Friday, 22nd November 2024

Appeal: ವಕೀಲರ ರಕ್ಷಣೆಗಾಗಿ ಘನವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ

ಚಿಂಚೋಳಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ವಕೀಲರಿಂದ ಪ್ರತಿಭಟನೆ

ಚಿಂಚೋಳಿ: ತಮಿಳುನಾಡು ರಾಜ್ಯದ ಹೊಸೂರು ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬ ವಕೀಲರ ಮೇಲೆ ಬರಬರವಾಗಿ ಹಲ್ಲೆ ನಡೆಸಿರುವ ಘಟನೆಗೆ ಖಂಡಿಸಿ, ಚಿಂಚೋಳಿ ವಕೀಲರ ಸಂಘವು ಒಂದು ದಿನದ ನ್ಯಾಯಾಲಯ ಕಲಾಪಗಳಲ್ಲಿ ಭಾಗಿಯಾಗದೆ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕಲಾಪ ಬಹಿಷ್ಕರಿಸಿ, ಪಟ್ಟಣದ ನ್ಯಾಯಾಲಯ ಪ್ರವೇಶದ ಮುಖ್ಯದ್ವಾರಕ್ಕೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ, ರಾಷ್ಟ್ರದ ಘನವೆತ್ತ ರಾಷ್ಟ್ರಪತಿಗಳಿಗೆ ಚಿಂಚೋಳಿ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.

ಬಳಿಕ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಮಾತನಾಡಿ, ಭಾರತ ದೇಶದ ವಕೀಲರಿಗೆ ಕೇಂದ್ರ ಮತ್ತು ರಾಜ್ಯ ಸರಾಕರಗಳ ಗೃಹ ಇಲಾಖೆಗಳಿಂದ ರಕ್ಷಣೆ ಸಿಗುತ್ತಿಲ್ಲ. ಸಂವಿಧಾನ ರಕ್ಷಣೆ ಮತ್ತು ಅದರ ಬದ್ಧವತೆಯಂತೆ ನ್ಯಾಯಾ ಒದಗಿಸುವ ವಕೀಲ ವೃತ್ತಿ ಮಾಡುತ್ತಿರುವ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಲೆ ಇವೆ. ಕಳೆದ ಎರಡು ದಿನಗಳ ಹಿಂದೆ ನಡೆದ ತಮಿಳುನಾಡು ರಾಜ್ಯದ ಹೊಸೂರು ನ್ಯಾಯಾಲಯದಲ್ಲಿ ವೃತ್ತಿಯ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿ ತೋಡಗಿಕೊಂಡಿದ್ದ ವಕೀಲರ ಮೇಲೆ ವ್ಯಕ್ತಿಯೊಬ್ಬ ಬರಬರವಾಗಿ ಹಲ್ಲೆ ನಡೆಸಿದ್ದಾನೆ.

ಈ ಹಲ್ಲೆಯಿಂದ ವಕೀಲರ ವೃತ್ತಿಗೆ ಧಕ್ಕೆ ಬರುವುದಲ್ಲದೆ, ವೃತ್ತಿ ಮಾಡುವುದಕ್ಕೂ ಕಲಿಯುವುದಕ್ಕೂ ಹೆದರುವ ಪರಿಸ್ಥಿ ನಿರ್ಮಾಣವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಕೀಲರ ಮೇಲಿನ ಹಲ್ಲೆಗಳು ತಡೆಯಲಾಗುತ್ತಿಲ್ಲ. ಹೀಗಾಗಿ ಸರಕಾರ ವಕೀಲರ ಮೇಲಿನ ಹಲ್ಲೆಗಳ ವಿರುದ್ಧ ಗಂಭೀರ ಕ್ರಮಕೈಗೊಂಡು ವಕೀಲರಿಗೆ ರಕ್ಷಣೆ ಮಾಡುವ ಕ್ರಮಕೈಗೊಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಗೃಹ ಇಲಾಖೆಗೆ ಸೂಚನೆ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರರ ಮುಖಾಂತರ ಘನವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.

ಹಿರಿಯ ವಕೀಲ ವಿಶ್ವನಾಥ ಬೆನಕಿನ್, ಚಂದ್ರಶೆಟ್ಟಿ ಜಾಧವ್, ನಾಗಭೂಷಣ ಎಚ್, ಶ್ರೀನಿವಾಸ ಭಂಡಿ, ವಸಂತ ರಾಠೋಡ, ವಿಜಯಕುಮಾರ ರಾಠೋಡ, ದೀಲೀಪ ಚವ್ಹಾಣ, ಭೀಮಾಶಂಕರ ಕಳಸ್ಕರ್, ರಾಜಶೇಖರ ಉಡಗಿ, ಚಂದು ಮಲಸಾ, ಜಗನ್ನಾಥ ಗಂಜಗಿರಿ, ಶೇಕ್ ಭಕ್ತಿಯಾರ, ಮಾಣಿಕಾರವ ಅಣವಾರ, ಇರ್ಫಾನ ಮಾಲಿಪಾಟೀಲ, ದೇವೀಂದ್ರ ಜಾಬೀನ್, ರಾಜೇಂದ್ರ ವರಮಾ ಅವರು ಸೇರಿದಂತೆ ಹಲವು ವಕೀಲರು ಪ್ರತಿಭಟನೆಯಲ್ಲಿ ಉಪಸ್ಥಿತರಿದರು.