Friday, 22nd November 2024

Viral Video: ಹಸುವಿನ ಗುದದ್ವಾರದೊಳಗೆ 2.5 ಅಡಿ ಉದ್ದದ ಕೋಲು ತುರುಕಿಸಿ ವಿಕೃತಿ ಮೆರೆದ ದುರುಳರು – ಈ ವಿಡಿಯೋ ಕಂಡವರೆಲ್ಲರೂ ಶಾಕ್!

ನೊಯ್ಡಾ: ಈ ಜಗತ್ತಿನಲ್ಲಿ ಯಾವೆಲ್ಲಾ ರೀತಿಯ ವಿಕೃತ ಮನಸ್ಸಿನ ವ್ಯಕ್ತಿಗಳಿರುತ್ತಾರೆ ಎಂಬುದನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಕೆಲವೊಂದು ಘಟನೆಗಳು ಬೆಳಕಿಗೆ ಬಂದಾಗ, ಮನುಷ್ಯರಲ್ಲಿ ಇಂತವರೂ ಇರ್ತಾರಾ..? ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರನ್ನು ಕಾಡದೇ ಇರದು. ಅದಕ್ಕೊಂದು ನಿದರ್ಶನವೆಂಬಂತೆ ಇಲ್ಲೊಬ್ಬ ವಿಕೃತ ಮನಸ್ಸಿ ವ್ಯಕ್ತಿ ದನದ ಗುದದ್ವಾರಕ್ಕೆ ಮರದ ಕೋಲನ್ನು ತುರುಕಿಸಿ ವಿಕೃತಿಯನು ಮೆರೆದಿದ್ದು, ಇದೀಗ ಪಶುವೈದ್ಯರು ಆ ಕೋಲನ್ನು ಹಸುವಿನ ಗುದದ್ವಾರದಿಂದ ಹೊರ ತೆಗೆದಿದ್ದಾರೆ. ಈ ಘಟನೆ ಮತ್ತು ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಎಲ್ಲೆಡೆ ವೈರಲ್‌ (Viral Video) ಆಗುತ್ತಿದೆ.

ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಈ ಅಮಾನವೀಯ ಘಟನೆ ನೊಯ್ಡಾದಲ್ಲಿ (Noida) ನಡೆದಿರುವುದಾಗಿ ವರದಿಯಾಗಿದ್ದು, ಇಲ್ಲಿನ ಹಲ್ಡ್‌ ವಾನಿಯ (Haldwani) ಅಲಿ ವರ್ದಿಪುರ್‌ (Ali Vardipur) ಎಂಬಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ದನವೊಂದನ್ನು ನಂದಿ ಸೇವಾ ಟ್ರಸ್ಟ್‌  ನ ಕಾರ್ಯಕರ್ತರು ಪಶು ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ತೀರಾ ಅಸ್ವಸ್ಥಗೊಂಡಿದ್ದ ಹಸುವಿನ ಸ್ಥಿತಿ ಚಿಂತಾಜನಕವಾಗಿತ್ತು.

ಪಟ್ವಾರಿಯ ಸೆಕ್ಟರ್‌ ೩ರಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ಈ ಹಸುವನ್ನು ಆಂಬುಲೆನ್ಸ್‌ ಮೂಲಕ ಕರೆತರಲಾಗಿದೆ. ಬಳಿಕ ಪಶುವೈದ್ಯರು ವಿವಿಧ ತಪಾಸಣೆಗಳನ್ನು ನಡೆಸಿ ಸಮಸ್ಯೆ ಏನೆಂದು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲೇ ಅವರಿಗೆ ಹಸುವಿನ ಗುದದ್ವಾರದೊಳಗೆ 2.5 ಅಡಿ ಉದ್ದದ ಕೋಲಿರುವುದು ಗೊತ್ತಾಗಿದೆ.

ಈ ರೀತಿಯ ಅಸುರಿ ಪ್ರವೃತ್ತಿಯ ಕೃತ್ಯ ಅಲ್ಲಿದ್ದವರೆಲ್ಲರನ್ನೂ ಒಮ್ಮೆಗೆ ಬೆಚ್ಚಿ ಬೀಳಿಸಿದೆ. ಹಸುವಿನ ಪ್ರಾಣ ಉಳಿಯಬೇಕಾದರೆ ವೈದ್ಯರು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿತ್ತು. ಈ ರೀತಿಯಾಗಿ ಪಶುವೈದ್ಯರು ಹಸುವಿನ ಗುದದ್ವಾರದಿಂದ ಈ ಕೋಲನ್ನು ಸುರಕ್ಷಿತವಾಗಿ ಹೊರತೆಗೆಯುವ ಮೂಲಕ ಹಸುವಿನ ಪ್ರಾಣವನ್ನು ಉಳಿಸಿದ್ದಾರೆ. ಸದ್ಯಕ್ಕೆ ಹಸು ಪ್ರಾಣಾಪಾಯದಿಂದ ಪಾರಾಗಿದ್ದರೂ, ಹಸುವಿ ಪರಿಸ್ಥಿತಿ ಇನೂ ಚಿಂತಾಜನಕವಾಗಿದೆ.

ಇದನ್ನೂ ಓದಿ: IND vs AUS: 26 ರನ್‌ಗೆ ಔಟಾದರೂ ವಿಶೇಷ ದಾಖಲೆ ಬರೆದ ಕನ್ನಡಿಗ ಕೆಎಲ್‌ ರಾಹುಲ್‌!

ಹಸುವಿನ ಗುದದ್ವಾರದಿಂದ ಕೋಲನ್ನು ತೆಗೆಯುತ್ತಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮತ್ತು ದುರುಳರ ಈ ಘೋರ ಕೃತ್ಯಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಈ ಕೃತ್ಯ ಎಸಗಿರುವ ಶಂಕಿತರ ವಿರುದ್ಧ ಟ್ರಸ್ಟ್‌ ನವರು ಇಕೋಟೆಕ್‌ 3 ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಒಟ್ಟಿನಲ್ಲಿ ಮೂಕ ಪ್ರಾಣಿಯೊಂದರ ಮೇಲೆ ಅದರಲ್ಲೂ ನಮಗೆ ಹಾಲು ಕೊಡುವ ದನದ ಮೇಲೆ ಈ ರೀತಿಯ ಪೈಶಾಚಿಕ ಕೃತ್ಯ ಎಸಗಿರುವ ದುರುಳನಿಗೆ ಸರಿಯಾದ ಶಿಕ್ಷೆಯಾಗಬೇಕೆಂಬುದು ಎಲ್ಲರ ಆಗ್ರಹವಾಗಿದೆ.