Sunday, 24th November 2024

Maharashtra Assembly Polls: ಕುಟುಂಬ ಸಮೇತರಾಗಿ ಮತ ಚಲಾಯಿಸಿದ ಸಚಿನ್

ಮುಂಬಯಿ: ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಕುಟುಂಬ ಸಮೇತರಾಗಿ ಮಹಾರಾಷ್ಟ್ರದಲ್ಲಿ  ಮತ ಚಲಾಯಿಸಿದರು. ಮಹಾರಾಷ್ಟ್ರದ 288 ಸ್ಥಾನಗಳಿಗೆ ಕ್ಷೇತ್ರಗಳಿಗೆ ಮತದಾನ(Maharashtra Assembly Polls) ನಡೆಯುತ್ತಿದೆ. 23ರಂದು ಫಲಿತಾಂಶ ಹೊರಬೀಳಲಿದೆ.

ಮತದಾನ ಮಾಡಿ ಹೊರಬಂದ ನಂತರ ಸಚಿನ್, ಪತ್ನಿ ಅಂಜಲಿ(Anjali Tendulkar) ಮತ್ತು ಮಗಳಾದ ಸಾರಾ(Sara Tendulkar) ಜತೆ ಬೆರಳಿಗೆ ಹಾಕಿದ ಶಾಹಿಯ ಗುರುತನ್ನು ತೋರಿಸಿ ಸಂಭ್ರಮ ಹಂಚಿಕೊಂಡರು. ಇದೇ ವೇಳೆ ಪ್ರತಿಯೊಬ್ಬರು ರಾಜ್ಯದ ಹಿತಾಸಕ್ತಿಯಿಂದ ಮತದಾನ ಮಾಡಲೇಬೇಕು ಎಂದು ಮನವಿ ಮಾಡಿದರು.  ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಉಪ ಮುಖ್ಯಮಂತ್ರಿ ಡಿವೈ ಅಜಿತ್‌ ಪವಾರ್‌, ಸುಪ್ರಿಯಾ ಸುಳೆ, ನಟ ಅಕ್ಷಯ್‌ ಕುಮಾರ್‌ ಸೇರಿದಂತೆ ಹಲವರು ಬೆಳಗ್ಗೆಯೇ ಬಂದು ಮತದಾನ ಮಾಡಿದ್ದಾರೆ.

ಇದನ್ನೂ ಓದಿ Sachin Tendulkar: ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್ ಸೇರಿದ ಸಚಿನ್

ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಡುವಿನ ಒಡಕು ನಂತರ ಒಟ್ಟು 158 ಪಕ್ಷಗಳು ಚುನಾವಣಾ ಕಣದಲ್ಲಿವೆ.

ಜಾರ್ಖಂಡ್​ನಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಇಲ್ಲಿ ಆಡಳಿತಾರೂಢ ಇಂಡಿಯಾ ಬ್ಲಾಕ್ ಮತ್ತು NDA ನಡುವೆ ಪೈಪೋಟಿ ಏರ್ಪಟ್ಟಿದೆ. ಜಾರ್ಖಂಡ್‌ನ ಒಟ್ಟು 81 ವಿಧಾನಸಭಾ ಸ್ಥಾನಗಳ ಪೈಕಿ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ನವೆಂಬರ್ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.