Wednesday, 20th November 2024

Notification for Transfer: ಗ್ರಾಪಂ ನೌಕರರ ವರ್ಗಾವಣೆಗೆ ಅಧಿಸೂಚನೆ ಪ್ರಕಟ

Notification for Transfer

ಬೆಂಗಳೂರು: ವರ್ಗಾವಣೆಯ ನಿರೀಕ್ಷೆಯಲ್ಲಿರುವ ಗ್ರಾಮ ಪಂಚಾಯತ್‌ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಹಿರಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಹಾಗೂ ಗ್ರೇಡ್ 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವುದಾಗಿ ಸರ್ಕಾರ ತಿಳಿಸಿದೆ (Notification for Transfer).

ಕಡ್ಡಾಯ ಮತ್ತು ಸಾರ್ವಜನಿಕ ಹಿತಾಸಕ್ತಿ, ಸಾಮಾನ್ಯ ಕೋರಿಕೆ ವರ್ಗಾವಣೆ ಶೇ. 9, ಪತಿ-ಪತ್ನಿ ಶೇ. 3, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಒಂಟಿ ಮಹಿಳೆ ಅಥವಾ ಒಂಟಿ ಪೋಷಕರ ಪ್ರಕರಣಗಳು ಅಥವಾ ದೈಹಿಕವಾಗಿ ಅವಲಂಬಿತ ಪತಿ/ಪತ್ನಿ ಹೊಂದಿರುವ ನೌಕರರು, ಅಂಗವಿಕಲತೆಯ ಮಾನದಂಡ ಇರುವವರು, ಗಂಭೀರ ಕಾಯಿಲೆ ಇರುವ ಮಕ್ಕಳನ್ನು ಹೊಂದಿರುವ ನೌಕರರಿಗೆ ಶೇ. 1, ಗಂಭೀರ ಅನಾರೋಗ್ಯ ಪ್ರಕರಣ ಶೇ. 1, ಅಂಗವಿಕಲತೆಯ ಮಾನದಂಡ ಮಟ್ಟ ಇರುವ ನೌಕರರ ಪ್ರಕರಣದಲ್ಲಿ ಶೇ. 1 ಸೇರಿದಂತೆ ಶೇ. 15ರಷ್ಟು ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ.

ಶೇ. 15ರಷ್ಟು ವರ್ಗಾವಣೆ

ಕೌನ್ಸಿಲಿಂಗ್‌ ಮೂಲಕ ಈ ವರ್ಗಾವಣೆ ನಡೆಯಲಿದೆ. ಶೇ. 15ರಷ್ಟು ವರ್ಗಾವಣೆ ಮಾಡಲು ನಿರ್ಧರಿಸಿರುವ ಸರ್ಕಾರ ಈ ಬಗ್ಗೆ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Tumkur News: ಒಂದೇ ದಿನದಲ್ಲಿ ಉದ್ಯೋಗ ನೀಡಿ ಅನುಕಂಪ ತೋರಿದ ಜಿಲ್ಲಾಧಿಕಾರಿ