Friday, 22nd November 2024

Constipation Problem: ದೀರ್ಘಕಾಲ ಮಲ ವಿಸರ್ಜನೆ ಮಾಡದೇ ಹಿಡಿದಿಟ್ಟುಕೊಂಡರೆ ಏನಾಗುತ್ತದೆ?

Constipation Problem

ಕೆಲವರು ಮಲವಿಸರ್ಜನೆ ಸಮಸ್ಯೆಯನ್ನು ಎದುರಿಸುತ್ತಾರೆ. ಇನ್ನು ಕೆಲವರಿಗೆ ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಸರಿಯಾದ ಸಮಯಕ್ಕೆ ಮಲವಿಸರ್ಜನೆ ಮಾಡದಿದ್ದರೆ ನಮ್ಮ ದೇಹ ಹಲವು ರೋಗಗಳಿಗೆ ತುತ್ತಾಗುತ್ತದೆ. ಹಾಗಾದರೆ ಮಲ ವಿಸರ್ಜನೆ (Constipation Problem) ಮಾಡದಂತೆ ತಡೆಹಿಡಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಹೆಚ್ಚು ಕಾಲ ಮಲವನ್ನು ಹಿಡಿದಿಟ್ಟುಕೊಳ್ಳುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಮಲದಲ್ಲಿನ ನೀರು ಮತ್ತೆ ದೇಹಕ್ಕೆ ಸೇರಿಕೊಳ್ಳುತ್ತದೆ, ಇದರಿಂದ ಮಲ ಗಟ್ಟಿಯಾಗುತ್ತದೆ. ಇದು ಮಲಬದ್ಧತೆಗೆ ಕಾರಣವಾಗುತ್ತದೆ.  

Constipation Problem

ಹೆಚ್ಚು ಕಾಲ ಮಲವನ್ನು ಹಿಡಿದಿಟ್ಟುಕೊಳ್ಳುವುದರಿಂದ ಇದು  ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಅತಿಯಾದ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯುಬ್ಬರ ಸಮಸ್ಯೆ ಕಾಡುತ್ತದೆ. ಹಾಗೆಯೇ, ಇದರ ಒತ್ತಡ ಮೂತ್ರಕೋಶದ ಮೇಲೆ ಬಿದ್ದು, ಮೂತ್ರಕೋಶವನ್ನು ನಿಯಂತ್ರಿಸುವ ಸ್ನಾಯುಗಳಿಗೆ ಹಾನಿಯಾಗುತ್ತದೆ. ಇದು ಮೂತ್ರದ ಸೋರಿಕೆಗೆ ಕಾರಣವಾಗಬಹುದು.

ಮಲವನ್ನು ಹಿಡಿದಿಟ್ಟುಕೊಳ್ಳುವ ಜನರ ಹೊಟ್ಟೆ ಯಾವಾಗಲೂ ಊದಿಕೊಂಡಂತೆ ಇರುತ್ತದೆ.   ಅಲ್ಲದೇ ಅಲ್ಲಿ ಬ್ಯಾಕ್ಟೀರಿಯಾಗಳ ಸೋಂಕು ಉಂಟಾಗಿ ಇದರಿಂದ  ಕರುಳಿನ ಕ್ಯಾನ್ಸರ್ ಅಪಾಯ ಉಂಟಾಗಬಹುದು. ಮಲವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದರಿಂದ ಅದು ಒಣಗಿ ಗಟ್ಟಿಯಾಗುತ್ತದೆ. ಇದು ಮಲಬದ್ಧತೆ, ಮೂಲವ್ಯಾಧಿ ಮತ್ತು ಗುದನಾಳ ಒಡೆಯಲು ಕಾರಣವಾಗುತ್ತದೆ. ಇದರಿಂದ ರಕ್ತ ಕೂಡ ಬರಬಹುದು. ಇದರಿಂದ ರಕ್ತಹೀನತೆ ಸಮಸ್ಯೆ ಕಾಡುತ್ತದೆ.

Constipation Problem

ಅಲ್ಲದೇ ಮಲವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದರಿಂದ ಬ್ಯಾಕ್ಟೀರಿಯಾಗಳಿಂದ ಮಲದ ವಾಸನೆ ಹೆಚ್ಚಾಗಿ, ನೀವು ಮಲವಿಸರ್ಜನೆ ಮಾಡುವಾಗ ಕೆಟ್ಟ ವಾಸನೆ ಬರುತ್ತದೆ. ಇದರಿಂದ ಬೇರೆಯವರು ನಿಮ್ಮನ್ನು ನೋಡಿ ಅಸಹ್ಯಪಡಬಹುದು. ನೀವು ಮಲವನ್ನು ಹಿಡಿದಿಟ್ಟುಕೊಂಡರೆ ಅಪೆಂಡಿಕ್ಸ್ ಸಮಸ್ಯೆ ಕಾಡಬಹುದು. ಅಷ್ಟೇ ಅಲ್ಲದೇ ಕೆಳಹೊಟ್ಟೆಯಲ್ಲಿ ನೋವು, ಸುಡುವ ವೇದನೆ ಕಾಡಬಹುದು. ಮಲ ತುಂಬಿರುವುದರಿಂದ ನಿಮಗೆ ಹಸಿವಾಗುವುದಿಲ್ಲ. ಇದರಿಂದ ದೇಹ ಪೋಷಕಾಂಶಗಳ ಕೊರತೆಗೆ ಒಳಗಾಗಬಹುದು.

ಇದನ್ನೂ ಓದಿ:ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಒಂದು ತುಂಡು ಬೆಲ್ಲ ಸೇವಿಸಿ ನೋಡಿ!

ಹಾಗಾಗಿ ಪ್ರತಿದಿನ ಮಲವಿಸರ್ಜನೆ ಮಾಡುವುದರಿಂದ ದೇಹದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.ಜೊತೆಗೆ ಉತ್ತಮ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ದೂರ ಮಾಡಬಹುದು.