ಅಹಮದಾಬಾದ್: ಗುಜರಾತ್ನ ವಲ್ಸಾದ್ ಜಿಲ್ಲೆಯಲ್ಲಿ ಭಕ್ತರೊಬ್ಬರು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಾಗ ಹೃದಯಾಘಾತದಿಂದ ದೇವಾಲಯದ ಆವರಣದಲ್ಲಿ ಸಾವನ್ನಪ್ಪಿದ್ದಾರೆ. ಪ್ರಸಿದ್ಧ ಧಾರ್ಮಿಕ ಸ್ಥಳವಾದ ಪರ್ನೇರಾ ಡುಂಗರ್ನಲ್ಲಿರುವ ಮಹಾದೇವ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಮಹಾದೇವ ದೇವಸ್ಥಾನದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
વલસાડ :
— HIMANSHU PARMAR (@himanshu_171120) November 19, 2024
પારનેરા ડુંગર પર મંદિર પરિશરમાં પૂજા કરવા ગયેલા વ્યક્તિને હાર્ટઅટેક આવતા થયું મોત #Valsad #heartattack #Health #Death @irushikeshpatel @MoHFW_INDIA #GujaratiNews pic.twitter.com/jWIZhG58L8
ವೈರಲ್ ವಿಡಿಯೊದಲ್ಲಿ ದೇವಾಲಯದಲ್ಲಿ ಅಭಿಷೇಕ ಮಾಡುತ್ತಿರುವಾಗಲೇ ಭಕ್ತರೊಬ್ಬರು ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದಿದ್ದಾರೆ. ಸುತ್ತಮುತ್ತಲಿನ ಜನರು ಈ ಪರಿಸ್ಥಿತಿಯನ್ನು ನೋಡಿ ಅವರಿಗೆ ಸಿಪಿಆರ್ ನೀಡಲು ಶುರುಮಾಡಿದ್ದಾರೆ. ದುರದೃಷ್ಟವಶಾತ್, ಸಿಪಿಆರ್ ಹೊರತಾಗಿಯೂ, ಆ ವ್ಯಕ್ತಿ ಬದುಕುಳಿಯಲಿಲ್ಲ.
ವರದಿ ಪ್ರಕಾರ, ಮೃತನನ್ನು ವಲ್ಸಾದ್ನ ಸಣ್ಣ ಹಳ್ಳಿಯ ನಿವಾಸಿ ಕಿಶೋರ್ ಭಾಯ್ ಪಟೇಲ್ ಎಂದು ಗುರುತಿಸಲಾಗಿದೆ. ಕಿಶೋರ್ ಭಾಯ್ ಪಟೇಲ್ ಅವರು ಶಿವನ ಕಟ್ಟಾ ಭಕ್ತರಾಗಿದ್ದರು ಮತ್ತು ಅವರು ಪ್ರತಿದಿನ ಬೆಳಿಗ್ಗೆ ಪೂಜೆ ಮಾಡಲು ಮಹಾದೇವನ ದೇವಸ್ಥಾನಕ್ಕೆ ಹೋಗುತ್ತಿದ್ದರಂತೆ. ಇತರ ದಿನಗಳಂತೆ ಅಂದು ಕೂಡ ಬೆಳಿಗ್ಗೆ ಮಹಾದೇವನ ಆರತಿಯ ನಂತರ ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದರು. ಅದೇ ಸಮಯದಲ್ಲಿ, ಅವರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅವರ ಸಾವಿನಿಂದ, ಇಡೀ ಗ್ರಾಮ ಮತ್ತು ದೇವಾಲಯದ ಪ್ರದೇಶದಲ್ಲಿನ ಜನರು ಶೋಕದಲ್ಲಿ ಮುಳುಗುವಂತಾಗಿದೆ. ಅವರ ಕುಟುಂಬ ಸದಸ್ಯರು ಸಹ ಈ ಘಟನೆಯಿಂದ ತೀವ್ರ ದುಃಖಿತರಾಗಿದ್ದಾರೆ.
ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿವೆ. ಪ್ರಾಥಮಿಕ ವರದಿಗಳ ಪ್ರಕಾರ, ಕಿಶೋರ್ ಭಾಯ್ ಸಾವು ನ್ಯಾಚುರಲ್ ಆಗಿದ್ದು, ಹೃದಯಾಘಾತದಿಂದ ಸಾವನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ, ಆದರೆ ಮರಣೋತ್ತರ ವರದಿಯ ನಂತರ ಸಾವಿಗೆ ಕಾರಣ ತಿಳಿದುಬರಲಿದೆ. ಜೀವನವು ಯಾವಾಗ ಮತ್ತು ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.