Thursday, 21st November 2024

Viral News: 24 ವರ್ಷದ ಯುವಕ ವಾರಕ್ಕೆ 30 ಗಂಟೆ ದುಡಿದು 2.15 ಕೋಟಿ ರೂ. ಸಂಪಾದಿಸಿದ!

Viral News

ಅಮೆರಿಕದ 24 ವರ್ಷದ ಯುವಕನೊಬ್ಬ ವಾರಕ್ಕೆ 30 ಗಂಟೆ ದುಡಿದು 2.15 ಕೋಟಿ ರೂ. ಗಳಿಸಿದ್ದಾನೆ. ಈ ಕುರಿತು ಸುದ್ದಿಯೊಂದು (success story) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral News) ಆಗಿದೆ. ಅದು ಹೇಗೆ ಎಂಬುದನ್ನು ಆತ ಹೇಳಿರುವುದು ಹೀಗೆ. ಸ್ಟೀವನ್ ಗುವೊ (Steven Guo) ಎಂಬಾತ ಅಮೆರಿಕದಿಂದ ಬಾಲಿಗೆ (Bali) ತೆರಳಿ ವಾರಕ್ಕೆ ಕೇವಲ 30 ಗಂಟೆಗಳ ಕಾಲ ಕೆಲಸ ಮಾಡಿ ವರ್ಷಕ್ಕೆ 2,54,000 ಡಾಲರ್ ಅಂದರೆ ಸರಿಸುಮಾರು 2.15 ಕೋಟಿ ರೂ. ಗಳಿಸಿರುವುದಾಗಿ ಹೇಳಿಕೊಂಡಿದ್ದಾಳೆ.

ಕೆಲಸ ಮತ್ತು ಜೀವನದ ಸಮತೋಲನವನ್ನು ನಡೆಸಲು ತಾನು ಅಮೆರಿಕದಿಂದ ದೂರ ಹೋಗಿರುವುದಾಗಿ ಹೇಳಿದ ಸ್ಟೀವನ್ ಗುವೊ, ಇದಕ್ಕಾಗಿ ಬಾಲಿ ನಿಜವಾಗಿಯೂ ಅರ್ಥಪೂರ್ಣವಾದ ಸ್ಥಳವಾಗಿದೆ. ಇಲ್ಲಿ ಬೆಳಗ್ಗೆ ಹೆಚ್ಚಾಗಿ ವ್ಯಾಪಾರವನ್ನು ನಡೆಸಲು, ಮಧ್ಯಾಹ್ನ ಸರ್ಫಿಂಗ್, ಪ್ರವಾಸಕ್ಕೆ ಸಮಯ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ.

12ನೇ ವರ್ಷದಲ್ಲಿ ಮೊದಲ ವ್ಯಾಪಾರವನ್ನು ಪ್ರಾರಂಭಿಸಿರುವುದಾಗಿ ಹೇಳಿದ ಅವರು, ಮೈನ್ ಕ್ರಾಫ್ಟ್ ಸರ್ವರ್ ಖರೀದಿ ಮಾಡಿ ಅದರಲ್ಲಿ ಆಟವಾಡುವವರಿಂದ 50 ಡಾಲರ್ ಸಂಗ್ರಹಿಸಿದ್ದೆ. ಆಗ ನನಗೆ ಇಂಟರ್ನೆಟ್‌ನಿಂದ ಹಣವನ್ನು ಗಳಿಸಬಹುದೆಂದು ತಿಳಿದಿರಲಿಲ್ಲ. ಇದರಿಂದ 10,000 ಡಾಲರ್ ಗಳಿಸಿರುವುದಾಗಿ ಹೇಳಿದರು.

ಇದು ವಿಡಿಯೋ ಗೇಮ್‌ಗಳ ಬಗ್ಗೆ ಅವರ ಉತ್ಸಾಹವನ್ನು ಹೆಚ್ಚಿಸಿತು. ಇದರಲ್ಲಿ ಇನ್ನಷ್ಟು ಅನ್ವೇಷಿಸಲು, ಆಟದ ಅಭಿವೃದ್ಧಿ ಕಂಪನಿಯನ್ನು ಪ್ರಾರಂಭಿಸಲು ಯೋಜನೆ ರೂಪಿಸಿದರು. ಆದರೆ ಇದರಲ್ಲಿ ಅವರು ವಿಫಲರಾದರು. ಎಲ್ಲಾ ಹಣವನ್ನು ಕಳೆದುಕೊಂಡರು. ಆದರೆ ಇದರಿಂದ ಅಮೂಲ್ಯವಾದ ಅನುಭವ ಸಿಕ್ಕಿತು. ಯಾವುದೇ ವ್ಯವಹಾರಕ್ಕೆ ಮಾರ್ಕೆಟಿಂಗ್ ಅತ್ಯಂತ ಮುಖ್ಯವಾಗಿದೆ ಎಂಬುದನ್ನು ಅವರು ಕಂಡುಕೊಂಡರು.

ಈ ಅನುಭವವು ವ್ಯಾಪಾರವನ್ನು ಮುನ್ನಡೆಸಲು ಅವರಿಗೆ ಪ್ರೇರಣೆಯಾಯಿತು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಪಾರ ವಿಷಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ ಅವರು ಬಳಿಕ ಉದ್ಯಮಗಳ ಮೇಲೆ ಹೆಚ್ಚು ಗಮನಹರಿಸಿದರು. ಕಂಪೆನಿ ಕೆಲಸಗಳಿಂದ ಹೆಚ್ಚಿನ ಸಂಬಳ ಪಡೆಯುವುದು ಅಸಂಭವವೆಂದು ತಿಳಿದ ಅವರು ಸ್ವಂತ ವ್ಯವಹಾರಗಳಲ್ಲಿ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಲು ಪ್ರಾರಂಭಿಸಿದರು. ಪ್ರಸ್ತುತ ಅಮೆರಿಕದಾದ್ಯಂತ 19 ಉದ್ಯೋಗಿಗಳನ್ನು ಒಳಗೊಂಡಿರುವ ಕಂಪನಿಯನ್ನು ನಡೆಸುತ್ತಿದ್ದಾರೆ.

Viral News

ಕೆಲಸದ ದಿನ ಹೇಗಿರುತ್ತೆ?

ತಮ್ಮ ಕೆಲಸದ ಬಗ್ಗೆ ಮಾತನಾಡುವ ಅವರು, ತಾವು ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಆರು ಗಂಟೆಗಳ ಕಾಲ ಅಥವಾ ವಾರಕ್ಕೆ 30 ಗಂಟೆಗಳ ಕಾಲ ಕೆಲಸ ಮಾಡುವುದಾಗಿ ಹೇಳಿದ್ದಾರೆ. ತಮ್ಮ ಗ್ರಾಹಕರು ಮತ್ತು ಅವರ ಉತ್ಪನ್ನಗಳ ಮಾರುಕಟ್ಟೆ ಬಗ್ಗೆ ಸಂಶೋಧನೆಗೆ ತಮ್ಮ ಸುಮಾರು ಶೇ. 40ರಷ್ಟು ಸಮಯವನ್ನು ಕಳೆಯುತ್ತಿರುವುದಾಗಿ ಅವರು ಹೇಳಿದ್ದಾರೆ.

Bengal hospital: ಆಸ್ಪತ್ರೆಯಲ್ಲಿ ಬೀದಿನಾಯಿಗಳ ಪಾಲಾದ ಆರು ತಿಂಗಳ ಹಸುಗೂಸು!

ಅವರ ವ್ಯವಹಾರದಲ್ಲಿ ಆನ್‌ಲೈನ್ ಚಿಲ್ಲರೆ ವ್ಯಾಪಾರದ ಗ್ರಾಹಕರಿಗೆ ಮಾರಾಟದ ದಿನಾಂಕಗಳ ಹಂಚಿಕೆ, ಕೆ-ಪಾಪ್ ಪ್ರೇರಿತ ವ್ಯಾಪಾರ ಮಳಿಗೆ ಮತ್ತು ಐಷಾರಾಮಿ ಕಾರುಗಳಿಗಾಗಿ ಪ್ರೀಮಿಯಂ ಕಾರ್ ಕವರ್‌ಗಳನ್ನು ಮಾರಾಟ ಸೇರಿದೆ.
ಬಾಲಿಯಲ್ಲಿ ನೆಲೆಯಾಗುವ ಮೊದಲು ಅವರು 15 ದೇಶಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿರುವ ಅವರು, ಬಾಲಿಯ ಕೈಗೆಟಕುವ ಬೆಲೆ ಮತ್ತು ಸಮುದಾಯದಿಂದ ಪ್ರಭಾವಿತರಾಗಿರುವುದಾಗಿ ಹೇಳಿದ್ದಾರೆ.

ಸ್ನೇಹಿತರು ಮತ್ತು ಉದ್ಯಮಿಗಳೊಂದಿಗೆ ನಾಲ್ಕು ಬೆಡ್ ರೂಮ್ ನ ಮನೆಯನ್ನು ಹಂಚಿಕೊಂಡಿದ್ದಾರೆ. ಖಂಡಿತವಾಗಿಯೂ ಇಲ್ಲಿ ನಾನು ಹೆಚ್ಚು ಸಂತೋಷವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.