ಕೇರಳ: ಕೇರಳದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾಧಿಗಳ ಯಾತ್ರೆ ಶುರುವಾಗಿದ್ದು, ಪ್ರತಿದಿನ ಸಾವಿರಾರು ಅಯ್ಯಪ್ಪ ಸ್ವಾಮಿ ಭಕ್ತರು ಸ್ವಾಮಿಯ ದರ್ಶನಕ್ಕೆ ಬರುತ್ತಿದ್ದಾರಂತೆ. ಈ ನಡುವೆ ಕೇರಳದಲ್ಲಿ ಖತರ್ನಾಕ್ ಗ್ಯಾಂಗ್ ಆದ ಕುರುವಾ ಗ್ಯಾಂಗ್(Kuruva Gang) ಕಾಟ ಶುರುವಾಗಿದೆ. ಹಾಗಾಗಿ ಕೇರಳ ಪೊಲೀಸರು ಕೇರಳದಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.
ಕುರುವಾ ಗ್ಯಾಂಗ್ ಒಂದು ದರೋಡೆಕೋರರ ಗ್ಯಾಂಗ್ ಆಗಿದೆ. ಪ್ರತಿವರ್ಷ ಕೇರಳದಲ್ಲಿ ಶಬರಿಮಲೆ ಯಾತ್ರೆ ಶುರುವಾದ ಬೆನ್ನಲೇ ಈ ಗ್ಯಾಂಗ್ ಕಾರ್ಯ ಶುರುಮಾಡುತ್ತದೆಯಂತೆ. ಲಕ್ಷಾಂತರ ಭಕ್ತರ ನಡುವೆ ಈ ಗ್ಯಾಂಗ್‍ನ ಜನರು ಭಕ್ತರ ವೇಷಧರಿಸಿ ದರೋಡೆ ಮಾಡುತ್ತಾರೆ. ಹಾಗಾಗಿ ಇವರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟದ ಕೆಲಸವಾಗಿದೆ. ಈಗಾಗಲೇ ಕೇರಳದಲ್ಲಿ ಶಬರಿ ಮಲೆ ಯಾತ್ರೆ ಶುರುವಾದ ಕಾರಣ ಕುರುವಾ ಗ್ಯಾಂಗ್ ಹಾವಳಿ ಶುರು ಮಾಡಿದೆಯಂತೆ. ಹಾಗಾಗಿ ಲಕ್ಷಾಂತರ ಭಕ್ತಾಧಿಗಳು ಸೇರುವ ಶಬರಿಮಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕೆಲವೊಂದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ.
ಕುರುವಾ ಗ್ಯಾಂಗ್:
ಕುರುವಾ ಗ್ಯಾಂಗ್ ಒಂದು ತಮಿಳುನಾಡಿನ ಖತರ್ನಾಕ್ ದರೋಡೆಕೋರರ ಗ್ಯಾಂಗ್. ಇವರು ಹಗಲಿನಲ್ಲಿ ಕಸ ಸಂಗ್ರಹಿಸುವ, ಮಾರಾಟಗಾರರ ವೇಷದಲ್ಲಿ ಮನೆ ಮನೆಗಳಿಗೆ ಹೋಗಿ ಅಲ್ಲಿ ಒಂಟಿ ವ್ಯಕ್ತಿ ಇರುವ ಮನೆ, ಹಾಗೂ ಖಾಲಿ ಇರುವ ಮನೆಗಳನ್ನು ಗಮನಿಸುತ್ತಾರೆ. ನಂತರ ರಾತ್ರಿ ತಮ್ಮ ಗ್ಯಾಂಗ್‍ನ ಸದಸ್ಯರ ಜೊತೆ ಬಂದು ಮನೆಯ ಬಳಿ ಮಗು ಅಳುವುದು ಹಾಗೂ ಮಹಿಳೆಯರು ಕಿರುಚುವಂತೆ ಶಬ್ದ ಮಾಡುವುದು, ನಲ್ಲಿಯಲ್ಲಿ ನೀರು ಬಿಡುವುದು ಮುಂತಾದ ಖತರ್ನಾಕ್ ಕೆಲಸ ಮಾಡುತ್ತಾರೆ. ಆಗ ಮನೆಯಿಂದ ಯಾರಾದರೂ ಹೊರಗೆ ಬಂದರೆ ಅವರ ಮೇಲೆ ಅಟ್ಯಾಕ್ ಮಾಡಿ ದರೋಡೆ ಮಾಡುತ್ತಾರಂತೆ.
ಇದನ್ನೂ ಓದಿ: ಮದುವೆಯಲ್ಲಿ ಹುಚ್ಚರಂತೆ ಕುಣಿದು ಕುಪ್ಪಳಿಸಿದ ಗುಂಪು! ವಿಡಿಯೊ ನೋಡಿ
ಹಾಗಾಗಿ ಈ ರೀತಿ ಶಬ್ದವಾದರೆ ಯಾರು ಮನೆಯಿಂದ ಹೊರಗೆ ಬಾರದಂತೆ ಕೇರಳ ಪೊಲೀಸರು ಜನರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇಬ್ಬರು ಪುರುಷರ ಅರೆಬಟ್ಟೆ ತೊಟ್ಟು ಮುಖಕ್ಕೆ ಮುಸುಕು ಹಾಕಿ ಕೈಯಲ್ಲಿ ಜೋಳಿಗೆ ಹಿಡಿದು ಹೋಗುತ್ತಿರುವ ದೃಶ್ಯ ಇತ್ತೀಚೆಗೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗಾಗಿ ನಿಮ್ಮ ಸುತ್ತಮುತ್ತ ಯಾರಾದರೂ ಅನುಮಾನಾಸ್ಪಾದವಾಗಿ ಕಾಣಿಸಿಕೊಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಆದೇಶಿಸಿದ್ದಾರೆ.