ಕೊಲ್ಹಾರ: ರಾಜ್ಯದ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿನ ಪ್ರಯುಕ್ತ ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಕಾಂಗ್ರೆಸ ಮುಖಂಡರು ವಿಜಯೋತ್ಸವ ಆಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಆರ್.ಬಿ ಪಕಾಲಿ ಮಾತನಾಡಿ ರಾಜ್ಯ ಕಾಂಗ್ರೆಸ ಸರ್ಕಾರದ ಜನಪರ ಆಡಳಿತಕ್ಕೆ ಜನರು ಆಶೀರ್ವದಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಸಹಿತ ವಿವಿಧ ಜನಪರ ಯೋಜನೆಗಳು ನಮ್ಮ ಕೈ ಹಿಡಿದಿವೆ ಇದು ಅಭಿವೃದ್ಧಿಗೆ ದೊರೆತ ಗೆಲುವು ಎಂದರು.
ಕಾಂಗ್ರೆಸ ಧುರೀಣರಾದ ಉಸ್ಮಾನ್ ಪಟೇಲ ಖಾನ್ ಮಾತನಾಡಿ ಉತ್ತಮ ಆಡಳಿತ ನೀಡುತ್ತಿರುವ ಕಾಂಗ್ರೆಸ ಪಕ್ಷದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿನಾಕಾರಣ ಟಿಕೆ ಮಾಡುತ್ತಾ ಜನರ ದಾರಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದವು ಉಪಚುನಾವಣೆಯಲ್ಲಿ ಜನರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದರು.
ಮುಖಂಡ ಎಂ.ಆರ್ ಕಲಾದಗಿ ಮಾತನಾಡಿ ವಿರೋಧ ಪಕ್ಷಗಳ ಆಧಾರ ರಹಿತ ಆರೋಪಕ್ಕೆ ಮತದಾರರು ಕಿವಿಗೊಡದೆ ಉಪಚುನಾವಣೆಯಲ್ಲಿ ಕಾಂಗ್ರೆಸ ಪಕ್ಷಕ್ಕೆ ಆಶೀರ್ವದಿಸಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ನೇತೃತ್ವದ ಸಂಘಟಿತ ಹೋರಾಟದ ಮೂಲಕ ಗೆಲುವು ದೊರಕಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಆರ್.ಬಿ ಪಕಾಲಿ, ಉಸ್ಮಾನ್ ಪಟೇಲ ಖಾನ್, ಬಾಷಾಸಾಬ ಕಲಾದಗಿ, ದಾದಾ ಗೂಗಿಹಾಳ, ಎಂ.ಆರ್ ಕಲಾದಗಿ, ದಶರಥ ಈಟಿ, ಸಲೀಂ ಸಾರವಾಡ, ಪ.ಪಂ ಸದಸ್ಯರಾದ ತೌಸಿಫಂ ಗಿರಗಾಂವಿ, ದಸ್ತಗೀರ ಕಲಾದಗಿ, ಮಹಾಂತೇಶ ಗಿಡ್ಡಪ್ಪಗೋಳ, ಶ್ರೀಶೈಲ ಮುಳವಾಡ, ತಿಪ್ಪಣ್ಣ ಕುದರಿ, ರಾಜು ಇವಣಗಿ, ಯಮನೂರಿ ಕುದರಿ ಹಾಗೂ ಇನ್ನಿತರರು ಇದ್ದರು.