ಮುಂಬೈ : ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ (AR Rahman) ಮತ್ತು ಸಾಯಿರಾ ಬಾನು (Saira Banu) ಇತ್ತೀಚೆಗೆ ತಮ್ಮ 29 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಅವರು , “ನಾವು 30 ವರ್ಷಗಳ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತೇವೆ ಎಂದು ಭಾವಿಸಿದ್ದೇವು. ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಛಿದ್ರವಾದ ಹೃದಯಗಳನ್ನು ನೋಡಿ ದೇವರೂ ಕೂಡ ನಡುಗಿಬಿಟ್ಟಿರುತ್ತಾನೆ. ಈ ಕಷ್ಟದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸುವ ಎಲ್ಲರಿಗೂ ಧನ್ಯವಾದ” ಎಂದು ಟ್ವೀಟ್ ಮಾಡಿದ್ದರು. ಅವರ ಈ ಪೋಸ್ಟ್ನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದರು. ಇದೀಗ ರೆಹಮಾನ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಅವರ ಅಭಿಮಾನಿಗಳ ದಿಲ್ ಖುಷ್ ಆಗುವಂತೆ ಮಾಡಿದೆ.
ಅಂತರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ಗೆಲುವನ್ನು ಸೂಚಿಸುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂನ (The goat life) ಆಡುಜೀವಿತಂನಲ್ಲಿನ ಕೆಲಸಕ್ಕಾಗಿ ಹಾಲಿವುಡ್ ಮ್ಯೂಸಿಕ್ ಇನ್ ಮೀಡಿಯಾ ಅವಾರ್ಡ್ಸ್ 2024 ರಲ್ಲಿ ವಿದೇಶಿ ಭಾಷೆಯ ಅತ್ಯುತ್ತಮ ಸ್ಕೋರ್ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಖುಷಿಯನ್ನು ತಮ್ಮ ಎಕ್ಸ್ನಲ್ಲಿ ಹಂಚಿಕೊಂಡ ಅವರು “ಸ್ಕೋರ್-ಸ್ವತಂತ್ರ ಚಲನಚಿತ್ರ (ವಿದೇಶಿ ಭಾಷೆ), ದಿ ಗೋಟ್ ಲೈಫ್ -ಎಆರ್ ರೆಹಮಾನ್” ಎಂದು ಬರೆದುಕೊಂಡಿದ್ದಾರೆ.
Score – Independent Film (Foreign Language)
— A.R.Rahman (@arrahman) November 21, 2024
The Goat Life – A. R. Rahmanhttps://t.co/835qBtzD01
ಗುರುವಾರ ಸಂಜೆ, ರೆಹಮಾನ್ ತಮ್ಮ ಬೆಂಬಲಕ್ಕೆ ನಿಂತಿರುವ ಚಿತ್ರತಂಡ ಮತ್ತು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುವ ವೀಡಿಯೊವನ್ನು ಸಹ ಬಿಡುಗಡೆ ಮಾಡಿದರು. ಮಾತನಾಡಿದ ಅವರು “ದಿ ಗೋಟ್ ಲೈಫ್ ಎಂಬ ವಿದೇಶಿ ಭಾಷೆಯ ಚಲನಚಿತ್ರಕ್ಕಾಗಿ ಅತ್ಯುತ್ತಮ ಸ್ಕೋರ್ಗಾಗಿ ಈ ಪ್ರಶಸ್ತಿಯನ್ನು ಪಡೆಯುವುದು ನಂಬಲಾಗದ ಗೌರವ. ಸ್ಕೋರ್ ಅನ್ನು ಗುರುತಿಸಿದ್ದಕ್ಕಾಗಿ ಹಾಲಿವುಡ್ ಸಂಗೀತ ಮತ್ತು ಮಾಧ್ಯಮ ಪ್ರಶಸ್ತಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಈ ಗೆಲುವನ್ನು ನಾನು ನನ್ನ ತಂಡದ ಸದ್ಯರು ಹಾಗೂ ಚಿತ್ರತಂಡಕ್ಕೆ ಸಮರ್ಪಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : AR Rahman: ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್ ಘೋಷಿಸಿದ ಪತ್ನಿ ಸೈರಾ ಬಾನು
ಇತ್ತೀಚೆಗೆ ತಮ್ಮ ಪತ್ನಿ ಸಾಯಿರಾ ಬಾನುರಿಂದ ವಿಚ್ಛೇದನ ಪಡೆದುಕೊಂಡರು. 1995ರಲ್ಲಿ ವಿವಾಹವಾಗಿದ್ದ ಈ ದಂಪತಿ ವೈಯಕ್ತಿಕ ಕಾರಣಗಳಿಗೆ ವಿಚ್ಛೇದನ ಪಡೆದುಕೊಂಡಿದೆ. ಮಂಗಳವಾರ ಸಂಜೆ ಸಾಯಿರಾ ಬಾನು ಪರ ವಕೀಲೆ ವಂದನಾ ಶಾ ಇವರಿಬ್ಬರ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದ್ದರು. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ.