ನವದೆಹಲಿ: ಮದುವೆಯ ಸೀರೆ ಉಟ್ಟು ನವವಧು ರೈಲಿನಲ್ಲಿ ನೆಲೆದ ಮೇಲೆ ಕುಳಿತು ಪ್ರಯಾಣಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದ್ದು, ಇದನ್ನು ನೋಡಿ ಅನೇಕರು ಅವSಳ ಗಂಡನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ವವಧುವಿಗೆ ಪ್ರಯಾಣಿಸಲು ಆರಾಮದಾಯಕ ಆಸನ ಒದಗಿಸದ ಕಾರಣ ಅನೇಕರು ಕಾಮೆಂಟ್ ಮಾಡಿ, ಆತ್ಮೀಯ ಪೋಷಕರೇ ದಯವಿಟ್ಟು ನಿಮ್ಮ ಮಗಳಿಗೆ ಯೋಗ್ಯವಾದ ಜೀವನಶೈಲಿಯನ್ನು ಒದಗಿಸಲು ಸಾಧ್ಯವಾಗದ ವ್ಯಕ್ತಿಗೆ ಮದುವೆ ಮಾಡಬೇಡಿ. ಶೀಘ್ರದಲ್ಲೇ ಅಥವಾ ಅನಂತರದಲ್ಲಿ ಆರ್ಥಿಕ ಬಿಕ್ಕಟ್ಟು ಅವರ ದೈನಂದಿನ ಜಗಳಗಳಿಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.
ನವವಿವಾಹಿತ ಮಹಿಳೆಯೊಬ್ಬರು ರೈಲ್ವೇ ಕೋಚ್ನ ನೆಲದ ಮೇಲೆ ಪ್ರಯಾಣಿಸುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಮದುವೆಯ ಸೀರೆಯಲ್ಲಿ ನೆಲದ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಆಕೆಯ ಫೋಟೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕೆಯ ಗಂಡನನ್ನು ದೂಷಿಸಿದರು. ಲಕ್ಷ್ಯ ಚೌಧರಿ ಎಂಬವರು ಈ ಫೋಟೋವನ್ನು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ರೈಲಿನ ಫುಟ್ಬೋರ್ಡ್ನಲ್ಲಿ ಮದುವೆಯ ಸೀರೆಯಲ್ಲೇ ಮಹಿಳೆ ವಿಶ್ರಾಂತಿ ಪಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಆಕೆಯ ಸುತ್ತ ಸಾಕಷ್ಟು ಲಗೇಜ್ ಗಳು ಇದ್ದು, ಮಹಿಳೆ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವ ಫೋಟೋ ಅನೇಕರ ಗಮನ ಸೆಳೆದಿದೆ. ಇದಕ್ಕೆ ಚೌಧುರಿ ಆದಾಯವಿಲ್ಲ, ಮದುವೆಯಿಲ್ಲ ಎನ್ನುವ ಶೀರ್ಷಿಕೆಯನ್ನು ನೀಡಿದ್ದಾರೆ.
Dear parents please don't marry your daughter to a man who cannot afford a decent lifestyle for himself and also your daughter. Sooner or later economical crisis will become the reason for their daily fights.#InternationalMensDay pic.twitter.com/JmBrQmfbFH
— Potato!🚩 (@Avoid_potato) November 19, 2024
ಫೋಟೋದೊಂದಿಗೆ ಚೌಧುರಿ ಅವರು, ಕುಟುಂಬವನ್ನು ನಡೆಸಲು ಮತ್ತು ಸಂಗಾತಿಯನ್ನು ನೋಡಿಕೊಳ್ಳಲು ಸಾಕಷ್ಟು ಸಾಮರ್ಥ್ಯವಿರುವವರನ್ನು ಮಹಿಳೆಯರು ವಿವಾಹವಾಗಬೇಕು ಎಂದು ಹೇಳಿದ್ದು, ರೈಲ್ವೆ ಬೋಗಿಯಲ್ಲಿ ಮಹಿಳೆಯನ್ನು ಪ್ಯಾಸೇಜ್ ಏರಿಯಾದಲ್ಲಿ ನೆಲದ ಮೇಲೆ ಕೂರಿಸಿ ಪ್ರಯಾಣಿಸಿರುವುದಕ್ಕೆ ಖಂಡಿಸಿದ್ದಾರೆ. ಭಾರತದಲ್ಲಿ ವ್ಯಕ್ತಿಯ ಆದಾಯದಿಂದ ಮದುವೆಯನ್ನು ಅನುಮತಿಸಬೇಕು, ಸಂಗಾತಿಯನ್ನು ಹುಡುಕುವ ಮತ್ತು ವಿವಾಹದ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೊದಲು ಒಬ್ಬರ ಆದಾಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಚೌಧರಿ ಅವರ ಪ್ರಕಾರ 7 ಲಕ್ಷ ರೂ. ಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಮದುವೆಯಾಗಲು ಅನುಮತಿಸಬೇಕು. ಆದರೆ ಮಕ್ಕಳಿಗೆ ಜನ್ಮ ನೀಡುವುದನ್ನು ನಿರ್ಬಂಧಿಸಬೇಕು. ದಂಪತಿ ಮಗುವನ್ನು ಬೆಳೆಸಲು ಮತ್ತು ಅವರಿಗೆ ಉತ್ತಮ ಶಿಕ್ಷಣವನ್ನು ನೀಡಲು ಆರ್ಥಿಕವಾಗಿ ಸದೃಢವಾಗಿರುವುದಿಲ್ಲ ಎಂದು ಪರಿಗಣಿಸುತ್ತಾರೆ.
ಅಲ್ಲದೇ 15 ಲಕ್ಷ ರೂ. ಗಿಂತ ಹೆಚ್ಚು ಆದಾಯ ಹೊಂದಿರುವವರು ಎರಡು ಮಕ್ಕಳನ್ನು ಹೊಂದಬಹುದು.1 ಕೋಟಿ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು ಅನಿಯಮಿತ ಲೈಂಗಿಕತೆಯನ್ನು ಹೊಂದಬಹುದು ಎಂದು ಅವರು ಹೇಳಿದ್ದಾರೆ.
ಆದಾಯ ಮತ್ತು ಆರ್ಥಿಕ ಸ್ಥಿರತೆಯ ಆಧಾರದ ಮೇಲೆ ಜನರು ಮದುವೆಯಾಗಬೇಕು ಎಂದಿರುವ ಚೌಧರಿ ಹೇಳಿಕೆಗೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಇದರಲ್ಲಿ ಒಬ್ಬರು ಚೌಧುರಿ ಅವರನ್ನು “ವರ್ಗವಾದಿ” ಎಂದು ಟೀಕಿಸಿದರು. ಇದು ಅವರ ಇನ್ಸ್ಟಾಗ್ರಾಮ್ ಸ್ಟೋರಿ. ಅವರು ಎಷ್ಟು ಐಟಿಆರ್ ಸಲ್ಲಿಸುತ್ತಾರೆ ಎಂಬುದರ ಆಧಾರದ ಮೇಲೆ ಜನರಿಗೆ ಮದುವೆ ಮತ್ತು ಮಕ್ಕಳನ್ನು ಅನುಮತಿಸಬೇಕು ಎಂದು ಹೇಳುತ್ತಾರೆ. ಇವುಗಳು ಊಹಿಸಲಾದ ಹಕ್ಕುಗಳಾಗಿವೆ ಎಂಬುದನ್ನು ಮರೆತಿದ್ದಾರೆ ಎಂದಿದ್ದಾರೆ.
ಇನ್ನೊಬ್ಬರು, ಮನೆಯನ್ನು ನಿಭಾಯಿಸಲು ಮತ್ತು ಮಕ್ಕಳಿಗೆ ಯೋಗ್ಯವಾದ ಜೀವನಶೈಲಿಯನ್ನು ನೀಡಲು ಹಣವಿದ್ದರೆ ಮಾತ್ರ ಮದುವೆಯಾಗಿ ಮಕ್ಕಳನ್ನು ಪಡೆಯುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದ್ದಾರೆ.