Sunday, 24th November 2024

Pain Killer: ನೋವು ನಿವಾರಕ ಔಷಧಗಳು ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತೇ?

Pain Killer

ದೇಹದ ಯಾವುದೇ ಭಾಗದಲ್ಲೂ ಒಂದು ಸಣ್ಣ ನೋವಾದರೂ ಸರಿ ತಡೆದುಕೊಳ್ಳುವುದು ಸಾಧ್ಯವಿಲ್ಲ. ಇದಕ್ಕಾಗಿ ಕೆಲವರು ತಲೆನೋವು, ಮೈಕೈ ನೋವೆಂದು ನೋವು ನಿವಾರಕ (Pain Killer) ಮಾತ್ರೆಗಳನ್ನು ಜೊತೆಗೆ ಇಟ್ಟುಕೊಂಡು ಬದುಕುತ್ತಾರೆ. ಆದರೆ ಈ ಮಾತ್ರೆ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ (pain killer side effects) ಬೀರುತ್ತದೆ ಎಂಬುದು ಗೊತ್ತಿದೆಯೇ?

ನಿರಂತರವಾಗಿ ನೋವು ನಿವಾರಕ ಮಾತ್ರೆಗಳನ್ನು ಬಳಸುವುದರಿಂದ ಹೊಟ್ಟೆಯಲ್ಲಿ ರಕ್ತ ಸ್ರಾವ ಉಂಟಾಗಬಹುದು ಇದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಅಲ್ಲದೇ ನೋವು ನಿವಾರಕ ಮಾತ್ರೆಗಳು ಮೂತ್ರ ಪಿಂಡದ ಸಾಮರ್ಥ್ಯವನ್ನು ನಾಶ ಮಾಡುತ್ತವೆ. ಇದರಿಂದ ಮೂತ್ರ ಪಿಂಡ ವೈಫಲ್ಯ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.

ನೋವು ನಿವಾರಕ ಮಾತ್ರೆಗಳು ತಕ್ಷಣಕ್ಕೆ ಪರಿಹಾರ ನೀಡಿದರೂ ಅದು ದೇಹದ ಇತರ ಅಂಗಾಂಗಗಳ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ. ಇದು ಬೇರೊಂದು ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.
ನೋವು ನಿವಾರಕ ಔಷಧಗಳು ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ, ಲಿವರ್ ವೈಫಲ್ಯವನ್ನು ಉಂಟು ಮಾಡುತ್ತದೆ. ಅತಿಯಾಗಿ ಇದನ್ನು ಬಳಸುವುದರಿಂದ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು.

ಹೆಚ್ಚಿನ ಪ್ರಮಾಣದ ನೋವು ನಿವಾರಕ ಮಾತ್ರೆಗಳು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಈ ಔಷಧ ಸೇವನೆಯ ಬಳಿಕ ರೋಗಿಗಳ ಸಾವಿನ ಅಪಾಯ ಶೇ . 59ರಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ಡೆನ್ಮಾರ್ಕ್‌ನ ಕೋಪನ್‌ಹೇಗನ್ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರು.

Pain Killer

ಇನ್ನು ನೋವು ನಿವಾರಕ ಮಾತ್ರೆಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹವು ಇತರ ಕಾಯಿಲೆಯ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ.

Health Tips: ಫಿಟ್‌ನೆಸ್‌ ಗುರಿ ಸಾಧಿಸಲು ನಾವು ಸೇವಿಸುವ ಆಹಾರ ಹೇಗಿರಬೇಕು?

ನೋವು ನಿವಾರಕ ಔಷಧಗಳು ಯಕೃತ್ ನ ಆರೋಗ್ಯಕ್ಕೆ ವಿಷಕಾರಿಯಾಗಿದೆ. ಇದು ಮಾರಣಾಂತಿಕ ಹಾನಿಯನ್ನು ಉಂಟು ಮಾಡಬಹುದು. ಅಲ್ಲದೇ ಈ ಔಷಧ ತೆಗೆದುಕೊಂಡ ಒಂದೆರಡು ದಿನಗಳ ಬಳಿಕ ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳು ಉಂಟಾಗಬಹುದು. ಇದು ಮಲಬದ್ಧತೆ, ಉಬ್ಬುವುದು, ವಾಯು ಮತ್ತು ಮೂಲವ್ಯಾಧಿಗೆ ಕಾರಣವಾಗಬಹುದು. ಯಾಕೆಂದರೆ ಈ ಔಷಧಗಳನ್ನು ಜೀರ್ಣಿಸಿಕೊಳ್ಳುವುದು ನಮ್ಮ ದೇಹಕ್ಕೆ ಕಷ್ಟವಾಗುತ್ತದೆ.