Thursday, 21st November 2024

Viral Video: ಹೆರಿಗೆ ವಾರ್ಡ್‌ನಲ್ಲಿ ಮಹಿಳೆಯರ ಮುಂದೆಯೇ ಹಸ್ತಮೈಥುನ ಮಾಡ್ತಾ ವಿಕೃತಿ ಮೆರೆದ ಕಾಮುಕ; ವಿಡಿಯೊ ವೈರಲ್

Viral Video

ಡೆಹ್ರಾಡೂನ್‌: ಕಾಮಕ್ಕೆ ಕಣ್ಣಿಲ್ಲ ಎನ್ನುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಉತ್ತರಾಖಂಡದ ಕೋಟದ್ವಾರದ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿರುವ ಮಹಿಳೆಯರ ಮುಂದೆಯೇ ವ್ಯಕ್ತಿಯೊಬ್ಬ ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಂಡ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ಆಸ್ಪತ್ರೆಯಲ್ಲಿ ನರ್ಸ್ ಒಬ್ಬರನ್ನು ನೋಡಿ, ನಿಯಂತ್ರಣ ಕಳೆದುಕೊಂಡ ಯುವಕ ಈ ವಿಕೃತ ಕೃತ್ಯ ಮಾಡಿದ್ದಾನಂತೆ. ಮಹಿಳಾ ವಾರ್ಡ್ ಒಳಗೆ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ಯುವಕನನ್ನು ನೋಡಿ ಮಹಿಳಾ ರೋಗಿಗಳು ಕೂಗಿದಾಗ ಆತನು ಸ್ಥಳದಿಂದ ಪರಾರಿಯಾಗಿದ್ದಾನಂತೆ, ಯುವಕನ ಈ ಕೃತ್ಯವನ್ನು ಅಲ್ಲಿದ್ದ ಮಹಿಳಾ ರೋಗಿಯೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ.

ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮತ್ತು ವಕೀಲರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ. ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರಂತೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಈ ಘಟನೆಯ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ಅನೇಕರು ಕಾಮೆಂಟ್‌ ಮಾಡಿದ್ದಾರೆ. ಬಳಕೆದಾರರೊಬ್ಬರು “ಇದಕ್ಕಿಂತ ಹೆಚ್ಚು ಅಶ್ಲೀಲತೆಯನ್ನು ನೀವು ಎಲ್ಲಿ ಕಾಣಬಹುದು ? ಈ ಮಹಾನ್ ವ್ಯಕ್ತಿ ನರ್ಸ್ ಅನ್ನು ನೋಡಿದ ನಂತರ ರೋಮ್ಯಾಂಟಿಕ್ ಆಗಿ ಆಸ್ಪತ್ರೆಯಲ್ಲಿಯೇ ಹಸ್ತಮೈಥುನ ಮಾಡಿಕೊಂಡಿದ್ದಾರೆ., ಈ ಮೂರ್ಖನನ್ನು ಹಿಡಿಯಬೇಕು” ಎಂದಿದ್ದಾರೆ.

ಇದನ್ನೂ ಓದಿ:ಫ್ರೆಶರ್ಸ್ ಪಾರ್ಟಿ ವೇಳೆ ಟೀ ಶರ್ಟ್‌ ಬಿಚ್ಚಿ ಕುಣಿದ ವಿದ್ಯಾರ್ಥಿನಿ; ವಿಡಿಯೊ ವೈರಲ್‌ ಆಗ್ತಿದ್ದಂತೆ ನೆಟ್ಟಿಗರು ಫುಲ್‌ ಗರಂ!

“ಈ ದೇಶದಲ್ಲಿ ಕೆಲವು ಜನರ ಮಾನಸಿಕ ಸ್ಥಿತಿ ಹದಗೆಟ್ಟಿದೆ, ಸರಿಯಾದ ಚಿಕಿತ್ಸೆ ಸಮಯಕ್ಕೆ ಅಗತ್ಯವಾಗಿದೆ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.