Sunday, 24th November 2024

IPL 2025 Mega Auction: ಆರ್‌ಸಿಬಿ ಸೇರಿದ ಲಿವಿಂಗ್‌ಸ್ಟೋನ್‌, ಗುಜರಾತ್‌ಗೆ ಸಿರಾಜ್‌!

RCB refuse RTM for Mohammed Siraj, England Liam Livingstone to Bengaluru

ನವದೆಹಲಿ: ಇಂಗ್ಲೆಂಡ್‌ ಸ್ಟಾರ್‌ ಆಲ್‌ರೌಂಡರ್‌ ಲಿಯಾನ್‌ ಲಿವಿಂಗ್‌ಸ್ಟೋನ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಖರೀದಿಸಿದೆ. ಆದರೆ, ಹಲವು ವರ್ಷಗಳ ಕಾಲ ಆಡಿದ್ದ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ಅವರನ್ನು ಆರ್‌ಟಿಎಂ ನಿಯಮದಡಿ ಉಳಿಸಿಕೊಳ್ಳಲು ಬೆಂಗಳೂರು ಫ್ರಾಂಚೈಸಿ ನಿರಾಕರಿಸಿತು. ಆದರೆ, ಸಿರಾಜ್‌ 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ (IPL 2025 Mega auction) ಗುಜರಾತ್‌ ಟೈಟನ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗುಜರಾತ್‌ ಟೈಟನ್ಸ್‌ ತಂಡ ಬಲಗೈ ವೇಗಿಯನ್ನು 12.25 ಕೋಟಿ ರೂ. ಗಳಿಗೆ ಖರೀದಿಸಿತು.

ಶನಿವಾರ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ 2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಬೆಂಗಳೂರು ಫ್ರಾಂಚೈಸಿ, 8.75 ಕೋಟಿ ರೂ. ಗಳಿಗೆ ಖರೀದಿಸಿತು. ಆ ಮೂಲಕ ಮಧ್ಯಮ ಕ್ರಮಾಂಕವನ್ನು ಬಲಪಡಿಸಿಕೊಂಡಿದೆ. ಅಂದಹಾಗೆ ಮೆಗಾ ಹರಾಜಿನ ನಿಮಿತ್ತ ಬೆಂಗಳೂರು ಫ್ರಾಂಚೈಸಿಯು ವಿರಾಟ್‌ ಕೊಹ್ಲಿ (21 ಕೋಟಿ ರೂ. ಗಳು), ರಜತ್‌ ಪಾಟಿದಾರ್‌ (11 ಕೋಟಿ ರೂ. ಗಳು) ಹಾಗೂ ಯಶ್‌ ದಯಾಳ್‌ ಅವರನ್ನು (4 ಕೋಟಿ ರೂ.) ಅವರನ್ನು ಉಳಿಸಿಕೊಂಡಿತ್ತು. ಆ ಮೂಲಕ ಮೊಹಮ್ಮದ್‌ ಸಿರಾಜ್‌, ಫಾಫ್‌ ಡು ಪ್ಲೆಸಿಸ್‌ ಸೇರಿದಂತೆ ಎಲ್ಲಾ ಆಟಗಾರರನ್ನು ರಿಲೀಸ್‌ ಮಾಡಿತ್ತು.

IPL 2025 Mega Auction: ದಾಖಲೆಯ 27 ಕೋಟಿ ರೂ.ಗಳಿಗೆ ಲಖನೌ ಫ್ರಾಂಚೈಸಿ ಸೇರಿದ ರಿಷಭ್‌ ಪಂತ್‌!

ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಬೌಲಿಂಗ್‌ ಮೂಲಕ ಗಮನ ಸೆಳೆಯುವ ಮೂಲಕ ಮೊಹಮ್ಮದ್‌ ಸಿರಾಜ್‌ 2017ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಐಪಿಎಲ್‌ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಅವರು 2018ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬಂದಿದ್‌ ಸಿರಾಜ್‌ ಆರಂಭಿಕ ಆವೃತ್ತಿಗಳಲ್ಲಿ ದುಬಾರಿ ರನ್‌ ಕೊಟ್ಟರೂ ನಂತರ ಮ್ಯಾಚ್‌ ವಿನ್ನಿಂಗ್‌ ಬೌಲರ್‌ ಆಗಿ ಬದಲಾಗಿದ್ದರು. ಇಲ್ಲಿಯತನಕ ಆಡಿದ 87
ಐಪಿಎಲ್‌ ಪಂದ್ಯಗಳಿಂದ 83 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಗುಜರಾತ್‌ ಟೈಟನ್ಸ್‌ ಸೇರಿದ ಸಿರಾಜ್‌

ಗುಜರಾತ್‌ ಟೈಟನ್ಸ್‌ ತಂಡಕ್ಕೆ ಸೇರ್ಪಡೆಯಾಗುಯವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆರು ವರ್ಷಗಳ ಪಯಣವನ್ನು ಅಂತ್ಯಗೊಳಿಸಿದ್ದಾರೆ. ಇದಕ್ಕೂ ಮುನ್ನ 2022ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿಯು 7 ಕೋಟಿ ರೂ. ಗಳಿಗೆ ಉಳಿಸಿಕೊಂಡಿತ್ತು. ಅಲ್ಲದೆ ಮೊಹಮ್ಮದ್‌ ಸಿರಾಜ್‌ ಆರ್‌ಸಿಬಿ ಪರ ಹಲವು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಗಳನ್ನು ತೋರಿದ್ದಾರೆ. ಆದರೂ 2025ರ ಐಪಿಎಲ್‌ ನಿಮಿತ್ತ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಳ್ಳಲಿಲ್ಲ.

ಲಿಯಾಮ್‌ ಲಿವಿಂಗ್‌ಸ್ಟೋನ್‌ ಐಪಿಎಲ್‌ ಅಂಕಿಅಂಶಗಳು

ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಲಿಯಾನ್‌ ಲಿವಿಂಗ್‌ಸ್ಟೋನ್‌ ಅವರು ಕಳೆದ ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಪರ ಆಡಿದ್ದರು. ಆದರೆ, ಅವರನ್ನು ಮುಂದಿನ ಆವೃತ್ತಿಗೆ ಉಳಿಸಿಕೊಳ್ಳಲು ಪಂಜಾಬ್ದ್‌ ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ ಆಟಗಾರನನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಅಂದ ಹಾಗೆ ಇಲ್ಲಿಯವರೆಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರು 39 ಐಪಿಎಲ್‌ ಪಂದ್ಯಗಳನ್ನು ಆಡಿದ್ದಾರೆ ಹಾಗೂ 939 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 11 ವಿಕೆಟ್‌ಗಳನ್ನು ಕಿತ್ತಿದ್ದಾರೆ.