ಬೆಲ್ಲದಿಂದ ಸಾಕಷ್ಟು ಪ್ರಯೋಜನವಿದೆ. ಹೆಚ್ಚಿನ ಸಿಹಿ ಖಾದ್ಯಗಳಿಗೆ ಬೆಲ್ಲವನ್ನು ಉಪಯೋಗಿಸುತ್ತಾರೆ. ಬೆಲ್ಲ(Jaggery Benefits) ಶ್ವಾಸಕೋಶವನ್ನು ಶುದ್ಧೀಕರಿಸುವ ಕೆಲಸವನ್ನು ಮಾಡುತ್ತದೆ. ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳಿಂದ ತುಂಬಿರುವ ಬೆಲ್ಲವು ಉಸಿರಾಟದ ಸಮಸ್ಯೆಗಳನ್ನು ಹೇಗೆ ನಿವಾರಿಸುತ್ತದೆ ಎಂಬುದನ್ನು ತಿಳಿಯಿರಿ.
ಶ್ವಾಸಕೋಶವನ್ನು ನಿರ್ವಿಷಗೊಳಿಸುತ್ತದೆ
ಬೆಲ್ಲವು ಶ್ವಾಸಕೋಶದಿಂದ ಹಾನಿಕಾರಕ ಜೀವಾಣುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂನಂತಹ ಖನಿಜಗಳಿಂದ ಸಮೃದ್ಧವಾಗಿರುವ ಬೆಲ್ಲ ಶ್ವಾಸಕೋಶದಲ್ಲಿ ಸಿಕ್ಕಿ ಬಿದ್ದ ಕಣಗಳು ಮತ್ತು ಧೂಳನ್ನು ಹೊರಹಾಕಲು ಉತ್ತೇಜಿಸುತ್ತದೆ.
ಲೋಳೆಯ ರಚನೆಯನ್ನು ಕಡಿಮೆ ಮಾಡುತ್ತದೆ
ಬೆಲ್ಲದ ಅತ್ಯಂತ ಮಹತ್ವವಾದ ಉಸಿರಾಟದ ಪ್ರಯೋಜನವೆಂದರೆ ಲೋಳೆಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ಉಸಿರಾಟದ ನಾಳದಿಂದ ಕಫವನ್ನು ಸಡಿಲಗೊಳಿಸುತ್ತದೆ ಮತ್ತು ತೆರವುಗೊಳಿಸುತ್ತದೆ. ಇದು ಉಸಿರಾಟವನ್ನು ಸುಲಭಗೊಳಿಸುವುದಲ್ಲದೆ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುತ್ತದೆ
ಬೆಲ್ಲವು ಸೆಲೆನಿಯಂನಂತಹ ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ. ಇದು ಫ್ರೀ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತದೆ. ಈ ಫ್ರೀ ರಾಡಿಕಲ್ಗಳು ಶ್ವಾಸಕೋಶದ ಅಂಗಾಂಶಗಳನ್ನು ಹಾನಿಗೊಳಿಸಬಹುದು ಮತ್ತು ಉರಿಯೂತಕ್ಕೆ ಕಾರಣವಾಗಬಹುದು.
ಉಸಿರಾಟದ ಸೋಂಕುಗಳ ವಿರುದ್ಧ ಹೋರಾಡುತ್ತದೆ
ವಾತಾವರಣದ ಮಾಲಿನ್ಯಕಾರಕ ಗಾಳಿಯಲ್ಲಿ ಸೋಂಕುಗಳಿರುತ್ತದೆ. ಇದನ್ನು ಉಸಿರಾಡಿದಾಗ ದೇಹವು ಉಸಿರಾಟದ ಸೋಂಕುಗಳಿಗೆ ಗುರಿಯಾಗುತ್ತದೆ. ಬೆಲ್ಲವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಿಂದ ಶ್ವಾಸಕೋಶದಲ್ಲಿ ಸೋಂಕನ್ನು ಉಂಟುಮಾಡುವಂತಹ ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ವಿರುದ್ಧ ಹೋರಾಡುತ್ತದೆ.
ಗಂಟಲಿನ ಕಿರಿಕಿರಿಯನ್ನು ನಿವಾರಿಸುತ್ತದೆ
ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ಗಂಟಲು ಕಿರಿಕಿರಿಗೆ ಒಳಗಾಗುತ್ತದೆ. ಬೆಲ್ಲವು ಗಂಟಲಿನ ಕಿರಿಕಿರಿಯನ್ನು ನಿವಾರಿಸುತ್ತದೆ. ಬೆಚ್ಚಗಿನ ನೀರಿನೊಂದಿಗೆ ಬೆಲ್ಲವನ್ನು ತಿಂದಾಗ ಇದು ಗಂಟಲಿನ ಮೇಲೆ ರಕ್ಷಣಾತ್ಮಕ ಲೇಪನವನ್ನು ರೂಪಿಸುತ್ತದೆ, ಕಿರಿಕಿರಿಗಳಿಂದ ಉಂಟಾಗುವ ಕೆಮ್ಮನ್ನು ಕಡಿಮೆ ಮಾಡುತ್ತದೆ.
ಶ್ವಾಸನಾಳದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ
ಬೆಲ್ಲದ ಉರಿಯೂತ ನಿವಾರಕ ಗುಣಲಕ್ಷಣಗಳು ಉಸಿರಾಟದ ನಾಳದಲ್ಲಿ ಊತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪರಿಹಾರವನ್ನು ನೀಡುತ್ತದೆ ಮತ್ತು ಇದರಿಂದ ಉಸಿರಾಡಲು ಸುಲಭವಾಗುತ್ತದೆ.
ಇದನ್ನೂ ಓದಿ: ಚಿಯಾ ಬೀಜಗಳನ್ನು ನೆನೆಸದೆ ಸೇವಿಸಿದರೆ ಏನಾಗುತ್ತದೆ ಗೊತ್ತಾ?
ಹಾಗಾಗಿ ನಿಮಗೆ ಯಾವುದೇ ರೀತಿಯ ಉಸಿರಾಟದ ಸಮಸ್ಯೆಗಳಿದ್ದರೆ ಪ್ರತಿದಿನ ಒಂದು ಸಣ್ಣ ತುಂಡು ಬೆಲ್ಲವನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸಿ, ಅಥವಾ ಶುಂಠಿ ಅಥವಾ ಅರಿಶಿನದೊಂದಿಗೆ ಸೇವಿಸಿ.