ಎಂಟನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಸ್ಪರ್ಧಿಗಳು ತಮ್ಮದೇ ಆದ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಸದ್ಯ ದೊಡ್ಮನೆಯೊಳಗೆ ಎರಡು ಗುಂಪುಗಳಾಗಿ ವಿಂಗಡಿಸಿ ಟಾಸ್ಕ್ ನಡೆಸಲಾಗುತ್ತಿದೆ. ಒಂದು ಗುಂಪಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ನಾಯಕಿಯಾದರೆ ಮತ್ತೊಂದು ಗ್ರೂಪ್ಗೆ ಭವ್ಯಾ ಗೌಡ ಕ್ಯಾಪ್ಟನ್ ಆಗಿದ್ದಾರೆ. ಈ ಎರಡು ಗುಂಪುಗಳ ನಡುವಣ ಟಾಸ್ಕ್ ಸಖತ್ ಮಜಾವಾಗಿದೆ.
ಭವ್ಯಾ ತಂಡದಲ್ಲಿ ತ್ರಿವಿಕ್ರಮ್, ಶಿಶಿರ್, ಗೋಲ್ಡ್ ಸುರೇಶ್, ಧರ್ಮಾ, ಮೋಕ್ಷಿತಾ ಹಾಗೂ ಐಶ್ವರ್ಯಾ ಇದ್ದಾರೆ. ಅತ್ತ ಶೋಭಾ ಟೀಮ್ನಲ್ಲಿ ಮಂಜು, ಹನುಮಂತ, ಧನರಾಜ್, ರಜತ್, ಗೌತಮಿ ಹಾಗೂ ಚೈತ್ರಾ ಕುಂದಾಪುರ ಇದ್ದಾರೆ. ಗೇಮ್ ವೇಳೆ ಪಡೆದ ಪಾಯಿಂಟ್ಸ್ ಅನ್ನು ಕಾಪಾಡಿಕೊಳ್ಳಬೇಕು. ಅತಿ ಹೆಚ್ಚು ಪಾಯಿಂಟ್ಸ್ ಪಡೆದ ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತಾರೆ.
ಇದಕ್ಕಾಗಿ ಎಲ್ಲ ಸ್ಪರ್ಧಿಗಳು ಕತ್ತಿನಲ್ಲಿ ಹಾಕಿಕೊಂಡು ಕಾಪಾಡಿಕೊಳ್ಳುತ್ತಿದ್ದಾರೆ. ಇದನ್ನು ಎದುರಾಳಿ ತಂಡ ಕಳ್ಳತನ ಮಾಡಬಹುದು ಎಂಬ ನಿಯಮ ಕೂಡ ಇದೆ. ಈ ವಿಚಾರದಲ್ಲಿ ಚಾಲಾಕಿತನ ಮೆರೆಯಲು ಹೋಗಿ ಭವ್ಯಾ ಗೌಡ ಕೈಸುಟ್ಟುಗೊಂಡಿದ್ದಾರೆ. ಹನುಮಂತು ಅವರ ಬಳಿ ಇರುವ ಪಾಯಿಂಟ್ಸ್ ಕದಿಯಲು ಬಾತ್ ರೂಮ್ನಲ್ಲಿ ಭವ್ಯಾ ಗೌಡ, ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಸ್ಕೆಚ್ ಹಾಕಿದ್ದಾರೆ. ಆದರೆ ಹನುಮಂತನಿಗೆ ಚಳ್ಳೆ ಹಣ್ಣು ತಿನಿಸೋದು ಅಷ್ಟು ಸುಲಭ ಅಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ.
ತಮ್ಮ ಬಳಿ ಇರುವ ಪಾಯಿಂಟ್ಸ್ ಕದಿಯಲು ಬರುತ್ತಿದ್ದಾರೆ ಎಂಬುದನ್ನು ಅರಿತ ಹನುಮಂತ, ಕಳ್ಳಿ ಇವಳು.. ಅಯ್ಯೋ ಕಳ್ಳಿ ಇವಳು.. ಅಂತ ಹಾಡು ಹೇಳಿ ಟಾಂಗ್ ನೀಡಿದ್ದಾರೆ. ಕತ್ತಿಗೆ ಸಿಕ್ಕಿಸಿಕೊಂಡಿದ್ದ ಪಾಯಿಂಟ್ಸ್ ಕದಿಯಲು ಮುಂದಾದಾಗ ಎಳೆದು ಕದಿಯುವಂತಿಲ್ಲ ಎಂದು ಹೇಳಿದ್ದಾರೆ. ಯಾರಿಗೂ ಕೂಡ ಪಾಯಿಂಟ್ಸ್ ಕದಿಯಲು ಹನುಮಂತ ಬಿಟ್ಟಿಲ್ಲ. ಇದನ್ನ ಕಂಡ ವೀಕ್ಷಕರು ಹನುಮಂತನ ಸೋಲಿಸೋದು ಅಷ್ಟೊಂದು ಸುಲಭವಲ್ಲ ಎಂದು ಮಾತನಾಡಿಕೊಂಡಿದ್ದಾರೆ.
ಐಶ್ವರ್ಯಾ ಪಾಯಿಂಟ್ಸ್ ಕದ್ದ ಚೈತ್ರಾ:
ಟಾಸ್ಕ್ ಬಳಿಕ ಎಲ್ಲರೂ ಕುಳಿತು ಸಹಜವಾಗಿ ಮಾತಾಡ್ತಿದ್ದ ವೇಳೆ ಚೈತ್ರಾ ಪಕ್ಕದಲ್ಲೇ ಕುಳಿತಿದ್ದ ಐಶ್ವರ್ಯಾ ಅವರ ಪರ್ಸ್ಗೆ ಮೆಲ್ಲನೇ ಕೈ ಹಾಕಿ ಪಾಯಿಂಟ್ಸ್ ಕದ್ದು ಪರಾರಿ ಆಗಿದ್ದಾರೆ. ಪಕ್ಕದಲ್ಲೇ ಇದ್ದ ಮಂಜು ತನ್ನದೇ ಟೀಮ್ನ ಚೈತ್ರಾಗೆ ಓಡಿ ಹೋಗು ಎಂದು ಹೇಳಿಕೊಟ್ಟಿದ್ದಾರೆ. ಪಾಯಿಂಟ್ಸ್ ಕದ್ದ ಚೈತ್ರಾ ಕುಂದಾಪುರ ಓಡಿ ಹೋಗಿ ಬಾತ್ ರೂಮ್ ಬಾಗಿಲು ಹಾಕಿಕೊಂಡರು. ಮಂಜು ಕೂಡ ಚೈತ್ರಾ ಜೊತೆ ಓಡಿ ಹೋಗಿ ಬಾತ್ ರೂಮ್ ನಲ್ಲಿ ಕುಳಿತರು. ಇದರ ನಡುವೆ ಚೈತ್ರಾ ಅವರು ಐಶ್ವರ್ಯಾ ಬಳಿ ಪಾಯಿಂಟ್ಸ್ ಕಿತ್ತುಕೊಂಡರು ಎಂಬ ಮಾತು ಬಂತು. ಇದಕ್ಕೆ ಗೌತಮಿ ಹಾಗೂ ಹನುಮಂತು ಅವರು, ಐಶ್ವರ್ಯಾಗೆ ತಿಳಿಯದಂತೆ ಪಾಯಿಂಟ್ಸ್ ಎತ್ತುಕೊಂಡಿದ್ದಾರಷ್ಟೆ ಎಂದು ಸಮರ್ಥನೆ ನೀಡಿದ್ದಾರೆ.
BBK 11: ಸೈಲೆಂಟ್ ಆಗಿದ್ದ ಚೈತ್ರಾ ಕುಂದಾಪುರ ಈಗ ಫುಲ್ ವೈಲೆಂಟ್: ಶಿಶಿರ್ಗೆ ಸವಾಲು