ಗ್ರೇಟರ್ ನೋಯ್ಡಾದ ಫ್ಲ್ಯಾಟ್ನ ಬಾಲ್ಕನಿಯಲ್ಲಿ ಮಹಿಳೆಯೊಬ್ಬಳು ತನ್ನ ಸಾಕು ನಾಯಿಯನ್ನು ಕ್ರೂರವಾಗಿ ಥಳಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಡಿಯೊವನ್ನು “ದಿ ಡಾಗ್ ಮದರ್” ಎಂದೂ ಕರೆಯಲ್ಪಡುವ ಕಾವೇರಿ ರಾಣಾ ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ.
“ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಫ್ಲಾಟ್ನಲ್ಲಿ ವಾಸಿಸುವ ಈ ಮಹಿಳೆ ನಾಯಿಯನ್ನು ಕ್ರೂರವಾಗಿ ಥಳಿಸಿದ್ದಾರೆ” ಎಂದು ಬರೆದು ಅವರು ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಈ ಮಹಿಳೆ ನಾಯಿಯನ್ನು ಹಿಂಸಿಸುತ್ತಿರುವ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ, ಮಹಿಳೆಯೊಬ್ಬರು ನಾಯಿಯನ್ನು ಹಿಡಿದುಕೊಂಡು ಪದೇ ಪದೇ ನೆಲಕ್ಕೆ ಹೊಡೆದಿದ್ದಾಳೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಾಣಿ ಪ್ರಿಯರು ನಾಯಿಯನ್ನು ರಕ್ಷಿಸಲು ಮತ್ತು ಅದರೊಂದಿಗೆ ಕೆಟ್ಟದಾಗಿ ವರ್ತಿಸಿದ ಮಹಿಳೆಗೆ ಶಿಕ್ಷೆ ನೀಡುವಂತೆ ಧ್ವನಿ ಎತ್ತಿದ್ದಾರೆ.
A #pet dog is brutally thrashed & beaten by this #evil woman living in Flat 1103, Vidhi Tower [T3], Mahagun Mantraa 1, Sector 10, West), Kheri Rd, Vaidpura, Greater Noida, Uttar Pradesh 203207. Can someone please please help the poor Animal 🙏 @CP_Noida Mam @DCPCentralNoida… pic.twitter.com/A9nPW763zx
— कावेरी राणा 🐾🐾 (@TheDogMother_) November 19, 2024
ಅವಳು ಆ ನಾಯಿಯನ್ನು ಶಿಕ್ಷಿಸುತ್ತಿರುವಂತೆಯೇ ಅವಳಿಗೂ ಶಿಕ್ಷೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ ” ಎಂದು ಒಬ್ಬರು ಬರೆದಿದ್ದಾರೆ. “ಮುಗ್ಧ ನಾಯಿಗಾಗಿ ನನ್ನ ಹೃದಯ ಮರುಗಿದೆ. ಅವಳನ್ನು ಬಂಧಿಸಿ ಮತ್ತು ಅವಳನ್ನು ಎಂದಿಗೂ ಪ್ರಾಣಿಯ ಬಳಿ ಬಿಡಬೇಡಿ” ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿರುವ ಕೇಂದ್ರ ನೋಯ್ಡಾದ ಡಿಸಿಪಿ, ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ. ಟಿಎಂಸಿ ನಾಯಕಿ ಮತ್ತು ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ, ನಟಿ ರವೀನಾ ಟಂಡನ್, ಹಿರಿಯ ಪತ್ರಕರ್ತ ವಿಷ್ಣು ಸೋಮ್ ಮತ್ತು ಇತರರು ಗ್ರೇಟರ್ ನೋಯ್ಡಾ ಸೊಸೈಟಿಯಲ್ಲಾದ ಈ ಆಘಾತಕಾರಿ ದೃಶ್ಯವನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ:ಆನ್ಲೈನ್ನಲ್ಲಿ ತರಕಾರಿ ಖರೀದಿಸೋ ಗ್ರಾಹಕರೇ ಎಚ್ಚರ…ಎಚ್ಚರ! ತೂಕದಲ್ಲಿ ನಡೀತಿದೆ ಭಾರೀ ಮೋಸ- ಈ ವಿಡಿಯೊ ನೋಡಿ
ಈ ನಡುವೆ, ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾ ಈ ಪೋಸ್ಟ್ಗೆ ಪ್ರತಿಕ್ರಿಯಿಸಿದೆ ಮತ್ತು ಅಗತ್ಯವಾದ ಸಹಾಯವನ್ನು ಖಚಿತಪಡಿಸಿಕೊಳ್ಳಲು ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ಬಳಕೆದಾರರನ್ನು ವಿನಂತಿಸಿದೆ ಎನ್ನಲಾಗಿದೆ.