Friday, 22nd November 2024

IND vs AUS: ʻಭಾರತ ಎಂದಿಗೂ ಸೋಲಲ್ಲʼ-ಸೌರವ್‌ ಗಂಗೂಲಿ ದೊಡ್ಡ ಭವಿಷ್ಯ!

IND vs AUS: ʻWill never rule India outʼ-Sourav Ganguly predicts tight Border Gavaskar Trophy

ನವದೆಹಲಿ: ನ್ಯೂಜಿಲೆಂಡ್‌ ವಿರುದ್ದ ತವರು ಟೆಸ್ಟ್‌ ಸರಣಿಯಲ್ಲಿ (IND vs AUS) ಸೋಲು ಅನುಭವಿಸಿದ ಹೊರತಾಗಿಯೂ ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಗೆಲ್ಲಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ನಾಯಕ ಸೌರವ್‌ ಗಂಗೂಲಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯು ನವೆಂಬರ್‌ 22 ರಂದು ಶುಕ್ರವಾರ ಆರಂಭವಾಗಲಿದೆ. ಮೊದಲನೇ ಟೆಸ್ಟ್‌ ಪಂದ್ಯ ಪರ್ತ್‌ನ ಆಪ್ಟಸ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ಅಂದ ಹಾಗೆ ಈ ಬಾರಿ ಭಾರತ ತಂಡ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಸೋಲು ಅನುಭವಿಸಲಿದೆ ಎಂಬ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಸೇರಿದಂತೆ ಹಿರಿಯ ಬ್ಯಾಟ್ಸ್‌ಮನ್‌ಗಳು ಕಳಪೆ ಫಾರ್ಮ್‌ನಲ್ಲಿದ್ದಾರೆಂದು ಅವರು ಹೇಳಿದ್ದಾರೆ. ಆದರೆ, ಸೌರವ್‌ ಗಂಗೂಲಿ ಭಾರತ ತಂಡಕ್ಕೆ ಬೆಂಬಲವನ್ನು ನೀಡಿದ್ದಾರೆ.

IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್‌ಗಳು!

ಟೀಮ್‌ ಇಂಡಿಯಾ ಬಗ್ಗೆ ಗಂಗೂಲಿ ವಿಶ್ವಾಸ

ಯೂಟ್ಯೂಬ್‌ ಚಾನೆಲ್‌ವೊಂದರ ಜತೆ ಮಾತನಾಡಿದ ಸೌರವ್‌ ಗಂಗೂಲಿ, “ಭಾರತ ತಂಡ ಹಿನ್ನಡೆ ಅನುಭವಿಸಲಿದೆ ಎಂದು ನಾನು ಹೇಳುವುದಿಲ್ಲ. 2021ರಲ್ಲಿ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ. ಭಾರತ ಅಡಿಲೇಡ್‌ ಟೆಸ್ಟ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು ಹಾಗೂ ನಂತರ ವಿರಾಟ್‌ ಕೊಹ್ಲಿಗೆ ತವರಿಗೆ ಮರಳಿದ್ದರು. ಅಲ್ಲದೆ ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ ಹಾಗೂ ಆರ್‌ ಅಶ್ವಿನ್‌ ಕೂಡ ತಂಡದಲ್ಲಿರಲಿಲ್ಲ. ಆದರೆ, ನಮ್ಮ ಹುಡುಗರು ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿದ್ದರು ಹಾಗೂ ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಸೋಲಿಸಿತ್ತು. ಹಾಗಾಗಿ ಭಾರತ ತಂಡದಲ್ಲಿ ಅಸಾಧಾರಣ ಪ್ರತಿಭೆಗಳಿದ್ದಾರೆ, ಹಾಗಾಗಿ ಈ ಸರಣಿಯಲ್ಲಿ ನಮ್ಮ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ,” ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಅಸಾಧಾರಣ
“ಈ ಹುಡುಗರು ತುಂಬಾ ವಿಭಿನ್ನವಾಗಿದ್ದಾರೆ. ರಿಷಭ್‌ ಪಂತ್‌ ಹಾಗೂ ಶುಭಮನ್‌ ಗಿಲ್‌ ನಗ್ಗೆ ನಿಮಗೆ ಗೊತ್ತಿದೆ. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಬುಮ್ರಾ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆಂದು ನನಗೆ ತಿಳಿದಿದೆ. ಕೇವಲ ಬೌಲಿಂಗ್‌ ಮಾತ್ರವಲ್ಲ, ಆಟದ ಬಗೆಗಿನ ಅವರ ಚಿಂತನೆ ಇರುವುದು ಜಸ್‌ಪ್ರೀತ್‌ ಬುಮ್ರಾಗೆ ಇರುವುದು ಕೊಡುಗೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಈ ಸರಣಿ ಬಗ್ಗೆ ನಾನು ಜಾಸ್ತಿ ಹೇಳುವುದಿಲ್ಲ. ಎಲ್ಲವೂ ನಮ್ಮ ಪರ ನಡೆಯಲಿದೆ. ಇದೇ ನಮ್ಮ ಹುಡುಗರು ಕೂಡ ಯೋಚಿಸುತ್ತಾರೆ,” ಎಂದು ಸೌರವ್ ಗಂಗೂಲಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

IND vs AUS: ಜಸ್‌ಪ್ರೀತ್‌ ಬುಮ್ರಾ ಅಲ್ಲ, ಭಾರತ ತಂಡಕ್ಕೆ ಕೀ ಬೌಲರ್‌ ಹೆಸರಿಸಿದ ನೇಥನ್‌ ಲಯಾನ್‌!

ಪರ್ತ್‌ ಟೆಸ್ಟ್‌ಗೆ ರೋಹಿತ್‌-ಗಿಲ್‌ ಅಲಭ್ಯ

ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಅವರು ಪರ್ತ್‌ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಹಲವು ಬದಲಾವಣೆಗಳನ್ನು ನಾವು ನಿರೀಕ್ಷೆ ಮಾಡಬಹುದು. ಯಶಸ್ವಿ ಜೈಸ್ವಾಲ್‌ ಜೊತೆ ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಬಹುದು. ಗಿಲ್‌ ಅವರ ಮೂರನೇ ಸ್ಥಾನದಲ್ಲಿ ದೇವದತ್‌ ಪಡಿಕ್ಕಲ್‌ ಆಡಬಹುದು. ಇನ್ನು ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ನಿತೀಶ್‌ ರೆಡ್ಡಿ ಅವರಿಗೂ ಅವಕಾಶ ನೀಡಬಹುದು. ಇನ್ನು ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಹಾಗೂ ಆಕಾಶ ದೀಪ್‌ ಅವರು ಆಡಲಿದ್ದಾರೆ.