ದೇಹದಲ್ಲಿ ಎಲ್ಡಿಎಲ್ ಮಟ್ಟ ಅಂದರೆ ಕೆಟ್ಟ ಕೊಲೆಸ್ಟ್ರಾಲ್ (Cholestrole Controle Tips) ಹೆಚ್ಚಾದಾಗ ಹೃದಯದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಇದನ್ನು ಕಡಿಮೆ ಮಾಡಲು ಹೆಚ್ಡಿಎಲ್ ಮಟ್ಟ(ಉತ್ತಮ ಕೊಲೆಸ್ಟ್ರಾಲ್)ವನ್ನು ಹೆಚ್ಚಿಸಿಕೊಳ್ಳಬೇಕು. ಬೀಜಗಳಲ್ಲಿನ ಆರೋಗ್ಯಕರ ಕೊಬ್ಬುಗಳು, ವಿಶೇಷವಾಗಿ ಒಮೆಗಾ -3 ಕೊಬ್ಬಿನಾಮ್ಲಗಳು ಹೆಚ್ಡಿಎಲ್ ಮಟ್ಟವನ್ನು ಸುಧಾರಿಸುತ್ತವೆ. ಹಾಗಾಗಿ ಆರೋಗ್ಯಕರ ಜೀವನಶೈಲಿಯ ಜೊತೆಗೆ ಈ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ಅಗಸೆ ಬೀಜಗಳು :
ಅಗಸೆ ಬೀಜಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲ ಮತ್ತು ಕರಗುವ ಫೈಬರ್ ಸಮೃದ್ಧವಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚಿಯಾ ಬೀಜಗಳು:
ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳಿಂದ ತುಂಬಿರುವ ಚಿಯಾ ಬೀಜಗಳು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸೂರ್ಯಕಾಂತಿ ಬೀಜಗಳು:
ಸೂರ್ಯಕಾಂತಿ ಬೀಜಗಳು ಫೈಟೊಸ್ಟೆರಾಲ್ಗಳನ್ನು ಹೊಂದಿರುತ್ತವೆ. ಇದು ಎಲ್ಡಿಎಲ್ ಮಟ್ಟವನ್ನು ಕಡಿಮೆ ಮಾಡಲ ಸಹಾಯ ಮಾಡುತ್ತದೆ. ಅವುಗಳಲ್ಲಿ ವಿಟಮಿನ್ ಇ ಕೂಡ ಸಮೃದ್ಧವಾಗಿದೆ, ಇದು ರಕ್ತನಾಳಗಳಲ್ಲಿ ಪ್ಲೇಕ್ ರಚನೆಯನ್ನು ತಡೆಯುತ್ತದೆ.
ಕುಂಬಳಕಾಯಿ ಬೀಜಗಳು:
ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಕೊಬ್ಬುಗಳು ಹೆಚ್ಚಾಗಿರುತ್ತವೆ. ಇವೆರಡೂ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ, ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ನಿರ್ಮಾಣವನ್ನು ಕಡಿಮೆ ಮಾಡುತ್ತದೆ.
ಎಳ್ಳಿನ ಬೀಜಗಳು
ಎಳ್ಳಿನ ಬೀಜಗಳು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಅವು ಸಸ್ಯ ಸ್ಟೆರಾಲ್ಗಳು ಮತ್ತು ಮೊನೊಸ್ಯಾಚುರೇಟೆಡ್ ಕೊಬ್ಬುಗಳನ್ನು ಸಹ ಹೊಂದಿರುತ್ತದೆ. ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಗಸಗಸೆ ಬೀಜಗಳು
ಗಸಗಸೆ ಬೀಜಗಳು ಆರೋಗ್ಯಕರ ಕೊಬ್ಬುಗಳು ಮತ್ತು ಸಸ್ಯ ಸ್ಟೆರಾಲ್ಗಳ ಮೂಲವಾಗಿದೆ. ಈ ಸಂಯುಕ್ತಗಳು ಎಲ್ಡಿಎಲ್ ಅನ್ನು ಕಡಿಮೆ ಮಾಡುವುದಲ್ಲದೆ ಹೆಚ್ಡಿಎಲ್ ಮಟ್ಟವನ್ನು ಹೆಚ್ಚಿಸುತ್ತವೆ.
ಮೆಂತ್ಯ ಬೀಜಗಳು
ಮೆಂತ್ಯ ಬೀಜಗಳಲ್ಲಿ ಕರಗುವ ನಾರು ಸಮೃದ್ಧವಾಗಿದೆ. ಇದು ಕರುಳಿನಲ್ಲಿರುವ ಕೊಲೆಸ್ಟ್ರಾಲ್ಗಳನ್ನು ನಿವಾರಿಸುತ್ತದೆ. ಅವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ, ಪರೋಕ್ಷವಾಗಿ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತವೆ.
ಇದನ್ನೂ ಓದಿ:ಬೆಳಗ್ಗೆ ಚಹಾ ಕುಡಿದರೆ ಸೈಡ್ ಎಫೆಕ್ಟ್ ಕೂಡ ಸಾಕಷ್ಟಿದೆ!
ನಿಮ್ಮ ದೈನಂದಿನ ಆಹಾರದಲ್ಲಿ ಈ ಬೀಜಗಳನ್ನು ಸೇರಿಸುವುದರಿಂದ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಬಹುದು. ಎಲ್ಡಿಎಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.