ಲಖನೌ: ಇತ್ತೀಚೆಗೆ ಉತ್ತರ ಪ್ರದೇಶದ ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಫ್ರೆಶರ್ಸ್ ಪಾರ್ಟಿಯ ಸಮಯದಲ್ಲಿ, ವಿದ್ಯಾರ್ಥಿನಿಯೊಬ್ಬಳು ಟಿ-ಶರ್ಟ್ ಬಿಚ್ಚಿ ನೃತ್ಯ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಫ್ರೆಶರ್ಸ್ ಪಾರ್ಟಿಯ ಸಮಯದಲ್ಲಿ, ವಿದ್ಯಾರ್ಥಿನಿಯೊಬ್ಬಳು “ಮಿಸ್ಟರ್ ಅಂಡ್ ಮಿಸ್ ಫ್ರೆಶರ್ 2024” ಕಾರ್ಯಕ್ರಮದ ಭಾಗವಾಗಿ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದಾಳೆ. 2004ರಲ್ಲಿ ಅಕ್ಷಯ್ ಕುಮಾರ್ ಮತ್ತು ಐಶ್ವರ್ಯಾ ರೈ ನಟಿಸಿದ ಖಾಕಿ ಚಿತ್ರದ ಜನಪ್ರಿಯ ಬಾಲಿವುಡ್ ಹಾಡಾದ ದಿಲ್ ದೂಬಾಗೆ ಕುಣಿದು ಕುಪ್ಪಳಿಸಿದ್ದಾಳೆ. ಹಾಡು ಶುರುವಾಗುತ್ತಿದ್ದಂತೆ ತನ್ನ ಟಿ-ಶರ್ಟ್ ಅರ್ಧ ತೆಗೆದು ಕೆಳಗೆ ಧರಿಸಿರುವ ಮತ್ತೊಂದು ಹಸಿರು ಬಣ್ಣದ, ಕ್ರಾಪ್ ಟಾಪ್ನಲ್ಲಿ ಡಾನ್ಸ್ ಮಾಡಿದ್ದಾಳೆ. ಇದನ್ನು ಕಂಡು ಹುಡುಗರು ಹುಚ್ಚೆದ್ದು ಕುಣಿದಿದ್ದಾರೆ.
Amity University ❎ nudyty industry ✅😡
— Shivangi Kashyap (@ShiviKashyapbjp) November 17, 2024
Beti gayi hai Engineering degree lene
Yahi wo ladkya h jinke lye ham candle 🕯 march krte h😢
Behan jab tshirt ka koi kaam nhi tha to aai kyu pehan ke ? pic.twitter.com/secTHsUF0z
ಈ ವಿಡಿಯೊವನ್ನು @ShiviKashyapbjp ಎಂಬ ಹೆಸರಿನ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದನ್ನು ಇಲ್ಲಿಯವರೆಗೆ 88 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ, ಆದರೆ ಅನೇಕ ಜನರು ವಿಡಿಯೊವನ್ನು ಮರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಕ್ಯಾಂಪಸ್ನ ಸಂಸ್ಕೃತಿ ತುಂಬಾ ಕೆಟ್ಟದಾಗಿದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು ಅಧ್ಯಯನದ ಹೆಸರಿನಲ್ಲಿ, ಈ ಜನರು ಅಶ್ಲೀಲತೆ ಸೆಂಟರ್ಗಳನ್ನು ತೆರೆದಿದ್ದಾರೆ ಎಂದು ಬರೆದಿದ್ದಾರೆ.
ಇದನ್ನೂ ಓದಿ:ಅಬ್ಬಾ.. ಇದೆಂಥಾ ಅಚಾತುರ್ಯ! ಸಹಾಯಕ್ಕಾಗಿ 911ಗೆ ಕರೆ ಮಾಡಿದವನನ್ನೇ ಗುಂಡಿಕ್ಕಿ ಕೊಂದ ಪೊಲೀಸರು!
ಈ ಕಾರ್ಯಕ್ರಮವು ನವೆಂಬರ್ 8 ರಂದು ಅಮಿಟಿ ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದು, ಈ ಡಾನ್ಸ್ ಮಾಡಿದ ವಿದ್ಯಾರ್ಥಿನಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಈ ಘಟನೆಯ ನಂತರ ಕಾಲೇಜುಗಳಲ್ಲಿ ಇಂಥದ್ದಕ್ಕೆ ಅವಕಾಶ ಮಾಡಿಕೊಡುತ್ತಿರುವುದಕ್ಕಾಗಿ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.