-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಉಡುಪಿಗೆ ಮ್ಯಾಚ್ ಆಗುವಂಥ ವಿವಿಧ ವಿನ್ಯಾಸದ ಕಲರ್ಫುಲ್ ಗ್ಲೌವ್ಸ್ (Winter Gloves Fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕೈಗಳನ್ನು ಬೆಚ್ಚಗಿರಿಸಿ, ಚರ್ಮಕ್ಕೆ ರಕ್ಷಣೆ ನೀಡುವುದರ ಜತೆ ಫ್ಯಾಷನಬಲ್ ಲುಕ್ ನೀಡುವಂಥ ಗ್ಲೌವ್ಸ್ ಎಲ್ಲಾ ವಯೋಮಾನದವರನ್ನೂ ಸೆಳೆಯುತ್ತಿವೆ.
ವೈವಿಧ್ಯಮಯ ಗ್ಲೌವ್ಸ್
ಮಿಷನ್ ಮತ್ತು ಹ್ಯಾಂಡ್ ಮೇಡ್ ಗ್ಲೌವ್ಸ್ನಲ್ಲಿ ಫಿಂಗರ್ ಫುಲ್, ಫಿಂಗರ್ ಲೆಸ್ ಮತ್ತು ಬೆರಳುಗಳಿಂದ ಮೊಣಕೈವರೆಗೂ ಇರುವಂಥವು ಟ್ರೆಂಡಿಯಾಗಿವೆ. ಸಿಂಗಲ್, ಮಲ್ಟಿಕಲರ್, ಮಿಕ್ಸ್ ಕಲರ್, ರೇನ್ಬೋ ಕಲರ್, ಫೋಲ್ಕಾ ಡಾಟ್ಸ್ ರೆಟ್ರೋ ಸ್ಟೈಲ್ ಗ್ಲೌವ್ಸ್, ಮಿನಿ ಡಾಟ್, ಲೆಪರ್ಡ್ ಪ್ರಿಂಟ್, ಫರ್ ವ್ರಿಸ್ಟ್ ಫಂಕಿ ಗ್ಲೌವ್ಸ್ ಎಲಿಗೆಂಟ್ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರೀನಾ. ಅವರ ಪ್ರಕಾರ, ಇವುಗಳೊಂದಿಗೆ ನಾನಾ ಶೇಡ್ನ ವಿನೈಲ್, ಲ್ಯಾಟೆಕ್ಸ್, ನಿಟ್ರಿಲ್, ಸಿಲಿಕಾನ್, ಮ್ಯಾಜಿಕ್ಮೆನ್ಸ್, ಮಿಟ್ರಿಲ್, ಆಕ್ರ್ಯಾಲಿಕ್, ಡಿಸ್ಪೋಸಬಲ್ ಹೀಗೆ ಹಲವು ವೆರೈಟಿಗಳಲ್ಲೂ ಕಾಣಬಹುದು.
ಹ್ಯಾಂಡ್ಮೇಡ್ ಫಂಕಿ ಗ್ಲೌವ್ಸ್
ನಾನಾ ಬಗೆಯ ಸ್ಟ್ರೈಪ್ಸ್ನವು, ಹೂವು, ಎಲೆ, ಚಿಟ್ಟೆ, ಪಕ್ಷಿ, ಪ್ರಾಣಿಯ ಪುಟ್ಟ ಮುಖ, ಕಿವಿ, ಕಣ್ಣು, ಬಾಯಿ ಇರುವ ಹ್ಯಾಂಡ್ ಮೇಡ್ ವರ್ಕ್ ಇರುವ ಗ್ಲೌವ್ಸ್ ಮಹಿಳೆಯರನ್ನು ಹಾಗೂ ಮಕ್ಕಳನ್ನು ಹೆಚ್ಚಾಗಿ ಸೆಳೆಯುತ್ತಿವೆ. ಮೆತ್ತೆನೆಯ ಬಣ್ಣ ಬಣ್ಣದ ಉಲ್ಲರ್ ದಾರಗಳನ್ನು ಬಳಸಿ ವರ್ಕ್ ಮಾಡಿರುವ ಕಲರ್ಫುಲ್ ಹ್ಯಾಂಡ್ ಮೇಡ್ ಗ್ಲೌವ್ಸ್ ಹುಡುಗಿಯರನ್ನು ಸೆಳೆದಿವೆ ಎನ್ನುತ್ತಾರೆ ಮಾರಾಟಗಾರರಾದ ರಾಜನ್. ಇನ್ನು, ಟೂ ವೀಲರ್ ಚಾಲನೆ ಮಾಡುವ ಹುಡುಗಿಯರಿಗೆ ನವೀನ ವಿನ್ಯಾಸದ ಹ್ಯಾಂಡ್ಮೇಡ್ ನೆಟೆಡ್ ಫಂಕಿ ಗ್ಲೌವ್ಸ್ ಕೂಡ ಬಂದಿವೆ ಎನ್ನುತ್ತಾರೆ.
ಚಳಿಗಾಲದಲ್ಲಿ ಗೌವ್ಸ್ ಮಹತ್ವ
ಚಳಿಗಾಲದಲ್ಲಿ ಔಟಿಂಗ್ ಹೋದಾಗ, ಕೈಗಳನ್ನು ಚಳಿ-ಗಾಳಿಯಿಂದ ಸುರಕ್ಷತೆಯಿಂದ ಕಾಪಾಡಬೇಕಾದಲ್ಲಿ ಗ್ಲೌವ್ಸ್ಗಳನ್ನು ಧರಿಸುವುದು ಅತ್ಯಗತ್ಯ. ಶೀತಪ್ರದೇಶ ಹೊಂದಿರುವ ಪ್ರದೇಶಗಳಲ್ಲಿ ಗ್ಲೌವ್ಸ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇತ್ತೀಚೆಗೆ ಹುಡುಗ-ಹುಡುಗಿಯರೆನ್ನದೇ ಎಲ್ಲಾ ವರ್ಗದವರೂ ಕೂಡ ಧರಿಸುತ್ತಿದ್ದಾರೆ. ಕೆಲವರು ಫ್ಯಾಷನ್ ಲುಕ್ಗಾಗಿಯೂ ಧರಿಸುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀವಾ.
ಈ ಸುದ್ದಿಯನ್ನೂ ಓದಿ | Wedding Jewel Blouse Fashion: ವಿಂಟರ್ ವೆಡ್ಡಿಂಗ್ ಸೀಸನ್ನಲ್ಲಿ ಟ್ರೆಂಡಿಯಾದ 3 ಡಿಸೈನ್ನ ಜ್ಯುವೆಲ್ ಬ್ಲೌಸ್ಗಳಿವು
ಗ್ಲೌವ್ಸ್ ಧರಿಸುವವರ ಗಮನಕ್ಕೆ…
- ಚಳಿಗಾಲದಲ್ಲಿ ಬೈಕ್ ಚಾಲನೆ ಸಮಯದಲ್ಲಿ ಧರಿಸುವುದು ಉತ್ತಮ.
- ಅವರವರ ಕೈಗಳ ಅಳತೆಗೆ ತಕ್ಕಂತೆ ಸೆಲೆಕ್ಟ್ ಮಾಡಬೇಕು.
- ಉತ್ತಮ ಗುಣಮಟ್ಟದ ಗ್ಲೌವ್ಸ್ ಆಯ್ಕೆ ಮಾಡುವುದು ಬೆಸ್ಟ್.
- ವ್ಯಕ್ತಿತ್ವಕ್ಕೆ ಹೊಂದುವಂತದ್ದನ್ನು ಗುರುತಿಸಿ. ಧರಿಸಿ.
- ಉಡುಪಿಗೆ ಹೊಂದುವಂತದ್ದನ್ನು ಹಾಕಿಕೊಳ್ಳಿ.
- ಸದಾ ಗ್ಲೌವ್ಸ್ ಧರಿಸಕೂಡದು.
- ಟೂ ವೀಲರ್ ಚಾಲನೆ ಮಾಡುವವರು ಫರ್ ಇರುವ ಗ್ಲೌವ್ಸ್ ಧರಿಸದಿರುವುದು ಉತ್ತಮ. ಏಕೆಂದರೆ ಧೂಳು, ಹೊಗೆ ಫರ್ಗಳಿಗೆ ಬೇಗ ಅಂಟಿಕೊಳ್ಳುತ್ತವೆ.
- ಗ್ಲೌವ್ಸ್ ನಿರ್ವಹಣೆ ಸೂಕ್ತವಾಗಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)