ಮುಂಬೈ: ಷೇರು ಮಾರುಕಟ್ಟೆ(Stock Market)ಯಲ್ಲಿ ಕಳೆದ ಸೆಪ್ಟೆಂಬರ್ನಿಂದ ಸೂಚ್ಯಂಕಗಳು ಇಳಿಕೆಯ ಹಾದಿಯಲ್ಲಿ ಇರುವುದರಿಂದ ಹೂಡಿಕೆದಾರರು, (Top Stock picks) ಯಾವ ಷೇರುಗಳಲ್ಲಿ ಈಗ ಇನ್ವೆಸ್ಟ್ ಮಾಡಿದ್ರೆ ಲಾಭವನ್ನು ನಿರೀಕ್ಷೆ ಮಾಡಬಹುದು ಎಂಬ ಯೋಚನೆಯಲ್ಲಿದ್ದಾರೆ. ಏಕೆಂದರೆ ನಾನಾ ಷೇರುಗಳ ದರದಲ್ಲಿ 15-50% ಇಳಿಕೆಯಾಗಿದೆ. ನಿಫ್ಟಿ ಈ ಅವಧಿಯಲ್ಲಿ 11% ಕುಸಿತಕ್ಕೀಡಾಗಿದೆ. ಈ ಪ್ರಶ್ನೆಗೆ ಮಾರುಕಟ್ಟೆ ಸಂಶೋಧನಾ ಸಂಸ್ಥೆ ರಿಫಿನಿಟಿವ್ ವರದಿಯನ್ನು ಅಧರಿಸಿ ಇಕನಾಮಿಕ್ ಟೈಮ್ಸ್ ಸಿದ್ಧಪಡಿಸಿದ ಷೇರುಗಳ ಪಟ್ಟಿಯನ್ನು ನೋಡೋಣ.
ಈ ವರದಿಯ ಪ್ರಕಾರ, ಪ್ರದೀಪ್ ಫೋಸ್ಪೇಟ್ಸ್, ಪರ್ಲ್ ಗ್ಲೋಬಲ್, ಗಣೇಶ ಇಕೊಸ್ಪೇರ್, ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸ್, ಇನ್ನೋವಾ ಕ್ಯಾಪ್ ಟ್ಯಾಬ್, ದೀಪಕ್ ಫರ್ಟಿಲೈಸರ್ಸ್, ಮಾಸ್ಟೆಕ್, ತಿಲಕ್ನಗರ್ ಇಂಡಸ್ಟ್ರೀಸ್, ನೋಯ್ಲ್ಯಾಂಡ್ ಲ್ಯಾಬೊರೇಟರೀಸ್, ಉಷಾ ಮಾರ್ಟಿನ್ ಮುಂತಾದ ಷೇರುಗಳು ಹೂಡಿಕೆದಾರರಿಗೆ 10-37% ಲಾಭ ನೀಡುವ ನಿರೀಕ್ಷೆ ಇದೆ.
ಹಾಗಾದ್ರೆ ಈ ಎಲ್ಲ ಕಂಪನಿಗಳ ಸ್ಥಿತಿಗತಿ ಹೇಗಿವೆ ಎಂದು ನೀವು ಕೇಳಬಹುದು. ಈ ಕಂಪನಿಗಳ ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು 5,000 ಕೋಟಿ ರೂ.ಗಿಂತ ಹೆಚ್ಚು ಇದೆ. ಜತೆಗೆ ಮಾರುಕಟ್ಟೆ ಮಂದಗತಿಯಲ್ಲಿದ್ದರೂ, ಈ ಕಂಪನಿಗಳ ಷೇರುಗಳ ದರದಲ್ಲಿ ಸೆಪ್ಟೆಂಬರ್ 27ರ ಬಳಿಕ 10%ಗೂ ಹೆಚ್ಚು ಏರಿಕೆಯಾಗಿದೆ.
ಈಗ ಲಾಭದಾಯಕವಾಗಬಲ್ಲ ಷೇರುಗಳ ವಿವರಗಳನ್ನು ನೋಡೋಣ.
- ಪಾರಾದೀಪ್ ಫೋಸ್ಪೇಟ್ಸ್ ಕಂಪನಿಯ ಎಲ್ಟಿಪಿ ಅಥವಾ ಲಾಸ್ಟ್ ಟ್ರೇಡೆಡ್ ಪ್ರೈಸ್, ಅಂದರೆ ಷೇರಿನ ಇತ್ತೀಚಿನ ದರ 105 ರೂ.ಗಳಾಗಿದೆ. ಕಳೆದ ಸೆಪ್ಟೆಂಬರ್ನಿಂದ ಷೇರಿನ ದರದಲ್ಲಿ 26% ಏರಿಕೆಯಾಗಿದೆ. ಇದು ಇನ್ನೂ 28% ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ. ಇದು ಒಡಿಶಾ ಮೂಲದ ರಸಗೊಬ್ಬರ ಉತ್ಪಾದಕ ಕಂಪನಿಯಾಗಿದ್ದು, ಬೆಂಗಳೂರಿನಲ್ಲಿ ತನ್ನ ಕಾರ್ಪೊರೇಟ್ ಕಚೇರಿಯನ್ನು ಹೊಂದಿದೆ.
- ಪರ್ಲ್ ಗ್ಲೋಬಲ್ ಕಂಪನಿಯ ಈಗಿನ ಷೇರು ದರ 1095 ರೂ.ಗಳಾಗಿದ್ದು, 23% ಏರಿಕೆಯಾಗುವ ನಿರೀಕ್ಷೆ ಇದೆ. ಇದು ಬಹು ರಾಷ್ಟ್ರೀಯ ಜವಳಿ ಉತ್ಪಾದಕ ಕಂಪನಿಯಾಗಿದೆ. 20ಕ್ಕೂ ಹೆಚ್ಚು ಗಾರ್ಮೆಂಟ್ ಮಾನ್ಯುಫಾಕ್ಚರಿಂಗ್ ಯುನಿಟ್ಗಳನ್ನು ಒಳಗೊಂಡಿದೆ.
- ಗಣೇಶ ಇಕೊಸ್ಪೇರ್ ಕಂಪನಿಯ ಷೇರಿನ ಈಗಿನ ದರ 2,257 ರೂ.ಗಳಾಗಿದ್ದು, 23% ಏರಿಕೆಯಾಗುವ ಸಾಧ್ಯತೆ ಇದೆ.
- ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸ್ ಸಂಸ್ಥೆಯ ಷೇರಿನ ಈಗಿನ ದರ 906 ರೂ. ಆಗಿದ್ದು, 12% ಏರಿಕೆಯಾಗುವ ನಿರೀಕ್ಷೆ ಇದೆ.
- ಇನ್ನೋವಾ ಕ್ಯಾಪ್ಟ್ಯಾಬ್ ಷೇರಿನ ಈಗಿನ ದರ 931 ರೂ. ಆಗಿದ್ದು, 11% ಏರಿಕೆ ನಿರೀಕ್ಷಿಸಲಾಗಿದೆ.
- ದೀಪಕ್ ಫರ್ಟಿಲೈಸರ್ಸ್ ಷೇರಿನ ಈಗಿನ ದರ 1,272 ರೂ.ಗಳಾಗಿದ್ದು, 14% ಏರಿಕೆ ನಿರೀಕ್ಷಿಸಲಾಗಿದೆ.
- ಮಾಸ್ಟೆಕ್ ಷೇರಿನ ದರ 3,150 ರೂ.ಗಳಾಗಿದ್ದು, 11% ಏರಿಕೆ ನಿರೀಕ್ಷಿಸಲಾಗಿದೆ.
- ತಿಲಕ್ನಗರ್ ಇಂಡಸ್ಟ್ರೀಸ್ ಷೇರಿನ ದರ 343 ರೂ. ಆಗಿದ್ದು, 15% ಏರಿಕೆ ನಿರೀಕ್ಷಿಸಲಾಗಿದೆ.
- ನೋಯ್ಲ್ಯಾಂಡ್ ಲ್ಯಾಬೊರೇಟರೀಸ್ ಷೇರಿನ ದರ 14,889 ರೂ.ಗಳಾಗಿದ್ದು, 18% ಏರಿಕೆ ನಿರೀಕ್ಷಿಸಲಾಗಿದೆ.
- ಸ್ಕಿಪ್ಪರ್ ಷೇರಿನ ದರ 529 ರೂ.ಗಳಾಗಿದ್ದು, 21% ಏರಿಕೆಯಾಗುವ ಸಾಧ್ಯತೆ ಇದೆ. ಕೋಲ್ಕತಾ ಮೂಲದ ಈ ಕಂಪನಿಯು ಕಬ್ಬಿಣ ಮತ್ತು ಉಕ್ಕು ಉತ್ಪಾದಕ ಮತ್ತು ಪವರ್ ಟ್ರಾನ್ಸ್ಮಿಶನ್ ವಲಯದ ಕಂಪನಿಯಾಗಿದೆ.
- ವಾ ಟೆಕ್ ವಬಾಗ್ ಷೇರಿನ ದರ 1,696 ರೂ.ಗಳಾಗಿದ್ದು, 26% ಏರಿಕೆಯನ್ನು ನಿರೀಕ್ಷಿಸಲಾಗಿದೆ. ಚೆನ್ನೈ ಮೂಲದ ವಾ ಟೆಕ್ ವಾಬಾಗ್ ಕಂಪನಿಯು ವೇಸ್ಟ್ ವಾಟರ್ ಟ್ರೀಟ್ಮೆಂಟ್ ವಲಯದ ಉದ್ದಿಮೆಯನ್ನು ನಡೆಸುತ್ತಿದೆ.
- ಪಿರಮಲ್ ಫಾರ್ಮಾ ಷೇರಿನ ಈಗಿನ ದರ 250 ರೂ.ಗಳಾಗಿದ್ದು, 11% ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.
- ಪ್ರುಡೆಂಟ್ ಕಾರ್ಪೊರೇಟ್ ಷೇರಿನ ದರ 2,991 ರೂ. ಆಗಿದ್ದು, 10% ಏರಿಕೆ ನಿರೀಕ್ಷಿಸಲಾಗಿದೆ.
- ಉಷಾ ಮಾರ್ಟಿನ್ ಷೇರಿನ ದರ 395 ರೂ.ಗಳಾಗಿದ್ದು, 37% ಏರಿಕೆಯಾಗಿದೆ. ಕೋಲ್ಕತಾ ಮೂಲದ ಉಷಾ ಮಾರ್ಟಿನ್ ಕಂನಿಯು ಬಹು ರಾಷ್ಟ್ರೀಯ ಕಂಪನಿಯಾಗಿದೆ. ಹಾಗೂ ವೈರ್ ರೋಪ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ.
- ಜಿಇ ವರ್ನೋವಾ ಟಿ&ಡಿ ಷೇರಿನ ದರ 1,895 ರೂ.ಗಳಾಗಿದ್ದು, 14% ನಿರೀಕ್ಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Stock Market: ಡೊನಾಲ್ಟ್ ಟ್ರಂಪ್ ವಿಕ್ಟರಿ- ನಿಫ್ಟಿ 24,500ಕ್ಕೆ ಜಿಗಿಯಲಿದೆಯೇ?