ಕೊಲ್ಹಾರ: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನಿಂದ ಆಘಾತಗೊಂಡು ಪಟ್ಟಣದ ಬಿಜೆಪಿ ಮುಖಂಡರಾದ ವಿರಭದ್ರಪ್ಪ ಬಾಗಿ ಫಲಿತಾಂಶ ವೀಕ್ಷಿಸುತ್ತಿದ್ದ ಟಿ.ವಿ ಒಡೆದು ಹಾಕಿದ ಘಟನೆ ನಡೆದಿದೆ.
ಬಿಜೆಪಿ ಪಕ್ಷದ ಕಟ್ಟಾ ಅಭಿಮಾನಿಯಾಗಿರುವ ವಿರಭದ್ರಪ್ಪ ಬಾಗಿ ಮನೆಯಲ್ಲಿ ಉಪಚುನಾವಣೆಯ ಫಲಿತಾಂಶ ವೀಕ್ಷಿಸುತ್ತಿದ್ದ ಸಂದರ್ಭ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಹಾಗೂ ರಾಜ್ಯ ಬಿಜೆಪಿ ನಾಯಕರ ನಡೆಗೆ ಆಕ್ರೋಶಗೊಂಡು ಟಿ.ವಿ ಒಡೆದು ಹಾಕಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಬಿಜೆಪಿ ನಾಯಕರಲ್ಲಿ ಹೊಂದಣಿಕೆ ಇಲ್ಲದ ಕಾರಣ ನಮಗೆ ಸೋಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಜೆಪಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಇತರ ನಾಯಕರಲ್ಲಿ ಹೊಂದಾಣಿಕೆಯ ಕೊರತೆಯಿಂದ ಇಂತಹ ದುಃಸ್ಥಿತಿ ಬಂದಿದೆ ರಾಷ್ಟ್ರೀಯ ನಾಯಕರು ಮದ್ಯಸ್ಥಿತಿ ವಹಿಸಿ ರಾಜ್ಯ ನಾಯಕರನ್ನು ಒಂದುಗೂಡಿಸಬೇಕು ಇಲ್ಲದಿದ್ದಲ್ಲಿ ಬಿಜೆಪಿ ಇನ್ನೂ ದುಸ್ಥಿತಿಗೆ ಹೋಗುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: bijapurNews