ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಎಂಟನೇ ವಾರ ಮುಗಿಯುತ್ತಾ ಬಂದಿದೆ. ಈ ವಾರದ ಆರಂಭದಲ್ಲಿ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಶೋಭಾ ಶೆಟ್ಟಿ ಹಾಗೂ ರಜತ್ ದೊಡ್ಮನೆಗೆ ಕಾಲಿಟ್ಟರು. ಆದರೆ, ಬಂದ ಮೊದಲ ವಾರವೇ ರಜತ್ ಕಿಶನ್ ಜೈಲಿಗೆ ಹೋಗಿದ್ದಾರೆ. ಇದಕ್ಕೆ ಕಾರಣ ಟಾಸ್ಕ್ ಮಧ್ಯೆ ರಜತ್ ಅವರು ಗೋಲ್ಡ್ ಸುರೇಶ್ ಅವರಿಗೆ ಅವಾಚ್ಯ ಪದಗಳನ್ನು ಬಳಸಿದ್ದು.
ಪ್ರತಿ ಬಾರಿಯಂತೆ ಈ ಬಾರಿ ಕೂಡ ಬಿಗ್ ಬಾಸ್ ಮನೆಯಲ್ಲಿ ಕಳಪೆ ನೀಡುವ ವಿಚಾರದಲ್ಲಿ ಹೊತ್ತಿ ಉರಿದಿದೆ. ಬಹುತೇಕ ಸ್ಪರ್ಧಿಗಳು ಕಳಪೆಗೆ ರಜತ್ ಕಿಶನ್ ಹೆಸರು ತೆಗೆದುಕೊಂಡಿದ್ದಾರೆ. ಹನುಮಂತ, ಗೋಲ್ಡ್ ಸುರೇಶ್, ಮೋಕ್ಷಿತಾ ಹಾಗೇ ಶೋಭಾ, ಶಿಶಿರ್, ಐಶ್ವರ್ಯಾ ಸೇರಿದಂತೆ ಅನೇಕರು ಕಳಪೆ ಪಟ್ಟವನ್ನು ರಜತ್ ಅವರಿಗೆ ನೀಡಿದರು. ಒಂದಷ್ಟು ಪದಗಳನ್ನು ಬಳಸಬಾರದಿತ್ತು. ಅದು ಅಲ್ಲದೇ ನಮಗೆ ನಿಮ್ಮ ಪದಗಳನ್ನು ಜೀರ್ಣ ಮಾಡಿಕೊಳ್ಳಲು ಆಗ್ತಾ ಇರಲಿಲ್ಲ. ಈ ಮನೆಗೆ ಇಂತಹ ಪದಗಳು ಸೂಕ್ತ ಅಲ್ಲ ಎಂದಿ ಸ್ಪರ್ಧಿಗಳು ಹೇಳಿದ್ದಾರೆ.
ಇದರಿಂದ ಕೆರಳಿದ ರಜತ್ ಅವರು ಗೋಲ್ಡ್ ಸುರೇಶ್ ಅವರತ್ತ ಬೆರಳು ತೋರಿಸಿ ಇಂತವರನ್ನೆಲ್ಲ ಮನೆಗೆ ಕಳುಹಿಸಿಯೇ ನಾನು ಇಲ್ಲಿಂದ ಹೋಗೋದು ಎಂದು ಚಾಲೇಂಜ್ ಮಾಡಿದ್ದಾರೆ. ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭವಲ್ಲ ಬಿಗ್ ಬಾಸ್ ಆಟ ಗೆಲ್ಲೋದು. ನಾನು ಹುಟ್ಟಿದಾಗಿಂದ ಹೀಗೇ ಇದ್ದೀನಿ, ಇವಾಗಲೂ ಹೀಗೆ ಇದ್ದೀನಿ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತಾಡ್ತೀನಿ, ತೋರಿಸ್ತೀನಿ. ಇನ್ಮುಂದೆ ನಿಜವಾದ ಆಟ ಶುರು ಎಂದು ಹೇಳಿದ್ದಾರೆ.
ಬಿಗ್ ಬಾಸ್ ಒಳಗೆ ಬರುತ್ತಿದ್ದಂತೆಯೇ ಕೆಲವು ಸ್ಪರ್ಧಿಗಳನ್ನು ನೇರವಾಗಿ ಟಾರ್ಗೆಟ್ ಮಾಡಿ ರಜತ್ ಅವರು ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಅವರು ಬಳಸುತ್ತಿರುವ ಪದಗಳ ಬಗ್ಗೆ ಭಾರೀ ಚರ್ಚೆ ಆದವು. ಮುಖ್ಯವಾಗಿ ಟಾಸ್ಕ್ ಮಧ್ಯೆ ರಜತ್ ಅವರು ಗೋಲ್ಡ್ ಸುರೇಶ್ಗೆ ಗುಗ್ಗು ನನ್ ಮಗನ್ ಥರಾ ಮಾತಾಡ್ತಿದ್ದೀಯಾ, ಅಮಿಕ್ಕೊಂಡಿರು, ಸಡೆ ಮಾತುಗಳೆಲ್ಲಾ ಬೇಡ.. ತಿಳ್ಕೋ.. ಅಂತ ಕೂಗಾಡಿದ್ದಾರೆ. ರಜತ್ ಮಾತುಗಳನ್ನ ಕೇಳಿ ಬೇಸೆತ್ತ ಗೋಲ್ಡ್ ಸುರೇಶ್, ತಮ್ಮ ಮೇಲೆ ಬಳಕೆ ಆಗಿರುವ ಪದಗಳು ಆಕ್ಷೇಪಾರ್ಹವಾಗಿವೆ. ನನಗೆ ಬೇಸರ ಆಗಿದೆ. ಬಿಗ್ಬಾಸ್ ನಾನು ಆಡಲ್ಲ. ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದರು.
BBK 11: ಮಂಜು-ಗೌತಮಿ ಮಾಸ್ಟರ್ ಪ್ಲಾನ್ ಉಡೀಸ್ ಮಾಡಿದ ಚೈತ್ರಾ ಕುಂದಾಪುರ: ಎಲ್ಲರೂ ಶಾಕ್