Wednesday, 20th November 2024

Electric 2-Wheeler : ಎಲೆಕ್ಟ್ರಿಕ್ ಬೈಕ್‌ಗಳ ಮಾರಾಟದಲ್ಲಿ ದಾಖಲೆ ಬರೆದ ಭಾರತ; ಒಂದೇ ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಸೇಲ್‌!

Electric 2-Wheeler

ನವದೆಹಲಿ : ದಿನೇ ದಿನೆ ಏರುತ್ತಿರುವ ಪೆಟ್ರೋಲ್‌ ದರದಿಂದ ಬೇಸತ್ತ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದು, ಈ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಒಂದು ಮಿಲಿಯನ್ (10 ಲಕ್ಷ) ಮೈಲಿಗಲ್ಲನ್ನು ದಾಟಿದೆ. ಇದು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ( Electric 2-Wheeler) ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯಾಗಿದೆ. ಓಲಾ ಎಲೆಕ್ಟ್ರಿಕ್, ಟಿವಿಎಸ್, ಬಜಾಜ್ ಆಟೋ ಮತ್ತು ಏಥರ್ ಎನರ್ಜಿಗಳು ಮಾರುಕಟ್ಟೆಯ 83% ಪಾಲನ್ನು ಹೊಂದಿದ್ದು, ಓಲಾ ಎಲೆಕ್ಟ್ರಿಕ್ 37% ಮಾರಾಟದೊಂದಿಗೆ ಮುಂಚೂಣಿಯಲ್ಲಿದೆ. 1,82,035 ಯುನಿಟ್‌ಗಳ ಮಾರಾಟದೊಂದಿಗೆ ಮಹಾರಾಷ್ಟ್ರವು ಒಟ್ಟು ಮಾರಾಟದಲ್ಲಿ 18% ಪಾಲನ್ನು ಹೊಂದಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಮಾಹಿತಿ ಪ್ರಕಾರ 2024 ರ ಜನವರಿ 1 ರಿಂದ ನವೆಂಬರ್ 11 ರ ವರೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಒಟ್ಟು ಮಾರಾಟ ಒಂದು ಮಿಲಿಯನ್ (10 ಲಕ್ಷ) ದಾಟಿದೆ ಎಂದು ತಿಳಿದು ಬಂದಿದೆ.

ಪ್ರಸಕ್ತ ವರ್ಷದಲ್ಲಿ 1.1ರಿಂದ 1.2 ಮಿಲಿಯನ್ (10 ಲಕ್ಷ) ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಈ ವರ್ಷ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಮುಂಗಡವಾಗಿ ಕಾಯ್ದಿರಿಸಿರುವ ವಾಹನಗಳ ಸಂಖ್ಯೆಯು ಅಧಿಕವಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಮಾರಾಟವಾದ 860,410 ಯುನಿಟ್‌ಗಳು ಮಾರಾಟವಾಗಿದ್ದವು. ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವವರ ಸಂಖ್ಯೆ ಜೋರಾಗಿದ್ದು, ಮುಂದಿನ ವರ್ಷ ಶೇ 34 ರಷ್ಟು ಮಾರಾಟ ಹೆಚ್ಚಳವಾಗಲಿದೆ ಎಂದು ಊಹಿಸಲಾಗಿದೆ.

ಯಾವ ರಾಜ್ಯದಲ್ಲಿ ಎಷ್ಟು ಮಾರಾಟ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದು,
1,82,035 ಯುನಿಟ್‌ಗಳು ಮಾರಾಟವಾಗಿದೆ. ಹಾಗೂ ಶೇ 18ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ 1,57,631 ಯುನಿಟ್‌ ಮಾರಾಟವಾಗಿದ್ದು, ಎರಡನೇ ಸ್ಥಾನ ಪಡೆದುಕೊಂಡಿದೆ. (15.74%), ಕರ್ನಾಟಕವು 1,37,492 ಯುನಿಟ್‌ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ (13.73%), ತಮಿಳುನಾಡಿನಲ್ಲಿ 100,223 ಯುನಿಟ್‌ಗಳು ಮಾರಾಟವಾಗಿದೆ. (10%) ಇನ್ನು ರಾಜಸ್ಥಾನ, ಗುಜರಾತ್, ಕೇರಳ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿಯೂ ಗಮನಾರ್ಹವಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟವಾಗುತ್ತಿದೆ.

ಕಾರ್ಬನ್‌ ಡೈ ಆಕ್ಸೈಡ್‌ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಹಾಗೂ ಪರಿಸರವನ್ನು ಸುಸ್ಥಿರವಾಗಿಡಲು ಅನುಕೂಲವಾಗಿರುವ ಎಲೆಕ್ಟ್ರಿಕ್ ವಾಹನಗಳು ಕಡಿಮೆ ವೆಚ್ಚವನ್ನು ನೀಡುತ್ತವೆ. ಗಗನಕ್ಕೇರುತ್ತಿರುವ ಪೆಟ್ರೋಲ್‌ ಬೆಲೆಯ ವೆಚ್ಚವನ್ನು ಭರಿಸಲಾಗದ ಗ್ರಾಹಕರು ವಿದ್ಯುತ್‌ ಚಾಲಿತ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಇದನ್ನೂ ಓದಿ : Viral Video: ಸೈಕಲ್‌ನಲ್ಲಿ ಆಡುತ್ತಿದ್ದ ಬಾಲಕನ ಮೇಲೆ ಹರಿದ ಕಾರು; ಭೀಕರ ವಿಡಿಯೊ ಎಲ್ಲೆಡೆ ವೈರಲ್‌