Sunday, 24th November 2024

Yashasvi Jaiswal: ಶತಕ ಬಾರಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯ ಮೂರನೇ ದಿನದಾಟದಲ್ಲಿ ಟೀಮ್‌ ಇಂಡಿಯಾದ ಆರಂಭಿಕ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(Yashasvi Jaiswal) ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಇದು ಅವರು ಆಸ್ಟ್ರೇಲಿಯಾದಲ್ಲಿ ಸಿಡಿಸಿದ ಮೊದಲ ಶತಕ ಒಟ್ಟಾರೆಯಾಗಿ ನಾಲ್ಕನೇ ಶತಕ.

90 ರನ್‌ ಗಳಿಸಿದ್ದಲ್ಲಿಂದ ಭಾನುವಾರ ಬ್ಯಾಟಿಂಗ್‌ ಆರಂಭಿಸಿದ ಜೈಸ್ವಾಲ್‌ ಹ್ಯಾಜಲ್‌ವುಡ್‌ ಎಸೆತಕ್ಕೆ ಸಿಕ್ಸರ್‌ ಬಾರಿಸುವ ಮೂಲಕ ಶರಕ ಪೂರೈಸಿದರು. ಶತಕ ಸಾಧನೆಯೊಂದಿಗೆ 23 ವರ್ಷ ತುಂಬುವ ಮುನ್ನ ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್‌ ಎನಿಸಿಕೊಂಡರು. ಸಚಿನ್‌ ತೆಂಡೂಲ್ಕರ್‌ ಜತೆ ಜಂಟಿ ದಾಖಲೆಯನ್ನು ಹಂಚಿಕೊಂಡರು. ಸಚಿನ್‌ ಮತ್ತು ಜೈಸ್ವಾಲ್‌ 3 ಶತಕ ಬಾರಿಸಿದ್ದಾರೆ. ದಾಖಲೆ ಸುನಿಲ್‌ ಗವಾಸ್ಕರ್‌ ಮತ್ತು ವಿನೋದ್‌ ಕಾಂಬ್ಳಿ ಹೆಸರಿನಲ್ಲಿದೆ. ಉಭಯ ಆಟಗಾರರು 4 ಶತಕ ಬಾರಿಸಿದ್ದಾರೆ.

23 ವರ್ಷ ತುಂಬುವ ಮೊದಲು ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚಿನ ಟೆಸ್ಟ್ ಶತಕಗಳು(ಭಾರತ)

ಸುನಿಲ್‌ ಗವಾಸ್ಕರ್‌-4 ಶತಕ(1971)

ವಿನೋದ್‌ ಕಾಂಬ್ಳಿ-4 ಶತಕ(1993)

ರವಿ ಶಾಸ್ತ್ರಿ-3 ಶತಕ(1984)

ಸಚಿನ್‌ ತೆಂಡೂಲ್ಕರ್‌-3 ಶತಕ(1992)

ಯಶಸ್ವಿ ಜೈಸ್ವಾಲ್‌-3 ಶತಕ(2024)

https://twitter.com/BCCI/status/1860519788126339488

23 ವರ್ಷ ತುಂಬುವ ಮೊದಲು ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಜೈಸ್ವಾಲ್‌ 5ನೇ ಸ್ಥಾನಕ್ಕೇರಿದ್ದಾರೆ. ದಾಖಲೆ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದೆ. ಸಚಿನ್‌ 8 ಶತಕ ಬಾರಿಸಿದ್ದಾರೆ. ರವಿ ಶಾಸ್ತ್ರಿ 5, ಸುನಿಲ್‌ ಗವಾಸ್ಕರ್‌, ವಿನೋದ್‌ ಕಾಂಬ್ಳಿ ಮತ್ತು ಜೈಸ್ವಾಲ್‌ 4 ಶತಕ ಬಾರಿಸಿದ್ದಾರೆ

23 ವರ್ಷಕ್ಕೆ ಮುನ್ನ ಅತಿ ಹೆಚ್ಚು ಟೆಸ್ಟ್ ಶತಕಗಳು (ಭಾರತ)

ಸಚಿನ್‌ ತೆಂಡೂಲ್ಕರ್‌- 8 ಶತಕ

ರವಿ ಶಾಸ್ತ್ರಿ- 5 ಶತಕ

ಸುನಿಲ್‌ ಗವಾಸ್ಕರ್‌-4 ಶತಕ

ವಿನೋದ್‌ ಕಾಂಬ್ಳಿ-4 ಶತಕ

ಯಶಸ್ವಿ ಜೈಸ್ವಾಲ್‌- 4 ಶತಕ

ಜೈಸ್ವಾಲ್‌ ಮತ್ತು ರಾಹುಲ್‌ ಉತ್ತಮ ಜತೆಯಾಟ ನಡೆಸುವ ಮೂಲಕ ಮೊದಲ ವಿಕೆಟ್‌ಗೆ 201 ರನ್‌ ಒಟ್ಟುಗೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ಕೆ.ಎಲ್‌ ರಾಹುಲ್‌ 77 ರನ್‌ ಗಳಿಸಿದ ವೇಳೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡರು. ಸದ್ಯ ಜೈಸ್ವಾಲ್‌ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.