Friday, 22nd November 2024

IPL Auction 2025: ಹರಾಜಿನಲ್ಲಿ ತಂಡವೊಂದಕ್ಕೆ ಇನ್ನು ಎಷ್ಟು ಆಟಗಾರರನ್ನು ಖರೀದಿಸಬಹುದು?

ಮುಂಬಯಿ: 10 ತಂಡಗಳು ಆಟಗಾರರ ರಿಟೇನ್‌ಗೆ ಈಗಾಗಲೇ 558.5 ಕೋಟಿ ರೂ. ವ್ಯಯಿಸಿದ್ದು, ಹರಾಜಿನಲ್ಲಿ ಇತರ ಆಟಗಾರರ ಖರೀದಿಗೆ ಒಟ್ಟು 641.5 ಕೋಟಿ ರೂ. ಉಳಿಸಿಕೊಂಡಿವೆ. ಪ್ರತಿ ತಂಡ ರಿಟೇನ್‌ ಮತ್ತು ಹರಾಜಿನಲ್ಲಿ ಆಟಗಾರರ ಖರೀದಿಗೆ ಒಟ್ಟಾರೆ 120 ಕೋಟಿ ರೂ. ಬಜೆಟ್‌ ಹೊಂದಿದೆ. ಪಂಜಾಬ್‌ ಕಿಂಗ್ಸ್‌ ತಂಡ ಗರಿಷ್ಠ 110.5 ಕೋಟಿ ರೂ. ಬಜೆಟ್‌ ನೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದೆ. 2 ದಿನಗಳ ಹರಾಜು ಪ್ರಕ್ರಿಯೆ(IPL Auction 2025) ನ.24ರಂದು ಆರಂಭವಾಗಲಿದೆ.

ಒಟ್ಟು 46 ಆಟಗಾರರನ್ನು 10 ತಂಡಗಳು ಉಳಿಸಿಕೊಂಡಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಮ್ಮ ಎಲ್ಲ ಆರು ರಿಟೇನ್‌ ಕೋಟಾವನ್ನು ಸಂಪೂರ್ಣ ಬಳಸಿಕೊಂಡಿದೆ. ಹೀಗಾಗಿ ಈ ತಂಡಗಳಿಗೆ ಆರ್‌ಟಿಎಂ ಕಾರ್ಡ್‌ ಬಳಸಲು ಅವಕಾಶವಿಲ್ಲ. ಇನ್ನು ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿ ಮಾಡಬಹುದೆಂಬ ಮಾಹಿತಿ ಇಂತಿದೆ. ತಂಡವೊಂದು ಗರಿಷ್ಠ 25 ಆಟಗಾರರನ್ನು ಮತ್ತು ಕನಿಷ್ಠ 18 ಆಟಗಾರರನ್ನು ಹೊಂದಬಹುದು. ಗರಿಷ್ಠ ಎಂಟು ವಿದೇಶಿ ಆಟಗಾರರನ್ನು ಖರೀದಿ ಮಾಡಬಹುದು.

ಪ್ರತಿ ತಂಡಕ್ಕೆ ಉಳಿದಿರುವ ಸ್ಲಾಟ್‌ಗಳು

ಚೆನ್ನೈ ಸೂಪರ್‌ ಕಿಂಗ್ಸ್‌: 20 ಆಟಗಾರರು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 22 ಆಟಗಾರರು

ಸನ್‌ರೈಸರ್ಸ್‌ ಹೈದರಾಬಾದ್‌: 20 ಆಟಗಾರರು

ಮುಂಬೈ ಇಂಡಿಯನ್ಸ್‌: 20 ಆಟಗಾರರು

ದಿಲ್ಲಿ ಕ್ಯಾಪಿಟಲ್ಸ್‌: 21 ಆಟಗಾರರು

ರಾಜಸ್ಥಾನ್‌ ರಾಯಲ್ಸ್‌: 19 ಆಟಗಾರರು

ಪಂಜಾಬ್‌ ಕಿಂಗ್ಸ್‌: 23 ಆಟಗಾರರು

ಕೋಲ್ಕತ್ತಾ ನೈಟ್‌ ರೈಡರ್ಸ್‌:19 ಆಟಗಾರರು

ಗುಜರಾತ್‌ ಟೈಟಾನ್ಸ್‌: 20 ಆಟಗಾರರು

ಲಕ್ನೋ ಸೂಪರ್‌ ಜೈಂಟ್ಸ್‌: 20 ಆಟಗಾರರು

ತಂಡಗಳ ಬಳಿ ಇರುವ ಮೊತ್ತ

1. ಪಂಜಾಬ್‌ ಕಿಂಗ್ಸ್‌-110.5 ಕೋಟಿ ರೂ.

2. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 83 ಕೋಟಿ ರೂ.

3. ಡೆಲ್ಲಿ ಕ್ಯಾಪಿಟಲ್ಸ್‌-73 ಕೋಟಿ ರೂ.

4. ಲಕ್ನೋ ಸೂಪರ್‌ ಜೈಂಟ್ಸ್‌-69 ಕೋಟಿ ರೂ.

5. ಗುಜರಾತ್‌ ಟೈಟಾನ್ಸ್‌- 69 ಕೋಟಿ ರೂ.

6. ಮುಂಬೈ ಇಂಡಿಯನ್ಸ್‌- 55 ಕೋಟಿ ರೂ.

7. ರಾಜಸ್ಥಾನ್‌ ರಾಯಲ್ಸ್‌-41ಕೋಟಿ ರೂ.

8. ಸನ್‌ರೈಸರ್ಸ್‌ ಹೈದರಾಬಾದ್‌-45 ಕೋಟಿ ರೂ.

9. ಚೆನ್ನೈ ಸೂಪರ್‌ ಕಿಂಗ್ಸ್‌-55 ಕೋಟಿ ರೂ.

10. ಕೋಲ್ಕತ್ತಾ ನೈಟ್‌ ರೈಡರ್ಸ್‌-51 ಕೋಟಿ ರೂ.