Thursday, 21st November 2024

Alia Bhatt: ‘ಅಮ್ಮಾ’ ಎಂದು ಕರೆದ ಆಲಿಯಾ ಭಟ್‌ ಮಗಳ ಮುದ್ದಾದ ದನಿಗೆ ಫಿದಾ ಆದ ನೆಟ್ಟಿಗರು ಹೇಳಿದ್ದೇನು? ವಿಡಿಯೊ ಇದೆ

Alia Bhatt

ಮುಂಬೈ : ಬಾಲಿವುಡ್ ನಟರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್(Alia Bhatt) ಅವರ ಮಗಳು ರಾಹಾ ಕಪೂರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಅಭಿಮಾನಿ ಬಳಗವನ್ನು ಹೊಂದಿದ್ದಾಳೆ. ಅಭಿಮಾನಿಗಳು ಅವಳ ಮುದ್ದು ಮುದ್ದಾದ ಮಾತು, ತುಂಟತನ ಕಂಡು ಮನಸೋತಿದ್ದಾರೆ. ಇತ್ತೀಚೆಗೆ, ನಟಿ ಆಲಿಯಾ ಭಟ್ ಸಿನಿಮಾ ಪ್ರಚಾರದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಮಗಳು ಅಮ್ಮಾ… ಎಂದು ಕರೆದಿದ್ದಾಳೆ. ಈ ವಿಡಿಯೊಗೆ ನೆಟ್ಟಿಗರು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.

ವಿಡಿಯೊದಲ್ಲಿ ನಟಿ ಆಲಿಯಾ ಭಟ್ ತಮ್ಮ ಸಿನಿಮಾದ ಪ್ರಚಾರ ಮಾಡಿದ್ದಾರೆ. ನಟಿ ಮಾತನಾಡುತ್ತಿರುವಾಗ ಹಿನ್ನಲೆಯಲ್ಲಿ ರಾಹಾ ಅಮ್ಮಾ ಎಂದು ಕೂಗುವ ಧ್ವನಿ ಕೇಳಿದೆ.  ಇದು ಅಭಿಮಾನಿಗಳ ಕಿವಿಗೆ ಬಿದ್ದಿದ್ದು, ಅನೇಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ರಾಹಾ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.  “ರಾಹಾ ಕಾಲಿಂಗ್ ಮಾ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು “ರಾಹಾ ಮಾ ಎಂದು ಕರೆಯುವ ರೀತಿ ಸೂಪರ್ ಆಗಿದೆ ” ಎಂದಿದ್ದಾರೆ. ಮೂರನೇ ಬಳಕೆದಾರರು “ರಾಹಾ ಧ್ವನಿ ಹಿನ್ನೆಲೆಯಲ್ಲಿ ಕೇಳಿದೆ” ಎಂದು ಹೇಳಿದ್ದಾರೆ. “……..ಅಯ್ಯೋ ಅಮ್ಮಾ ದಯವಿಟ್ಟು ಹೋಗಿ ಅವಳಿಗೆ ಉತ್ತರಿಸಿ” ಎಂದು ಮತ್ತೊಬ್ಬರು  ಕಾಮೆಂಟ್ ಮಾಡಿದ್ದಾರೆ.

ರಾಹಾಳ 2 ನೇ ವರ್ಷದ ಹುಟ್ಟುಹಬ್ಬದಂದು, ಆಲಿಯಾ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‍ನಲ್ಲಿ ತನ್ನ ಮತ್ತು ರಣಬೀರ್ ಅವರೊಂದಿಗಿನ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ:ಆನ್‍ಲೈನ್‌ನಲ್ಲಿ ತರಕಾರಿ ಖರೀದಿಸೋ ಗ್ರಾಹಕರೇ ಎಚ್ಚರ…ಎಚ್ಚರ! ತೂಕದಲ್ಲಿ ನಡೀತಿದೆ ಭಾರೀ ಮೋಸ- ಈ ವಿಡಿಯೊ ನೋಡಿ

ನಟಿ ಆಲಿಯಾ ಭಟ್ ಕೊನೆಯ ಬಾರಿಗೆ ವಾಸನ್ ಬಾಲಾ ಅವರ ಜಿಗ್ರಾ ಚಿತ್ರದಲ್ಲಿ ವೇದಾಂಗ್ ರೈನಾ ಅವರೊಂದಿಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೇ ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಅಂಡ್ ವಾರ್’ ನಲ್ಲಿ ವಿಕ್ಕಿ ಕೌಶಲ್ ಮತ್ತು ರಣಬೀರ್ ಅವರೊಂದಿಗೆ ನಟಿಸುತ್ತಿದ್ದಾರೆ.