ಪೋರೇಟ್ ಆಸ್ಪತ್ರೆಗಳಿಂದ ಜನರ ಆರೋಗ್ಯ ಹಾಗೂ ಆರ್ಥಿಕ ಶೋಷಣೆಯಿಂದ ರಕ್ಷಿಸುವ ಸೂಕ್ತ ಕ್ರಮಗಳನ್ನು ಸರಕಾರಗಳು ತಮ್ಮ ಮೇಲಿನ ಎಲ್ಲ ಒತ್ತಡಗಳನ್ನು ಮೀರಿ ನಿರ್ವಹಿಸಬೇಕಾದುದು ಇಂದಿನ ಅಗತ್ಯತೆ.

ಸಾರ್ವಜನಿಕರಿಗೆ ಕಡಿಮೆ ಖರ್ಚಿನಲ್ಲಿ ಕರೋನಾ ಗುಣವಾಗಲಿ ಎಂದು ಬಯಸಿ ತಾವೇ ಔಷಧ ತಯಾರಿಸಿ ನೀಡಿದ ಡಾ. ಗಿರಿಧರ ಕಜೆ ತಮ್ಮ ಸೇವಾನಿಷ್ಠ ಗುಣದಿಂದಲೇ ಇಂದು ಜನಾನುರಾಗಿಯಾಗಿ ಎಲ್ಲರೊಂದ ಗೌರವವನ್ನು ಪಡೆದುಕೊಳ್ಳುತ್ತಿರುವದನ್ನೂ ಮರೆಬಾರದು ಏಕೆಂದರೆ, ಇಂಥ ಅನೇಕ ವೈದ್ಯರುಗಳ ನಿಜವಾದ ಸೇವಾ ನಿಷ್ಠ ಸೇವೆಗೆ ಸದಾ ಗೌರವ ಸಿಗಲಿ ಎಂಬುದೇ ಎಲ್ಲ ಲೀಖನಗಳ ಆಶಯ.