Sunday, 24th November 2024

Underground Building: ಭೂಮಿಯ 200 ಅಡಿ ಆಳದಲ್ಲಿ 15 ಅಂತಸ್ತಿನ ಸೂಪರ್ ಮಾರ್ಕೆಟ್!

Underground Building

ಯುದ್ಧದ ಭೀತಿ, ಬಾಂಬ್ ಸ್ಫೋಟಗಳಿಂದ ರಕ್ಷಣೆ ಪಡೆಯಲು ಹಲವಾರು ದೇಶಗಳು ಭೂಗತವಾಗಿ ಬಂಕರ್‌ಗಳನ್ನು (bunker) ನಿರ್ಮಿಸುತ್ತವೆ. ಆದರೆ ಅಮೆರಿಕದಲ್ಲಿ ವಿವಿಧ ಸೌಲಭ್ಯಗಳನ್ನು ಒಳಗೊಂಡ ಸುಮಾರು 15 ಅಂತಸ್ತಿನ ಕಟ್ಟಡವನ್ನೇ ಭೂಗತವಾಗಿ (Underground Building) ನಿರ್ಮಿಸಲಾಗಿದೆ.

ಆಧುನಿಕ ಯುಗದಲ್ಲಿ ಬಾಂಬ್ ಸ್ಫೋಟ, ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯನ್ನು ಎದುರಿಸಲು ಬಂಕರ್‌ಗಳನ್ನು ನೆಲದಡಿಯಲ್ಲಿ ನಿರ್ಮಿಸಲಾಗುತ್ತಿದೆ. ಇದೇ ರೀತಿಯ ಆಶ್ಚರ್ಯಕರವಾದ, ಬಂಕರ್‌ವೊಂದು ಯುಎಸ್‌ನಲ್ಲಿ ಅಸ್ತಿತ್ವದಲ್ಲಿದೆ. ಇದು ಸಂಪೂರ್ಣ ಭೂಗತ ಕಟ್ಟಡವನ್ನು ಹೋಲುತ್ತದೆ.

ಈಜುಕೊಳ, ಸೂಪರ್ ಮಾರ್ಕೆಟ್‌ನೊಂದಿಗೆ ಸಂಪೂರ್ಣವಾಗಿ ಭೂಗತವಾಗಿ ನಿರ್ಮಿಸಿರುವ ಈ 15 ಅಂತಸ್ತಿನ ಕಟ್ಟಡವು ಯುದ್ಧ ಸನ್ನಿವೇಶ, ಆಧುನಿಕ ಶಸ್ತ್ರಾಸ್ತ್ರಗಳಿಂದ ಸುರಕ್ಷತೆ, ಭದ್ರತೆಯನ್ನು ಖಂಡಿತ ನೀಡುವಂತಿದೆ.

Underground Building

ಸರ್ವೈವಲ್ ಕಾಂಡೋ (Survival Condo) ಎಂಬ ಹೆಸರಿನ ಈ ಬಂಕರ್ ಯುಎಸ್‌ಎಯ ಕಾನ್ಸಾಸ್‌ನಲ್ಲಿದೆ. ಅದರ ಪ್ರವೇಶದ್ವಾರ ಮತ್ತು ನಿರ್ಗಮನ ಗೇಟ್ ಮೈದಾನದ ಮಧ್ಯದಲ್ಲಿದೆ. ಪ್ರವೇಶ ದ್ವಾರದಲ್ಲಿ 8 ಟನ್ ಉಕ್ಕಿನ ಬಾಗಿಲನ್ನು ಅಳವಡಿಸಲಾಗಿದೆ.
ಗೇಟ್ ಒಳಗೆ ಪ್ರವೇಶಿಸಿದ ಬಳಿಕ ಕಟ್ಟಡ ಮತ್ತು ನಗರ ಎರಡೂ ನೆಲದಿಂದ 200 ಅಡಿ ಕೆಳಗೆ 15 ಮಹಡಿಗಳನ್ನು ಹೊಂದಿದೆ. ಇಲ್ಲಿ ದೈನಂದಿನ ಜೀವನದ ಪ್ರತಿಯೊಂದು ಅಗತ್ಯವನ್ನು ಪೂರೈಸುತ್ತದೆ.

Underground Building

ನಾಲ್ಕನೇ ನೆಲಮಾಳಿಗೆಯ ಮಹಡಿಯಲ್ಲಿ, ಒಂದು ಸೂಪರ್ ಮಾರ್ಕೆಟ್ ಸಿದ್ದ ಆಹಾರ ಪದಾರ್ಥಗಳನ್ನು ಪೂರೈಸುತ್ತದೆ. ಈಜುಕೊಳ, ಜಿಮ್ ಮತ್ತು ಪೆಟ್ ಪಾರ್ಕ್ ಅನ್ನು ಸಹ ಇದು ಒಳಗೊಂಡಿದೆ. ವೈದ್ಯಕೀಯ ಘಟಕವು ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

Warsaw And Bangalore University: ವಿಶ್ವ ರಾಜಕೀಯ ಶಾಸ್ತ್ರದಲ್ಲಿ ಶೈಕ್ಷಣಿಕ ಸಹಕಾರಕ್ಕೆ ವಾರ್ಸಾ-ಬೆಂಗಳೂರು ವಿವಿ ಒಪ್ಪಂದ

ಇದಲ್ಲದೆ ಕಟ್ಟಡವು ಸಣ್ಣ ಸಿನೆಮಾ ಹಾಲ್, ಗ್ರಂಥಾಲಯವನ್ನು ಹೊಂದಿದೆ. ಐಷಾರಾಮಿ ಕೊಠಡಿಗಳೊಂದಿಗೆ ಸ್ಪಾ, ಮಿನಿ ಬಾರ್ ಅನ್ನು ಒಳಗೊಂಡಿರುವ ಈ ಸಂಕೀರ್ಣದಲ್ಲಿರುವ ಅಪಾರ್ಟ್‌ಮೆಂಟ್‌ ನ ಬೆಲೆ ತಲಾ 25 ಕೋಟಿ ರೂ. ಗಳಾಗಿವೆ.