Friday, 22nd November 2024

Self Harming: ಬೆಂಗಳೂರಲ್ಲಿ ಶಾಕಿಂಗ್‌ ಘಟನೆ; ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ!

Self Harming

ಬೆಂಗಳೂರು: ಇಬ್ಬರು ಮಕ್ಕಳನ್ನು ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ (Self Harming) ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶುಭಂ ಸಾಹು (7), ಶಿಯಾ ಸಾಹು (3) ಕೊಲೆಯಾದ ಮಕ್ಕಳು ಎಂದು ಗುರುತಿಸಲಾಗಿದೆ. ಮಮತಾ ಸಾಹು, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿಯಾಗಿದ್ದಾರೆ.

ಜಾರ್ಖಂಡ್ ಮೂಲದ ಮಮತಾ ದಂಪತಿ ಕಳೆದ 6 ತಿಂಗಳಿಂದ ಸುಬ್ರಮಣ್ಯಪುರದಲ್ಲಿ ವಾಸವಿದ್ದರು. ಮಮತಾ ಪತಿ ಆಟೋ ಡ್ರೈವರ್‌ ಆಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದರು. ಇತ್ತೀಚಿಗೆ ದಂಪತಿ ನಡುವೆ ಗಲಾಟೆಯಾಗಿ, ಮಮತಾ ಸಾಹು ಊರಿಗೆ ತೆರಳಲು ಸಿದ್ಧಳಾಗಿದ್ದಳು. ಆಟೋ ಚಾಲಕನಾಗಿದ್ದ ಪತಿ ನೆನ್ನೆ ಕೆಲಸಕ್ಕೆ ಹೋಗಿದ್ದಾಗ ಮಮತಾ ಮಕ್ಕಳಿಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಪತಿಗೆ ಸೆಲ್ಫಿ ಫೋಟೊ ಕಳಿಸಿದ್ದ ಮಮತಾ, ಚಾಕು ತೆಗೆದುಕೊಂಡು ತಾನೂ ಕತ್ತು ಕೊಯ್ದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ಫೋಟೊ ನೋಡಿದ್ದ ಪತಿ ಮನೆಗೆ ಬರುವಷ್ಟರಲ್ಲಿ ಮಕ್ಕಳಿಬ್ಬರೂ ಮೃತಪಟ್ಟಿದ್ದರು. ನಂತರ ಆತ್ಮಹತ್ಯೆಗೆ ಯತ್ನಿಸಿದ್ದ ಮಮತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಯಿಯಿಂದಲೇ ಕೃತ್ಯ ನಡೆದಿರುವ ಶಂಕೆಯಿದೆ. ಆದರೆ, ಪತಿಯಿಂದಲೇ ಹತ್ಯೆ ನಡೆದಿದೆ ಎಂದು ಮಮತಾ ಸಾಹು ಆರೋಪಿಸಿದ್ದಾಳೆ. ಆದರೆ ಘಟನೆ ನಡೆದ ಸಂದರ್ಭದಲ್ಲಿ ಆಕೆಯ ಪತಿ ಇರಲಿಲ್ಲ ಎನ್ನಲಾಗಿದೆ. ಮಕ್ಕಳಿಬ್ಬರ ತಂದೆ ನೀಡಿರುವ ದೂರಿನನ್ವಯ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದಂಪತಿಯ ಆರೋಪ ಪ್ರತ್ಯಾರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Viral Video: ಹಸುವಿನ ಗುದದ್ವಾರದೊಳಗೆ 2.5 ಅಡಿ ಉದ್ದದ ಕೋಲು ತುರುಕಿಸಿ ವಿಕೃತಿ ಮೆರೆದ ದುರುಳರು – ಈ ವಿಡಿಯೋ ಕಂಡವರೆಲ್ಲರೂ ಶಾಕ್!

Actor Darshan: ಮಹತ್ವದ ಸಾಕ್ಷ್ಯ ಲಭ್ಯ, ರೇಣುಕಾಸ್ವಾಮಿ ಶವದ ಮುಂದೆ ದರ್ಶನ್‌ ಫೋಟೋ ರಿಟ್ರೀವ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೊಂದು ಮಹತ್ವದ ಸಾಕ್ಷ್ಯ (Crime news)ಲಭ್ಯವಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಶವದ ಮುಂದೆ ನಟ ದರ್ಶನ್‌ (Actor Darshan) ನಿಂತಿರುವ ಫೋಟೋ ಲಭ್ಯವಾಗಿದ್ದು, ಇದು ನಟನಿಗೆ ಇನ್ನೊಂದು ತಲೆಬಿಸಿ ಸೃಷ್ಟಿಸಿದೆ.

ಪ್ರಕರಣದ ಆರೋಪಿ ದರ್ಶನ್, ಅನಾರೋಗ್ಯ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾರೆ. ಜೈಲಿನಿಂದ ತಾತ್ಕಾಲಿಕವಾಗಿ ಬಿಡುಗಡೆ ಪಡೆದಿರುವ ಖುಷಿಯೂ ಹಾಳಾಗುವಂಥ ಸುದ್ದಿ ಇದಾಗಿದೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ನಿಂತಿರುವ ಚಿತ್ರ ಇದೀಗ ಪೊಲೀಸರಿಗೆ ಲಭ್ಯವಾಗಿದ್ದು, ಅದನ್ನು ನ್ಯಾಯಾಲಯದ ಗಮನಕ್ಕೂ ತರಲಾಗಿದೆ.

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ನಿಧನ ಹೊಂದಿದಾಗ ದರ್ಶನ್ ಆ ಸ್ಥಳದಲ್ಲಿ ಇರಲಿಲ್ಲ ಎಂಬ ವಾದ ಈ ಹಿಂದೆ ಮಂಡಿಸಲಾಗಿತ್ತು. ದರ್ಶನ್, ರೇಣುಕಾ ಸ್ವಾಮಿಗೆ ಕೋಪದಲ್ಲಿ ನಾಲ್ಕೇಟು ಹೊಡೆದು ಅಲ್ಲಿಂದ ಹೊರಟು ಹೋದರು ಎನ್ನಲಾಗಿತ್ತು. ಆದರೆ ಈಗ ಪೊಲೀಸರಿಗೆ ಲಭ್ಯವಾಗಿರುವ ಫೋಟೊಗಳು ಹೇಳುತ್ತಿರುವುದೇ ಬೇರೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ ಇತರೆ ಆರೋಪಿಗಳು ನಿಂತಿರುವ ಫೋಟೊಗಳು ಇದಾಗಿದ್ದು, ಪ್ರಕರಣದ ಆರೋಪಿಯೊಬ್ಬರ ಮೊಬೈಲ್​ನಿಂದ ಈ ಫೋಟೊಗಳನ್ನು ರಿಟ್ರೀವ್ ಮಾಡಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ದೊರೆತ ಸಾಕ್ಷ್ಯಗಳನ್ನು ಪರೀಕ್ಷೆಗಾಗಿ ಹೈದರಾಬಾದ್ ಹಾಗೂ ಬೆಂಗಳೂರಿನ ಎಫ್​ಎಸ್​ಎಲ್ ಕೇಂದ್ರಗಳಿಗೆ ಕಳಿಸಿದ್ದರು. ಹೈದರಾಬಾದ್​ನಿಂದ ಕೆಲವು ವರದಿಗಳು ತಡವಾಗಿ ಬಂದಿದ್ದು, ಆರೋಪಿ ಪವನ್​ ಎಂಬಾತನ ಮೊಬೈಲ್​ನಿಂದ ಕ್ಲಿಕ್ಕಿಸಲಾದ 2 ಫೋಟೋಗಳನ್ನು ರಿಕವರಿ ಮಾಡಲಾಗಿದೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ಹಾಗೂ ಇತರೆ ಆರೋಪಿಗಳು ನಿಂತಿರುವ ಚಿತ್ರವನ್ನು ಪವನ್ ಕ್ಲಿಕ್ಕಿಸಿದ್ದ. ನಂತರ ಅವನ್ನು ಡಿಲೀಟ್ ಮಾಡಿದ್ದ. ಆದರೆ ಎಫ್​ಎಸ್​ಎಲ್​ ಕೇಂದ್ರದವರು ತಂತ್ರಜ್ಞಾನ ಬಳಸಿ ಆ ಫೋಟೊಗಳನ್ನು ರಿಟ್ರೀವ್ ಮಾಡಿದ್ದಾರೆ.

ಈಗ ಲಭ್ಯವಾಗಿರುವ ಚಿತ್ರದಲ್ಲಿ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಬಣ್ಣದ ಟೀ ಶರ್ಟ್ ಧರಿಸಿ ದರ್ಶನ್ ನಿಂತಿರುವ ಚಿತ್ರವಿದೆ. ಚಿತ್ರದಲ್ಲಿ ಪ್ರಕರಣದ ಇತರೆ ಕೆಲವು ಆರೋಪಿಗಳು ಸಹ ಇದ್ದಾರೆ. ಚಿತ್ರದಲ್ಲಿ ರೇಣುಕಾ ಸ್ವಾಮಿಯ ಶವವೂ ಇದೆ. ಈ ಚಿತ್ರವನ್ನು ಪವನ್ ತೆಗೆದಿದ್ದಾರೆ. ಪವನ್ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅದನ್ನು ಎಫ್​ಎಸ್​ಎಲ್​ಗೆ ರವಾನಿಸಿದ್ದಾರೆ.

ಇದನ್ನೂ ಓದಿ: Darshan: ಆರೋಪಿ ದರ್ಶನ್‌ಗೆ ಸರ್ಜಿಕಲ್‌ ಚೇರ್‌