ತುಂಟರಗಾಳಿ
ಹರಿ ಪರಾಕ್
ಜಸ್ಪ್ರೀತ್ ಬುಮ್ರಾ
ಏನ್ ಕ್ಯಾಪ್ಟನ್ ಸಾಹೇಬ್ರೇ, ಆಸ್ಟ್ರೇಲಿಯಾಗೆ ಗವಾಸ್ಕರ್ ಕಡೆಯಿಂದ ಹೋಗಿದ್ದೀರ, ಬಾರ್ಡರ್ ವಿಷ್ಯ ಏನು?
- ಅಯ್ಯೋ, ಬಾರ್ಡರ್ ಸಮಸ್ಯೆ ಬರೋದೇನಿದ್ರೂ ಪಾಕಿಸ್ತಾನಕ್ಕೆ ಹೋದಾಗ. ಇದು ಆಸ್ಟ್ರೇಲಿಯಾ.
- ಅದೂ ಸರಿನೇ ಬಿಡಿ. ಅದಿರ್ಲಿ ನಮ್ ಹ್ಯಾಟ್ರಿಕ್ ಹೀರೋ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ನಿಮ್ಮ ಅಭಿಪ್ರಾಯ?
- ಯಾರ್ರೀ ಅದು. ನನಗೂ ಅವರಿಗೂ ಏನ್ ಸಂಬಂಧ
- ಅಲ್ಲ, ನೀವು ಬೋಲರ್ ಅಲ್ವಾ, ಅದಕ್ಕೇ ಹ್ಯಾಟ್ರಿಕ್ ವಿಷ್ಯದ ಬಗ್ಗೆ ಏನಂತೀರಾ ಅಂತ ಕೇಳ್ದೆ..
- ನೋಡ್ರೀ ನಮಗೆ ಕುಮಾರಸ್ವಾಮಿ ಮಗ ನಿಖಿಲ್ ಎಲ್ಲ ಗೊತ್ತಿಲ್ಲ. ಗೊತ್ತಿರೋದು ಒಬ್ಬರೇ ಕ್ರಿಕೆಟರ್ ಕಮ್ ಆಕ್ಟರ್. ಎಸ್.ನಾರಾಯಣ್
ಮಗ ಪಂಕಜ್ ನಾರಾಯಣ್. - ಸರಿಹೋಯ್ತು. ಹೋಗ್ಲಿ, 150ಕ್ಕೆ ಔಟ್ ಆದ ನಮ್ಮೋರಿಗೆ 5 ವಿಕೆಟ್ ತೆಗೆದು – ಇನ್ನಿಂಗ್ಸ್ ಲೀಡ್ ಕೊಡಿಸಿಬಿಟ್ರಲ್ಲ?
- ಮತ್ತೆ, ಟೀಮ್ ಲೀಡ್ ಮಾಡ್ತಾ ಇರೋದು ಚಂದಕ್ಕಾ?
- ಓಕೆ, ಓಕೆ… ಲೀಡಿಂಗ್ ಫ್ರಮ್ ದಿ ಫ್ರಂಟ್. ಸರಿ, ನಿಮ್ಮ ಯಾರ್ಕರ್ಗಳಿಗೆ ಒಂದು ಹೆಸರು ಇಡೋದಾದ್ರೆ ಏನಿಡ್ತೀರಾ?
- ಬೂಮರ್ಯಾಂಗ್
- (ಕಾಲ್ಪನಿಕ ಸಂದರ್ಶನ)
ಲೈನ್ ಮ್ಯಾನ್
ಹೆಂಡ್ತಿ ಊರಿಗೆ ಹೋದಾಗ ಆನ್ ಲೈನ್ನಲ್ಲಿ ಫುಡ್ ಆರ್ಡರ್ ಮಾಡುವ ಗಂಡನಿಗೆ ಅದು
- ‘ಸ್ವಿಗ್ಗಿ’ ಕಾಲ
ಕ್ವೆಶ್ಚನ್ ಪೇಪರ್ ಲೀಕ್ ಮಾಡಿ ಸಿಕ್ಕಿ ಹಾಕಿಕೊಂಡವರ ಕಥೆ- ಪೊಲೀಸ್ನೋರು ಕೇಳೋ ಪ್ರಶ್ನೆಗಳನ್ನೂ ಯಾರಾದ್ರೂ ಲೀಕ್ ಮಾಡಿದ್ದಿದ್ರೆ ಬಚಾವ್ ಆಗ್ತಾ ಇದ್ವಿ
ಮತ್ತೆ ಮತ್ತೆ ಫಾರಿನ್ನಿಗೆ ಟ್ರಿಪ್ ಹೋಗೋ ಹುಚ್ಚು ಇರುವವರು - ಅಬ್ರಾಡ್ ಮೈಂಡೆಡ್
ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚಾಗಿ ಉಪಯೋಗಿಸುವ ದೇಶ - ಉಜ್ಬೇಕಿಸ್ತಾನ್
ಹಳಸಿದ ಆಹಾರ ತಿಂದು ಗಟ್ಟಿಮುಟ್ಟಾಗಿರುವವನ ಮಾತು - ‘ಬೂಸ್ಟ್’ ಈಸ್ ದ ಸೀಕ್ರೆಟ್ ಆಫ್ ಮೈ ಎನರ್ಜಿ
ಪ್ರಾಣಿಗಳು ಯಾರನ್ನಾದರೂ ಕೊಂದರೆ ಅವುಗಳನ್ನೇಕೆ ಜೈಲಿಗೆ ಹಾಕಲ್ಲ? - ಯಾಕಂದ್ರೆ ಅವು ‘ಬಾಲಾ’ಪರಾಧಿಗಳು
ಗಾಂಧಾರಿಗೆ ನೂರು ಮಕ್ಕಳಾದಾಗ ಆಗಿದ್ದು - ‘ಬಸಿರು’ ಕ್ರಾಂತಿ
ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಸಂಘದ ಹೆಸರು - ಅಖಿಲ ಕರ್ನಾಟಕ ನಿಖಿಲ ಅಭಿಮಾನಿಗಳ ಸಂಘ
ಇನ್ನೊಬ್ಬರನ್ನ ಕನ್ವಿ ಮಾಡೋ ಕೆಲಸಕ್ಕೆ ಬಹುಮಾನ ಕೊಟ್ಟರೆ ಅದಕ್ಕೆ ಏನಂತಾರೆ? - ‘ಸಮಾಧಾನಕರ’ ಬಹುಮಾನ
ಕುಡಿದು ‘ಹೈ’ ಆಗಿರುವವರ ಹಾಡು - ‘ಇಳಿಸು’ ಬಾ, ತಾಯಿ ಇಳಿಸು ಬಾ
ಇಸ್ಪೀಟ್ ‘ಕಾರ್ಡ್’ಗಳನ್ನು ರಾಶಿ ಹಾಕಿ, ಅದರಲ್ಲಿ ಒಂದನ್ನು ಎತ್ತಿಕೋ ಅಂತ ಹೇಳೋದು - ‘ಎಲೆ’ಕ್ಷನ್
- ಇದನ್ನೂ ಓದಿ: #Harihara