ಸಾಧನಾಪಥ
ಅಶ್ವಿನಿ ವೈಷ್ಣವ್
“ನೀವು ಪ್ರಪಂಚದಾದ್ಯಂತ ಭಾರತದ ಡಿಜಿಟಲ್ ರಾಯಭಾರಿಗಳು, ನೀವು ‘ವೋಕಲ್ ಫಾರ್ ಲೋಕಲ್’ನ ಬ್ರ್ಯಾಂಡ್ ಅಂಬಾಸಿಡರ್‌ಗಳು”- ಈ ವರ್ಷದ ಆರಂಭದಲ್ಲಿ ಮೊಟ್ಟಮೊದಲ ರಾಷ್ಟ್ರೀಯ ಕ್ರಿಯೇಟರ‍್ಸ್ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಮಾತನಾಡಿದ ಗೌರವಾನ್ವಿತ ಪ್ರಧಾನಿ
ನರೇಂದ್ರ ಮೋದಿಯವರ ಈ ಸ್ಪೂರ್ತಿದಾಯಕ ಮಾತು ಗಳು, ಭಾರತದ ಸೃಜನಶೀಲ ಆರ್ಥಿಕತೆಯ ಪರಿವರ್ತಕ ಪಾತ್ರವನ್ನು ಎತ್ತಿತೋರಿಸುತ್ತವೆ. ಇಂದು, ನಮ್ಮ ಕಂಟೆಂಟ್ ರಚನೆಕಾರರು (ಕ್ರಿಯೇಟರ‍್ಸ್) ಕೇವಲ ಕಥೆಗಾರರಲ್ಲ, ಅವರು ರಾಷ್ಟ್ರನಿರ್ಮಾತೃಗಳು. ಅವರು ಭಾರತದ ಅಸ್ಮಿತೆಯನ್ನು ರೂಪಿಸುತ್ತಿದ್ದಾರೆ ಮತ್ತು ಜಾಗತಿಕ ವೇದಿಕೆಯಲ್ಲಿ ಅದರ ಕ್ರಿಯಾಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ.ಸಾ
ಭಾರತದ ೫೫ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎ-ಎ-ಐ) ಗೋವಾದಲ್ಲಿ ಇಂದು (ನ.20) ಪ್ರಾರಂಭವಾಗುತ್ತಿದೆ. ಇದು, ‘ಮುಂದಿನ ಚಲನಚಿತ್ರ ನಿರ್ಮಾತೃಗಳು- ಭವಿಷ್ಯವು ನಿಮ್ಮ ಕಣ್ಣಮುಂದಿದೆ’ ಎಂಬ ವಿಷಯದ ಮೇಲೆ ಗಮನ ಸೆಳೆಯುತ್ತಿದೆ. ಮುಂದಿನ 8 ದಿನಗಳಲ್ಲಿ
ಐಎ-ಎ-ಐ ನೂರಾರು ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ, ಉದ್ಯಮದ ದಿಗ್ಗಜರೊಂದಿಗೆ ಮಾಸ್ಟರ್-ಕ್ಲಾಸ್‌ಗಳನ್ನು ಆಯೋಜಿಸುತ್ತದೆ ಮತ್ತು ಜಾಗತಿಕ ಸಿನಿಮಾದ ಶ್ರೇಷ್ಠರನ್ನು ಗೌರವಿಸುತ್ತದೆ. ಜಾಗತಿಕ ಮತ್ತು ಭಾರತೀಯ ಸಿನಿಮಾಗಳ ಶ್ರೇಷ್ಠತೆಯ ಈ ಸಮ್ಮಿಲನವು ಭಾರತದ ಸೃಜನಶೀಲ ಆರ್ಥಿಕತೆಯನ್ನು ನಾವೀನ್ಯ, ಉದ್ಯೋಗ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯ ಶಕ್ತಿಕೇಂದ್ರವಾಗಿ ಒತ್ತಿಹೇಳುತ್ತದೆ.
ವಿಸ್ತರಿಸುತ್ತಿದೆ ದಿಗಂತ: ಭಾರತದ ಸೃಜನಶೀಲ ಆರ್ಥಿಕತೆಯು 30 ಶತಕೋಟಿ ಡಾಲರ್ ಉದ್ಯಮವಾಗಿ ಹೊರಹೊಮ್ಮಿದ್ದು, ಜಿಡಿಪಿಗೆ ಸುಮಾರು ಶೇ.2.5 ರಷ್ಟು ಕೊಡುಗೆ ನೀಡುತ್ತಿದೆ ಮತ್ತು ಶೇ.8ರಷ್ಟು ಉದ್ಯೋಗಿಗಳಿಗೆ ಜೀವನೋಪಾಯವನ್ನು ಒದಗಿಸಿದೆ. ಸಿನಿಮಾ, ಗೇಮಿಂಗ್, ಅನಿಮೇಷನ್, ಸಂಗೀತ, ಇನ್ ಫ್ಲೂಯೆನ್ಸರ್ ಮಾರ್ಕೆಟಿಂಗ್ ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ಈ ವಲಯವು ಭಾರತದ ಸಾಂಸ್ಕೃತಿಕತೆಯ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ.
3375 ಕೋಟಿ ರುಪಾಯಿ ಮೌಲ್ಯದ ಇನ್ ಫ್ಲೂಯೆನ್ಸರ್ ಮಾರ್ಕೆಟಿಂಗ್ ವಲಯ ಮತ್ತು 2 ಲಕ್ಷದಷ್ಟು ಪೂರ್ಣಾವಽಯ ಕಂಟೆಂಟ್ ರಚನೆಕಾರ ರೊಂದಿಗೆ ಉದ್ಯಮವು ಭಾರತದ ಜಾಗತಿಕ ಆಕಾಂಕ್ಷೆಗಳನ್ನು ಚಾಲನೆ ಮಾಡುವ ಕ್ರಿಯಾತ್ಮಕ ಶಕ್ತಿಯಾಗಿದೆ. ಅಂತೆಯೇ, ಗುವಾಹಟಿ, ಕೊಚ್ಚಿ ಮತ್ತು ಇಂದೋರ್‌ನಂಥ ನಗರಗಳು ಸೃಜನಶೀಲ ಕೇಂದ್ರ ಗಳಾಗುತ್ತ ವಿಕೇಂದ್ರೀಕೃತ ಸೃಜನಶೀಲ ಕ್ರಾಂತಿಯನ್ನು ಉತ್ತೇಜಿಸುತ್ತಿರುವುದು ಗಮನಾರ್ಹ ಸಂಗತಿ.
ಭಾರತದ 110 ಕೋಟಿ ಇಂಟರ್ನೆಟ್ ಬಳಕೆದಾರರು ಮತ್ತು 70 ಕೋಟಿ ಸಾಮಾಜಿಕ ಮಾಧ್ಯಮ ಬಳಕೆದಾರರು ಸೃಜನ ಶೀಲತೆಯ ಪ್ರಜಾಪ್ರಭುತ್ವೀಕರಣವನ್ನು ಮುನ್ನಡೆಸುತ್ತಿದ್ದಾರೆ. ಜಾಗತಿಕ ಪ್ರೇಕ್ಷಕ ರೊಂದಿಗೆ ನೇರವಾಗಿ ಸಂಪರ್ಕ ಹೊಂದುವಂತಾಗಲು ಕಂಟೆಂಟ್ ರಚನೆಕಾರರನ್ನು ಸಾಮಾಜಿಕ ಮಾಧ್ಯಮ ವೇದಿಕೆ ಗಳು ಮತ್ತು ಒಟಿಟಿ ಸೇವೆಗಳು ಸಕ್ರಿಯ ಗೊಳಿಸುತ್ತವೆ. ಪ್ರಾದೇಶಿಕ ವಿಷಯ ಮತ್ತು ಆಡುಭಾಷೆಯ ಕಥೆ ಹೇಳುವ ಪ್ರವೃತ್ತಿಯು ನಿರೂಪಣೆಯನ್ನು ಮತ್ತಷ್ಟು ವೈವಿಧ್ಯಗೊಳಿಸಿದ್ದು, ಭಾರತದ ಸೃಜನಶೀಲ ಆರ್ಥಿಕತೆ
ಯನ್ನು ನಿಜವಾಗಿಯೂ ಒಳಗೊಳ್ಳುವಂತೆ ಮಾಡಿದೆ.
ಕಂಟೆಂಟ್ ರಚನೆ ಕಾರರು ಅಭೂತಪೂರ್ವ ಆರ್ಥಿಕ ಯಶಸ್ಸನ್ನು ಸಾಧಿಸುತ್ತಿ ದ್ದಾರೆ; ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವವರು ತಿಂಗಳಿಗೆ 20000ರಿಂದ 2.5 ಲಕ್ಷ ರುಪಾಯಿವರೆಗೆ ಗಳಿಸುತ್ತಿದ್ದಾರೆ. ಈ ಪೂರಕ ವ್ಯವಸ್ಥೆಯು ಆರ್ಥಿಕವಾಗಿ ಲಾಭದಾಯಕ ವಾಗಿದ್ದು, ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಸಾಮಾಜಿಕ ಪ್ರಭಾವಕ್ಕೆ ವೇದಿಕೆಯಾಗಿದೆ.
ಗಾಢ ಪರಿಣಾಮಕಾರಿ: ಸೃಜನಶೀಲ ಆರ್ಥಿಕತೆಯು ಜಿಡಿಪಿ ಬೆಳವಣಿಗೆಯ ಆಚೆಗೂ ಆಳವಾದ ಪರಿಣಾಮಗಳನ್ನು ಹೊಂದಿದೆ. ಇದು ಪೂರಕ ಉದ್ಯಮಗಳನ್ನು ಬೆಂಬಲಿಸುವ ಮೂಲಕ ಪ್ರವಾಸೋದ್ಯಮ, ಆತಿಥ್ಯ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಗಮನಾರ್ಹ
ಪರಿಣಾಮವನ್ನು ಬೀರುತ್ತದೆ. ಮಾತ್ರವಲ್ಲ, ಡಿಜಿಟಲ್ ಪ್ಲಾಟ್ ಫಾರ್ಮ್‌ಗಳು ನಿರ್ಲಕ್ಷಿತ ದನಿಗಳನ್ನು ಸಶಕ್ತಗೊಳಿಸುತ್ತವೆ, ಸಾಮಾಜಿಕ ಸೇರ್ಪಡೆ, ವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಉತ್ತೇಜಿಸುತ್ತವೆ. ಕಥೆ ಹೇಳುವ ಕಲೆಗಾರಿಕೆಯ ಮೂಲಕ ಭಾರತವು ತನ್ನ ಜಾಗತಿಕ ಸಾಂಸ್ಕೃತಿಕ ಶಕ್ತಿಯನ್ನು ಬಾಲಿವುಡ್‌ನಿಂದ ಪ್ರಾದೇಶಿಕ ಸಿನಿಮಾದವರೆಗೆ ವಿಸ್ತರಿಸಿದೆ, ವಿಶ್ವ ವೇದಿಕೆಯಲ್ಲಿ ತನ್ನ ಶ್ರೀಮಂತ ಸಾಂಸ್ಕೃತಿಕ ನಿರೂಪಣೆಯನ್ನು ಪ್ರದರ್ಶಿಸುತ್ತಿದೆ. ಪರಿಸರ-ಸ್ನೇಹಿ ನಿರ್ಮಾಣ ಅಭ್ಯಾಸಗಳು ಮತ್ತು ಸುಸ್ಥಿರ -ಷನ್‌ಗಳ ಏರಿಕೆಯಲ್ಲಿ ಕಂಡುಬರು ವಂತೆ, ಪರಿಸರ ಪ್ರಜ್ಞೆಯ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಈ ವಲಯವು ಜಾಗತಿಕ ಸುಸ್ಥಿರತೆಯ ಗುರಿಗಳಿಗೆ
ಅನುಗುಣವಾಗಿದೆ.
ಪರಿವರ್ತಕ ಕ್ರಮಗಳು: ಭಾರತದ ಸೃಜನಶೀಲ ಆರ್ಥಿಕತೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಸರಕಾರವು ೩ ಪ್ರಮುಖ ಸ್ತಂಭಗಳಿಗೆ ಆದ್ಯತೆ ನೀಡುತ್ತಿದೆ: ಸದೃಢವಾದ ಪ್ರತಿಭೆಯನ್ನು ಪೋಷಿಸುವುದು, ರಚನೆಕಾರರಿಗೆ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಕಥೆಗಾರರನ್ನು ಸಶಕ್ತಗೊಳಿಸಲು ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು. ಈ ದೃಷ್ಟಿಕೋನದ ಭಾಗವಾಗಿ, ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ’ (ಐಐಸಿಟಿ) ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಇದು ನಾವೀನ್ಯ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಸರಕಾರದ ಬದ್ಧತೆ ಯನ್ನು ಒತ್ತಿಹೇಳುತ್ತದೆ. ಭಾರತೀಯ ನಿರ್ಮಾತೃಗಳು ಸಿನಿಮಾ, ಅನಿಮೇಷನ್, ಗೇಮಿಂಗ್ ಅಥವಾ ಡಿಜಿಟಲ್ ಕಲೆಗಳಲ್ಲಿ ದೇಶೀಯವಾಗಿ ಐಕ್ಯತೆಯ ಸಾಂಸ್ಕೃತಿಕ ಶಕ್ತಿಯಾಗುವುದನ್ನು ಮತ್ತು ಜಾಗತಿಕ ಮನರಂಜನೆಯಲ್ಲಿ ಪ್ರಮುಖ ಪ್ರಭಾವ ಬೀರುವುದನ್ನು ಖಾತ್ರಿಪಡಿಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ. ಚಲನಚಿತ್ರ ನಿರ್ಮಾಣ, ತಲ್ಲೀನಗೊಳಿಸುವ ಅನುಭವಗಳು ಮತ್ತು ಸಂವಾದಾತ್ಮಕ ಮನರಂಜನೆಯಲ್ಲಿ ಇತ್ತೀಚಿನ
ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತವ ಕಂಟೆಂಟ್ ರಚನೆಯ ಭವಿಷ್ಯವನ್ನು ಮರುವ್ಯಾಖ್ಯಾನಿಸಲು ಸಿದ್ಧವಾಗಿದೆ.
‘ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ’ಯು (ವೇವ್ಸ್) ಕಂಟೆಂಟ್ ರಚನೆ ಮತ್ತು ನಾವೀನ್ಯದಲ್ಲಿ ದೇಶವನ್ನು ಜಾಗತಿಕ ಶಕ್ತಿಯಾಗಿಸು ವಲ್ಲಿನ ಒಂದು ಎದ್ದುಕಾಣುವ ಉಪಕ್ರಮವಾಗಿದೆ. ಧ್ವನಿ-ದೃಶ್ಯ ಮತ್ತು ಮನರಂಜನಾ ಕ್ಷೇತ್ರ ಗಳ ಭವಿಷ್ಯವನ್ನು ರೂಪಿಸಲು ರಚನೆಕಾರರು, ಉದ್ಯಮದ ನಾಯಕರು ಮತ್ತು ನೀತಿ ನಿರೂಪಕರು ಒಗ್ಗೂಡುವ ಕ್ರಿಯಾತ್ಮಕ ವೇದಿಕೆಯಾಗಿ ‘ವೇವ್ಸ್’ ಕಾರ್ಯನಿರ್ವಹಿಸುತ್ತದೆ. ಪ್ರಧಾನ ಮಂತ್ರಿಯವರ ‘ಕ್ರಿಯೇಟ್ ಇನ್ ಇಂಡಿಯಾ’ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಶೃಂಗಸಭೆಯು ಸಹಯೋಗವನ್ನು ಉತ್ತೇಜಿಸುತ್ತದೆ, ಭಾರತದ ಸೃಜನಶೀಲ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಮತ್ತು ಜಾಗತಿಕ ಪಾಲುದಾರಿಕೆಯನ್ನು ಉತ್ತೇಜಿಸುತ್ತದೆ
‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್’ ಎಂಬುದು ಭಾರತದ ಕಂಟೆಂಟ್ ರಚನೆಕಾರರ ವಲಯದ ಆರ್ಥಿಕತೆಯ ಅಪಾರ ಸಾಮರ್ಥ್ಯವನ್ನು ಹೊರತೆಗೆಯಲು ವಿನ್ಯಾಸಗೊಳಿಸಲಾಗಿರುವ ಪ್ರವರ್ತಕ ಉಪಕ್ರಮವಾಗಿದ್ದು, ‘ವೇವ್ಸ್’ ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ. ಅನಿಮೇಷನ್,
ಗೇಮಿಂಗ್, ಸಂಗೀತ, ಒಟಿಟಿ ಕಂಟೆಂಟ್ ಮತ್ತು ತಲ್ಲೀನ ಗೊಳಿಸುವ ಕಥೆ ಹೇಳುವಿಕೆಯಂಥ ಪ್ರಮುಖ ಕ್ಷೇತ್ರಗಳಲ್ಲಿನ ಪ್ರತಿಭೆಯನ್ನು ಪ್ರೇರೇಪಿಸುವ ಮತ್ತು ಸಬಲಗೊಳಿಸುವ ಗುರಿಯನ್ನು ಇದು ಹೊಂದಿದೆ. 140000ಕ್ಕೂ ಹೆಚ್ಚು ನೋಂದಣಿಗಳು ಮತ್ತು ಸ್ಟಾರ್ಟ್-ಅಪ್‌ಗಳು, ಸ್ವತಂತ್ರ ನಿರ್ಮಾತೃಗಳು ಮತ್ತು ಉದ್ಯಮದ ವೃತ್ತಿಪರರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಈ ಉಪಕ್ರಮವು ಭಾರತದ ನಾವೀನ್ಯ ಮನೋಭಾವವನ್ನು ಪ್ರದರ್ಶಿಸುತ್ತದೆ. ಜಾಗತಿಕ ವಿಸ್ತರಣೆ: ಸಿನಿಮೀಯ ಪ್ರತಿಭೆಗಳ ಅನಾವರಣ ಮತ್ತು ಸಂಭ್ರಮಾಚರಣೆಗಾಗಿ ಈ ಎಂಟು ದಿನಗಳ ‘ಐಎ-ಎ-ಐ’ ಆರಂಭವಾಗುತ್ತಿದ್ದು ಇದು ನೀಡುತ್ತಿರುವ ಸಂದೇಶವು ಸ್ಪಷ್ಟವಾಗಿದೆ. ಅದೆಂದರೆ: ಭಾರತದ ನಿರ್ಮಾತೃಗಳು ಜಾಗತಿಕ ಸೃಜನಶೀಲ ಆರ್ಥಿಕತೆಯನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ. ನೀತಿ ಸುಧಾರಣೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ನಾವೀನ್ಯಕ್ಕೆ ಪ್ರೋತ್ಸಾಹ ನೀಡುವ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಭಾರತ ಸರಕಾರವು ಸಂಪೂರ್ಣ ಬದ್ಧವಾಗಿದೆ.
ಈ ಸಂದರ್ಭದಲ್ಲಿ, ನಮ್ಮ ಕಂಟೆಂಟ್ ರಚನೆಕಾರರಿಗೆ ನೀಡಲಾಗಿರುವ ಕರೆಯು ಸರಳವಾಗಿದೆ ಮತ್ತು ಗಾಢವಾಗಿದೆ: ೫ಜಿ, ವರ್ಚುವಲ್ ನಿರ್ಮಾಣ ಮತ್ತು ಕೃತಕ ಬುದ್ಧಿಮತ್ತೆ ಯಂಥ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ. ಭೌಗೋಳಿಕ ಅಡೆತಡೆಗಳನ್ನು ಮೀರಿದ ವೇದಿಕೆಗಳ ಲಾಭ ವನ್ನು ಪಡೆದುಕೊಳ್ಳಿ ಮತ್ತು ಭಾರತದ ಅನನ್ಯ ಗುರುತನ್ನು ಪ್ರತಿಬಿಂಬಿಸುವಾಗ ಜಾಗತಿಕವಾಗಿ ಪ್ರತಿಧ್ವನಿಸುವ ಕಥೆಗಳನ್ನು
ಹೇಳಿ. ಭವಿಷ್ಯವೆಂಬುದು ನಾವೀನ್ಯ, ಸಹಯೋಗ ಮತ್ತು ಮುಕ್ತ ರಚನೆಕಾರರಿಗೆ ಸೇರಿರುವಂಥದ್ದು. ಭಾರತದ ಸೃಜನ ಶೀಲ ಆರ್ಥಿಕತೆಯು ಸೂರ್ತಿಯ ಸಂಕೇತವಾಗಿ, ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಜಾಗತಿಕ ನಾಯಕತ್ವವನ್ನು ಮುನ್ನಡೆಸಲಿ. ಒಟ್ಟಾರೆ ಹೇಳುವುದಾದರೆ, ಭಾರತದ ಪ್ರತಿಯೊಬ್ಬ ಕಂಟೆಂಟ್ ರಚನೆಕಾರರು ಜಾಗತಿಕ ಕಥೆಗಾರನಾಗುವುದನ್ನು ಮತ್ತು ನಾಳೆಯನ್ನು ರೂಪಿಸುವ
ಕಥೆಗಳಿಗಾಗಿ ಜಗತ್ತು ಭಾರತದತ್ತ ನೋಡುವಂತಾಗುವುದನ್ನು ಖಚಿತಪಡಿಸಿಕೊಳ್ಳೋಣ.
(ಲೇಖಕರು ಕೇಂದ್ರ ವಾರ್ತಾ
ಮತ್ತು ಪ್ರಸಾರ ಖಾತೆ ಸಚಿವರು)
ಇ