ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎಂಟನೇ ವಾರ ನಡೆಯುತ್ತಿದೆ. 50 ದಿನ ಪೂರೈಸಿರುವ ಹಿನ್ನಲೆಯಲ್ಲಿ ಮನೆಯೊಳಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದು, ಇದರಲ್ಲಿ ಶೋಭಾ ಶೆಟ್ಟಿ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಬಂದಾಗಿನಿಂದ ತಮ್ಮ ಖಡಕ್ ಮಾತುಗಳಿಂದಲೇ ಸಖತ್ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಉಗ್ರಂ ಮಂಜು ಅವರನ್ನೇ ಸೈಲೆಂಟ್ ಆಗಿಸಿದ್ದಾರೆ.
ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಾಲಿಟ್ಟ ರಜತ್ ಹಾಗೂ ಶೋಭಾ ಅವರ ಪೈಕಿ ತಂಡದ ನಾಯಕರಾಗಲು ಯಾರು ಅರ್ಹರು ಹಾಗೂ ಯಾರು ಅನರ್ಹರು ಎಂದು ಹೇಳುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಈ ಸಂದರ್ಭ ಶೋಭಾ ಹಾಗೂ ಮಂಜು ಮಧ್ಯೆ ದೊಡ್ಡ ಗಲಾಟೆ ನಡೆದಿದೆ. ಮಂಜು ಅವರು ರೂಲ್ಸ್ ಅಂಡ್ ರೆಗ್ಯೂಲೇಷನ್ ಏನು ಇರುತ್ತೋ ಅದನ್ನ ಎಲ್ಲೋ ಅಲ್ಲಾಡ್ಸಿದ್ದು ಶೋಭಾ ಅವರು ಎಂದಿದ್ದಾರೆ.
ಮಂಜು ಅವರ ಅಲ್ಲಾಡ್ಸಿದ್ದು ಅನ್ನೋ ಮಾತಿಗೆ ಶೋಭಾ ಅವರು ಕೆರಳಿ ಕೆಂಡವಾಗಿದ್ದಾರೆ. ಅಲ್ಲಾಡಿಸೋದಿಕ್ಕೆ ಗಿಲ್ಲಾಡಿಸೋದಿಕ್ಕೆ ವಾಟ್.. ಕಾರಣದಲ್ಲಿ ಕ್ಲ್ಯಾರಿಟಿನೇ ಇಲ್ಲ ಎಂದು ಶೋಭಾ ಶೆಟ್ಟಿ ಮಾತಿನ ಚಾಟಿ ಬೀಸಿದ್ದಾರೆ. ಉಗ್ರಂ ಮಂಜು ಪ್ರತಿಕ್ರಿಯಿಸಿ, ಕಿರುಚಬೇಡಿ. ಇಲ್ಲೇ ಇದಿನಿ ಹೇಳ್ರಿ ರೀ ಎನ್ನುತ್ತಲೇ ”ಕೇಳಿಸಿಕೊಳ್ಳೀ..” ಎಂದು ಶೋಭಾ ಆರ್ಭಟಿಸಿದ್ದಾರೆ. ಗೌರವ ಕಳ್ಕೋಬೇಡಿ ಎಂದು ತಿಳಿಸಿದ್ದಾರೆ. ಶೋಭಾ ಮಾತಿಗೆ ಇಡೀ ಮನೆ ಒಂದು ಕ್ಷಣ ಮೌನವಾಯಿತು.
ಇನ್ನು ಶೋಭಾ ಹಾಗೂ ಗೌತಮಿ ನಡುವೆಯೂ ಕ್ಲ್ಯಾಶ್ ಆಗಿದೆ. ನಿಮ್ಮಲ್ಲಿ ಪಾಸಿಟಿವ್ ಇಲ್ವೇ ಇಲ್ಲ, ಇರೋದೆಲ್ಲ ನೆಗೆಟಿವ್ ಎಂದು ಗೌತಮಿಗೆ ನೇರವಾಗಿ ಶೋಭಾ ಹೇಳಿದ್ದಾರೆ. ಮೊದಲಿಗೆ ಮಾತನಾಡಿದ ಗೌತಮಿ, ನನ್ನ ಮುಖವಾಡ ಕಳಚಬೇಕು ಎನ್ನುವುದು ಶೋಭಾ ಅವರ ಗುರಿ. ನಿಮ್ಮ ಟೀಂಗೆ ಬಂದರೆ ನೀವು ಅದೇ ಗುಂಗಿನಲ್ಲಿ ಇರುತ್ತೀರಾ ಹೊರತು, ನನ್ನ ಪಾಸಿಟಿವ್ ಕಡೆ ನೀವು ನೋಡೋದೆ ಇಲ್ಲ. ನೆಗೆಟಿವ್ ಫಸ್ಟ್ ನೋಡುತ್ತೀರಾ ಎಂದಿದ್ದಾರೆ.
ಇದಕ್ಕೆ ಶೋಭಾ ಶೆಟ್ಟಿ ಅವರು, ನಿಮ್ಮ ಮುಖವಾಡ ಕಳಚುತ್ತೀನಿ ಅಂತ ಭಯ ಪಡುತ್ತಿದ್ದೀರಾ? ಎಂದು ನೇರವಾಗಿ ಪ್ರಶ್ನೆ ಇಟ್ಟಿದ್ದಾರೆ. ಆಡಿಯನ್ಸ್ ಆಗಿ ನಾನು ನಿಮ್ಮನ್ನು ಹೊರಗೆ ನೋಡಿದಾಗ ಪಾಸಿಟಿವ್ ಅಂತ ಹೇಳುತ್ತೀರಾ. ಆದರೆ ನಿಮ್ಮಲ್ಲಿ ಇರೋದೆಲ್ಲ ನೆಗೆಟಿವ್. ಪಾಸಿಟಿವ್ ನಿಮಗೆ ಇಲ್ವೇ ಇಲ್ಲ. ಇರೋದೆಲ್ಲ ನೆಗೆಟಿವ್ ಎಂದಿದ್ದಾರೆ.
BBK 11: ಬಿಗ್ ಬಾಸ್ ಮನೆಯಲ್ಲಿ ಮುರಿದುಬಿತ್ತು ಮಂಜು-ಮೋಕ್ಷಿತಾ ನಡುವಣ ಅಣ್ಣ-ತಂಗಿ ಸಂಬಂಧ