ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಹಡಗು ನಿರೋಧಕ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆಯನ್ನು ಭಾರತ ಮಂಗಳ ವಾರ ಯಶಸ್ವಿಯಾಗಿ ಪೂರೈಸಿದೆ. ಭಾರತೀಯ ನೌಕಾಪಡೆಯ ಪರೀಕ್ಷಾರ್ಥ ಪ್ರಯೋಗಗಳ ಭಾಗವಾಗಿ ಈ ಕ್ಷಿಪಣಿ ಪರೀಕ್ಷೆ ನಡೆಸ ಲಾಗಿತ್ತು.
ಭೂಮಿ ಮೇಲೆ ದಾಳಿ ನಡೆಸಬಲ್ಲ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನು ಕೆಲವು ದಿನಗಳ ಹಿಂದಷ್ಟೇ ಯಶಸ್ವಿ ಯಾಗಿ ನೆರವೇರಿಸಲಾಗಿತ್ತು. 298 ಕಿ.ಮೀ.ನಿಂದ 450 ಕಿ.ಮೀ. ತನಕದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.
ಡಿಆರ್ಡಿಒ ಅಭಿವೃದ್ಧಿ ಪಡಿಸಿದ ಹಲವು ಕ್ಷಿಪಣಿಗಳನ್ನು ಸೇನೆ ಹೊಂದಿದ್ದು ಕ್ರಮವಾಗಿ ಪರೀಕ್ಷೆ ನಡೆಸುತ್ತ ಬಂದಿದೆ.