Friday, 22nd November 2024

BBK 11: ಸೈಲೆಂಟ್ ಆಗಿದ್ದ ಚೈತ್ರಾ ಕುಂದಾಪುರ ಈಗ ಫುಲ್ ವೈಲೆಂಟ್: ಶಿಶಿರ್​ಗೆ ಸವಾಲು

Chaithra vs Shishir

ಕಳೆದ ವೀಕೆಂಡ್ ಕಳಿದ ಬಳಿಕ ಚೈತ್ರಾ ಕುಂದಾಪುರ (Chaithra Kundapura) ಬಿಗ್ ಬಾಸ್ ಮನೆಯಲ್ಲಿ ಫುಲ್ ಸೈಲೆಂಟ್ ಆಗಿದ್ದರು. ಶನಿವಾರ ಕಿಚ್ಚ ಸುದೀಪ್ ತೆಗೆದುಕೊಂಡ ಕ್ಲಾಸ್​ನ ನೋವು ಒಂದುಕಡೆಯಾದರೆ, ಮತ್ತೊಂದೆಡೆ ತನ್ನ ಬೆಸ್ಟ್ ಫ್ರೆಂಡ್ ಅನುಷಾ ರೈ ಮನೆಯಿಂದ ಎಲಿಮಿನೇಟ್ ಆದರು ಎಂಬ ದುಃಖ ಕೂಡ ಇತ್ತು. ಈ ಘಟನೆಯಿಂದ ಚೈತ್ರಾ ಮಂಕಾಗಿ ಹೋಗಿದ್ದರು. ತಮ್ಮನ್ನು ನಾಮಿನೇಟ್ ಮಾಡಿದರೂ ಅದಕ್ಕೆ ಯಾವುದೇ ಪ್ರತ್ಯುತ್ತರ ನೀಡದೆ ಎಲ್ಲದಕ್ಕೂ ಸರಿ, ಸರಿ ಎಂದರು. ಆದರೀಗ ಚೈತ್ರಾ ಮತ್ತೆ ವೈಲೆಂಟ್ ಆಗಿದ್ದಾರೆ.

ಸದ್ಯ ಬಿಗ್ ಬಾಸ್ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಂಗಡಿಸಲಾಗಿದೆ. ಎಲ್ಲ ಸ್ಪರ್ಧಿಗಳು ಗೇಮ್ ವೇಳೆ ಪಡೆದ ಪಾಯಿಂಟ್ಸ್ ಅನ್ನು ಕಾಪಾಡಿಕೊಳ್ಳಬೇಕು. ಅತಿ ಹೆಚ್ಚು ಪಾಯಿಂಟ್ಸ್ ಪಡೆದ ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತಾರೆ. ಹೀಗಾಗಿ ಸ್ಪರ್ಧಿಗಳು ಮೈಚಳಿ ಬಿಟ್ಟು ಆಡುತ್ತಿದ್ದಾರೆ. ಮೊದಲ ಎರಡು ದಿನ ಸೈಲೆಂಟ್ ಆಗಿದ್ದ ಚೈತ್ರಾ ಇದೀಗ ತಮ್ಮ ಆಟ ಶುರುಮಾಡಿಕೊಂಡಿದ್ದಾರೆ.

ಬಿಗ್​ ಬಾಸ್ ಎರಡು ತಂಡಗಳಿಗೆ ಟಾಸ್ಕ್​ವೊಂದನ್ನು ನೀಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ನಡೆಯುತ್ತಿರುವ ಈ ಟಾಸ್ಕ್​ನಲ್ಲಿ ಕೆಂಪು ತಂಡದಿಂದ ಮಂಜು, ರಜತ್ ಆಡಿದರೆ, ನೀಲಿ ಟೀಮ್‌ನಿಂದ ತ್ರಿವಿಕ್ರಮ್ ಮತ್ತು ಧರ್ಮ ಅವರು ಆಡುತ್ತಿದ್ದರು. ಇದೇ ವೇಳೆ ಶಿಶಿರ್ ಹಾಗೂ ಚೈತ್ರಾ ಕುಂದಾಪುರ ಮಧ್ಯೆ ಜೋರು ಗಲಾಟೆ ನಡೆದಿದೆ.

ಈ ಗಲಾಟೆ ಮಧ್ಯೆ ಶಿಶಿರ್​ಗೆ ಚೈತ್ರಾ ಕುಂದಾಪುರ ಸವಾಲ್​ ಹಾಕಿದ್ದಾರೆ. ಸೋಲುತ್ತೇವೆ ಅಂತ ಭಯ ಇದ್ದಾಗ ಹಿಂಗೆ ಆಡೋದು ಅಂತ ಚೈತ್ರಾ ಹೇಳಿದ್ದಾರೆ. ಆಗ ಶಿಶಿರ್​ ಬರಿ ಮಾತು ಮಾತು ಮಾತು ಅಂತ ಇದನ್ನೇ ಹೇಳುತ್ತಾ ಇರುತ್ತಾರೆ. ಆಗ ಚೈತ್ರಾ ಇದನ್ನೂ ಬಿಟ್ಟು ಬೇರೆ ಏನು ಹೇಳೋದಕ್ಕೆ ಬರುತ್ತೆ ನಿಮಗೆ ಅಂತ ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ಇದರಿಂದ ಮತ್ತಷ್ಟು ಕೆರಳಿದ ಶಿಶಿರ್, ಸುಮ್ನೆ ಹೋಗು ಆ ಕಡೆ ಎಂದು ಜೋರಾಗಿ ಕೂಗಾಡಿದ್ದಾರೆ. ಇದಕ್ಕೆ ಚೈತ್ರಾ ಮತ್ತಷ್ಟು ಕೋಪಗೊಂಡಿದ್ದಾರೆ. ನನಗೆ ಆ ಕಡೆ ಹೋಗು ಅಂತ ಹೇಳೋದಕ್ಕೆ ಯಾವ ಅಧಿಕಾರ ಕೂಡ ನಿಮಗಿಲ್ಲ. ಬಿಗ್ ಬಾಸ್ ನಿಮ್ಮ ಮನೆ ಅಲ್ಲ. ಆ ಕಡೆ ಹೋಗೋದಿಲ್ಲ ಇಲ್ಲೇ ನಿಂತುಕೊಳ್ಳುತ್ತೇನೆ ತಾಕ್​ ಇದ್ರೆ ತಡೀರಿ ನೋಡೋಣ ಎಂದು ಗಟ್ಟಿಯಾಗಿ ನಿಂತಿದ್ದಾರೆ.

BBK 11: ‘ನಾನು ಸಿಂಗಲ್​ ಸಿಂಹ’: ಬಿಗ್ ಬಾಸ್​ನಲ್ಲಿ ಗರ್ಜಿಸಿದ ಚೈತ್ರಾ ಕುಂದಾಪುರ