ಮುಂಬೈ: ಮುಂಬಯಿ ಷೇರು ಮಾರುಕಟ್ಟೆ(Stock Market) ಸಂವೇದಿ ಸೂಚ್ಯಂಕಗಳು ಶುಕ್ರವಾರ ಮತ್ತೆ ಚೇತರಿಕೆ ಕಂಡಿವೆ. ಸೆನ್ಸೆಕ್ಸ್ 2,000 ಅಂಕಗಳ (Sensex today)ಏರಿಕೆ ದಾಖಲಿಸಿ 79,117ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 557 ಅಂಕಗಳ ಏರಿಕೆಯೊಂದಿಗೆ 23,900ಕ್ಕೆ ದಿನದಾಟ ಪೂರ್ಣಗೊಳಿಸಿತು. ಆ ಮೂಲಕ ಹಿಂದಿನ ಸೆಷನ್‌ನಲ್ಲಿ ಐದು ತಿಂಗಳ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿದೆ. ಈ ಚೇತರಿಕೆ ಅಮೆರಿಕ ಕಾರ್ಮಿಕ ಮಾರುಕಟ್ಟೆಗೆ ಉತ್ತೇಜನ ನೀಡಲಿದೆ.
ICICI ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, SBI, Infosys, ITC, ಮತ್ತು L&T. ITC, TCS, ಭಾರ್ತಿ ಏರ್‌ಟೆಲ್ ಮತ್ತು ಬಜಾಜ್ ಫೈನಾನ್ಸ್‌ನಂತಹ ಇತರ ಷೇರುಗಳು ಸಹ ಗಣನೀಯ ಏರಿಕೆ ಕಂಡಿವೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಸುಮಾರು 3 ಪ್ರತಿಶತದಷ್ಟು ಏರಿದರೆ, ನಿಫ್ಟಿ ಬ್ಯಾಂಕ್, ಹಣಕಾಸು ಸೇವೆಗಳು, ಎಫ್‌ಎಂಸಿಜಿ, ಐಟಿ, ಮೆಟಲ್, ಹೆಲ್ತ್‌ಕೇರ್ ಮತ್ತು ತೈಲ ಮತ್ತು ಅನಿಲ ವಲಯಗಳು ಶೇಕಡಾ 1-2 ರಷ್ಟು ಲಾಭವನ್ನು ಕಂಡವು.
ಅದಾನಿ ಶೇರುಗಳಲ್ಲಿ ಚೇತರಿಕೆ
ಚೇತರಿಕೆ ಹಾದಿಯಲ್ಲಿದ್ದ ಷೇರುಪೇಟೆಗೆ ಗುರುವಾರ ‘ಅದಾನಿ’ ಬಿರುಗಾಳಿ ಅಪ್ಪಳಿಸಿತು. ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಲಂಚ ಮತ್ತು ವಂಚನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ತೀವ್ರವಾಗಿ ಕುಸಿದಿದ್ದವು. ಆದರೆ ಇಂದು ಭಾಗಶಃ ಚೇತರಿಕೆ ಕಂಡಿವೆ. ಮಧ್ಯಾಹ್ನ 1:40 ರ ಹೊತ್ತಿಗೆ, ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇಕಡಾ 3 ಕ್ಕಿಂತ ಹೆಚ್ಚು, ಅದಾನಿ ಗ್ರೀನ್ ಎನರ್ಜಿ ಶೇಕಡಾ 0.5 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಅದಾನಿ ಪೋರ್ಟ್ಸ್ ಶೇಕಡಾ 3 ಕ್ಕಿಂತ ಹೆಚ್ಚು, ಅಂಬುಜಾ ಸಿಮೆಂಟ್ಸ್ ಶೇಕಡಾ 4 ಕ್ಕಿಂತ ಹೆಚ್ಚು ಮತ್ತು ಅದಾನಿ ಪವರ್ ಸುಮಾರು ಶೇಕಡಾ 0.5 ಶೇ.ಕ್ಕಿಂತಲೂ ಹೆಚ್ಚು ಏರಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆ ಹೇಗಿದೆ?
ಜಾಗತಿಕ ಮಾರುಕಟ್ಟೆಗಳು ಸಹ ಚೇತರಿಕೆ ಕಂಡಿವೆ. ಅಮೆರಿಕದ ಡೌ ಜೋನ್ಸ್ ಶೇಕಡಾ 1.06 ರಷ್ಟು ಏರಿತು, ಎಸ್ & ಪಿ 500 ಶೇಕಡಾ 0.53 ರಷ್ಟು ಲಾಭ ಗಳಿಸಿತು. ಏಷ್ಯಾದ ಮಾರುಕಟ್ಟೆಗಳು ಹೆಚ್ಚಾಗಿ ಸಕಾರಾತ್ಮಕವಾಗಿದ್ದು, ಜಪಾನ್‌ನ ನಿಕ್ಕಿ ಶೇಕಡಾ 0.68 ರಷ್ಟು ಏರಿಕೆಯಾಗಿದೆ. ಆದಾಗ್ಯೂ, CSI 300 ಮತ್ತು ಶಾಂಘೈ ಕಾಂಪೋಸಿಟ್‌ನಂತಹ ಚೀನೀ ಸೂಚ್ಯಂಕಗಳು ಶೇಕಡಾ 3 ಕ್ಕಿಂತ ಹೆಚ್ಚು ಕುಸಿದವು ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇಕಡಾ 2.14 ರಷ್ಟು ಕುಸಿಯಿತು. UKಯ FTSE 100 ಕೂಡ 0.79 ಶೇಕಡಾ ಏರಿಕೆಯಾಗಿದೆ.
ಈ ಸುದ್ದಿಯನ್ನೂ ಓದಿ: Stock Market: ಈ ಷೇರುಗಳಲ್ಲಿ ಹೂಡಿದ್ರೆ 10-37% ಲಾಭ ಸಾಧ್ಯತೆ!