Thursday, 12th December 2024

ವಕೀಲರು, ನ್ಯಾಯಾಧೀಶರ ‘ಪಾಂಡಿತ್ಯ’, ಶ್ರೀಸಾಮಾನ್ಯನಿಗೆ ಅಪಥ್ಯ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ನನಗೆ ಇಂದಿಗೂ ಅರ್ಥವಾಗದ ಕೆಲವು ಪ್ರಶ್ನೆಗಳಿವೆ. ನಮ್ಮ ವಕೀಲರು, ನ್ಯಾಯಾಽಶರು ಯಾಕೆ ಗೊಡ್ಡು ಭಾಷೆಯಲ್ಲಿ ಬರೆಯು ತ್ತಾರೆ? ಭಾಷೆಯನ್ನು ಯಾಕೆ ಇಷ್ಟೊಂದು ವಿರೂಪಗೊಳಿಸುತ್ತಾರೆ, ಭಾಷೆಯ ಮೇಲೆ ದಿನೇ ದಿನೆ ಯಾಕೆ ಆಕ್ರಮಣ ಮಾಡುತ್ತಾರೆ? ಇವರಿಗೆ ಯಾರೂ ಭಾಷೆಯ ಬಗ್ಗೆ ಪಾಠ ಮಾಡಿಲ್ಲವಾ? ಇವರಿಗೆ ಭಾಷೆಯ ಮೇಲೆ ಯಾಕಿಷ್ಟು ಕೋಪ, ತಾತ್ಸರ, ಅವಜ್ಞೆ? ಎಲ್ಲರಿಗೂ ಅರ್ಥವಾಗುವ ಸರಳ, ಸುಲಭ, ಸ್ಪಷ್ಟ, ಚುಟುಕು, ನಿಖರ ಭಾಷೆಯಲ್ಲಿ ಇವರಿಗೇಕೆ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ? ಇವರಿಗೆ express ಮಾಡುವುದು ಮುಖ್ಯವೋ ಅಥವಾ ಇವರು ಯಾರನ್ನೋ impress  ಮಾಡಲು ಹಾಗೆ ಬರೆಯುತ್ತಾರಾ?

ಅಷ್ಟಕ್ಕೂ ಅವರ ದೃಷ್ಟಿಯಲ್ಲಿ ಭಾಷೆ ಅಂದ್ರೆ ಏನು? ಉದ್ದುದ್ದ ವಾಕ್ಯ, ಯಾರಿಗೂ ಅರ್ಥವಾಗದ ಪದ, ಅಲಂಕಾರಿಕ ವಿಶೇಷಣ, ವಿದೇಶಿ ಪದಗಳನ್ನು ಬಳಸುವುದೇಕೆ? ಭಾಷೆಯನ್ನು ಹಾಳುಗೆಡುವಿದ ಆರೋಪದ ಮೇಲೆ ಯಾಕೆ ಇನ್ನೂ, ಯಾರೂ, ವಕೀಲರು ಮತ್ತು ನ್ಯಾಯಾಧೀಶರ ಮೇಲೆ ಕೇಸು ಹಾಕಿಲ್ಲ? ಇವರಿಗೆ ತಾವು ಭಾಷೆಯ ಮೇಲೆ ಎಂಥ ಅನ್ಯಾಯ ಮಾಡುತ್ತಿದ್ದೇವೆ ಎಂಬ ಕಿಂಚಿತ್ತೂ ಅರಿವಾದರೂ ಇದೆಯಾ? ಅನೇಕ ವರ್ಷಗಳಿಂದ ನನ್ನ ಮನಸ್ಸಿನಲ್ಲಿಯೇ ಉಳಿದುಕೊಂಡ ಈ ಪ್ರಶ್ನೆಗಳನ್ನು ಈಗ ಕೇಳಲು ಕಾರಣವಿದೆ.

ಇತ್ತೀಚೆಗೆ, ಸುಪ್ರೀಂ ಕೋರ್ಟಿನಲ್ಲಿ ವಕೀಲರಾಗಿರುವ ದಿಲ್ಲಿಯ ಡಾ.ಸುಭಾಷ ವಿಜಯರನ್ ಎಂಬುವವರು ಈ ಪ್ರಶ್ನೆಗಳನ್ನು ಪ್ರಸ್ತಾಪಿಸಿ, ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್‌) ಯನ್ನು (ಡಾ. ಸುಭಾಷ ವಿಜಯರನ್ ವರ್ಸಸ್ ಭಾರತ ಸರಕಾರ) ಹಾಕಿzರೆ. ವಕೀಲರು, ನ್ಯಾಯಾಧೀಶರು ಮತ್ತು ಸರಕಾರಿ ಅಧಿಕಾರಿಗಳು ಸರಳ ಇಂಗ್ಲೀಷಿನಲ್ಲಿ ((Plain
English) ಬರೆಯಬೇಕು, ಕಾನೂನು ತರಗತಿಗಳಲ್ಲಿಯೂ ಸರಳ ಭಾಷೆಯಲ್ಲಿ ಬರೆಯುವುದು ಹೇಗೆ, ಸರಳ ಭಾಷೆಯಕೆ ಬರೆಯ ಬೇಕು ಎಂಬುದನ್ನು ಪಠ್ಯವಾಗಿ ಕಲಿಸಬೇಕು, ಕಾನೂನುಗಳನ್ನು, ಕೋರ್ಟ್ ತೀರ್ಪುಗಳನ್ನು ಸರಳ ಭಾಷೆಯಲ್ಲಿ ಬರೆಯಬೇಕು, ಅವು ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿರಬೇಕು, ಇದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿ, ಸಂಬಂಧ ಪಟ್ಟವರಿಗೆ ಆದೇಶ ನೀಡಬೇಕು ಎಂದು ಕೋರಿ ಅವರು ಅರ್ಜಿ ಹಾಕಿದ್ದಾರೆ.

ಸುಪ್ರೀಂ ಕೋರ್ಟಿನ ನ್ಯಾಯಾಧೀಶರೇ ಕಷ್ಟಕರವಾದ, ಕ್ಲಿಷ್ಟಕರವಾದ, ಅಲಂಕಾರಿಕವಾದ, ಅರ್ಥವಾಗದ, ಗಡುಚಾದ ಭಾಷೆಯಲ್ಲಿ ತೀರ್ಪು ಬರೆಯುವುದರಿಂದ ಡಾ.ವಿಜಯರನ್ ಪ್ರಯತ್ನ ಎಷ್ಟರಮಟ್ಟಿಗೆ ಫಲ ನೀಡುವುದೋ ಗೊತ್ತಿಲ್ಲ. ಆದರೆ ಅವರು ಎತ್ತಿರುವ ಪ್ರಶ್ನೆ ಮಾತ್ರ ಅತ್ಯಂತ ಮಹತ್ವದ್ದು, ಗಂಭೀರವಾದದ್ದು ಮತ್ತು ಸಮಯೋಚಿತ ವಾದದ್ದು.

ಏಶಿಯನ್ ಕಾಲೇಜ್ ಆಫ್ ಜರ್ನಲಿಸಂನ ಮಾಜಿ ಡೀನ್, ‘ದಿ ಸ್ಟೇಟ್ಸ್ ಮನ್’ ಪತ್ರಿಕೆಯ ಸ್ಟೆಲ್ ಗೈಡ್ ಲೇಖಕ ಮತ್ತು Indlish: The Book for Every English Speaking Indian  ಪುಸ್ತಕದ ಲೇಖಕ ಜ್ಯೋತಿ ಸನ್ಯಾಲ್ ಅವರು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆಯೇ, ಭಾಷೆಯ ಮೇಲೆ ನಿತ್ಯ ಆಕ್ರಮಣ ಮಾಡುವ ವಕೀಲರು ಮತ್ತು ನ್ಯಾಯಾಧೀಶರ ವಿರುದ್ಧ ಕೇಸು ಹಾಕಬೇಕು ಎಂದು ಹೇಳುತ್ತಿದ್ದರು. ಈ ಸಂಬಂಧ ಅವರು ‘ಕ್ಲಿಯರ್ ಇಂಗ್ಲಿಷ್’ ಅಭಿಯಾನವನ್ನೇ ಆರಂಭಿಸಿದ್ದರು. ವಕೀಲರು ಮತ್ತು ನ್ಯಾಯಾ ಧೀಶರು ಬರೆಯುವುದು ಭಾಷೆಯೇ ಅಲ್ಲ, ಅದು ಯಾರಿಗೂ ಅರ್ಥವಾಗದ ಅನಾಗರಿಕ ಭಾಷೆ ಎಂದು ವಾದಿಸುತ್ತಿದ್ದರು.

‘ನ್ಯಾಯಾಧೀಶರು ಒಂದು ಸಾವಿರದ ಪದಗಳಲ್ಲಿ ಬರೆಯುವ ತೀರ್ಪನ್ನು ಅರ್ಥಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಮತ್ತು ಸಾಮಾನ್ಯ ನಿಗೂ ಅರ್ಥವಾಗುವ ರೀತಿಯಲ್ಲಿ ನಾನು ಐವತ್ತು ಪದಗಳಲ್ಲಿ ಎಡಿಟ್ ಮಾಡುತ್ತೇನೆ’ ಎಂದು ಹೇಳುತ್ತಿದ್ದರು. ನ್ಯಾಯ ವ್ಯವಸ್ಥೆ ಯಲ್ಲಿರುವವರು ಪತ್ರಕರ್ತರಂತೆ ಸರಳ, ಸುಲಭ ಭಾಷೆಯಲ್ಲಿ ಯಾಕೆ ಬರೆಯಬಾರದು ಎಂದು ಅವರು ಕೇಳುತ್ತಿದ್ದರು.

ಒಂದು ವೇಳೆ ವಕೀಲರಂತೆ, ನ್ಯಾಯಾಧೀಶರಂತೆ, ಪತ್ರಕರ್ತರೂ ಬರೆಯಲಾರಂಭಿಸಿದರೆ, ಪತ್ರಿಕೆಗಳನ್ನು ಓದಲು ಆಗುವುದೇ ಇಲ್ಲ
ಅಥವಾ ಪ್ರತಿದಿನ ಹದಿನಾರು ಪುಟಗಳಲ್ಲಿ ಪ್ರಕಟ ಮಾಡುವುದನ್ನು ಐವತ್ತು ಪುಟಗಳಲ್ಲಿ ಪ್ರಕಟ ಮಾಡಬೇಕಾಗುತ್ತದೆ. ವಕೀಲರ
ಬರಹಕ್ಕೂ, ಪತ್ರಕರ್ತರ ಬರಹಕ್ಕೂ ಇರುವ ವ್ಯತ್ಯಾಸವನ್ನು ಚುಟುಕಾಗಿ ಹೇಳುವುದಾದರೆ, ವಕೀಲರು ‘ಸರ್ವರೂ ಅಪರಾಹ್ನದ
ಸವಿಭೋಜನ ಸೇವಿಸಲು ದಯಮಾಡಿಸಬೇಕು’ ಎಂದು ಬರೆದರೆ, ಪತ್ರಕರ್ತರು ‘ಎಲ್ಲರೂ ಊಟಕ್ಕೆ ಬನ್ನಿ’ ಎಂದು ನೇರವಾಗಿ,
ಚುಟುಕಾಗಿ ಬರೆಯುತ್ತಾರೆ, ಅಷ್ಟೇ.

ಪತ್ರಿಕಾ ಭಾಷೆಯನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ವಾಕ್ಯದಲ್ಲಿ ಅನಗತ್ಯವಾದ ಒಂದೇ ಒಂದು ಪದ ಇರುವುದಿಲ್ಲ. ‘ಅದನ್ನು ಮಾಡುವ ಸಲುವಾಗಿ’ ಎಂದು ಬರೆದರೆ, ಡೆಸ್ಕ್‌ನಲ್ಲಿರುವವರು, ‘ಅದನ್ನು ಮಾಡಲು’ ಎಂದು ಎಡಿಟ್ ಮಾಡಿ ಒಂದು ಪದವನ್ನು ಉಳಿಸುತ್ತಾರೆ. ಪತ್ರಿಕೆಯನ್ನು ಓದುವಾಗ ಡಿಕ್ಷನರಿ ಪಕ್ಕದಲ್ಲಿಟ್ಟುಕೊಳ್ಳಬೇಕಿಲ್ಲ. ಆದರೆ ನ್ಯಾಯಾ ಧೀಶರ ತೀರ್ಪು ಓದುವಾಗ ಡಿಕ್ಷನರಿ ಪಕ್ಕದಲ್ಲಿಟ್ಟುಕೊಳ್ಳದಿದ್ದರೆ ಆ ಭಗವಂತನಿಗೂ ಅರ್ಥವಾಗುವುದಿಲ್ಲ. ಸರಳವಾಗಿ
ಬರೆಯುವುದು ಕಷ್ಟ, ಆದರೆ ಕ್ಲಿಷ್ಟವಾಗಿ ಬರೆಯುವುದು ಸುಲಭ.

ಕಾನೂನುಗಳನ್ನು ರೂಪಿಸುವವರೂ ಅದ್ಯಾಕೆ ಮೈಲುದ್ದದ ವಾಕ್ಯಗಳಲ್ಲಿ, ಗಡುಚಾದ ಪದಗಳಿಂದ ಬರೆಯುತ್ತಾರೋ  ಅರ್ಥ ವಾಗುವುದಿಲ್ಲ. ಭಾಷೆಯ ಮೇಲೆ ಹಿಡಿತವಿದ್ದವರು ಪುಟ್ಟ ಪುಟ್ಟ ಪದಗಳಲ್ಲಿ, ಸಣ್ಣ ಸಣ್ಣ ವಾಕ್ಯಗಳಲ್ಲಿ, ಎಲ್ಲರಿಗೂ ಅರ್ಥ ವಾಗುವ ರೀತಿಯಲ್ಲಿ ಆಸಕ್ತಿದಾಯಕವಾಗಿ ಹೇಳುತ್ತಾರೆ.

ಡಾ.ಸುಭಾಷ ವಿಜಯರನ್ ತಮ್ಮ ಅರ್ಜಿಯಲ್ಲಿ ಹೀಗೆ ಹೇಳುತ್ತಾರೆ: ಬಹುತೇಕ ವಕೀಲರ ಭಾಷೆ ಶಬ್ದಾಡಂಬರಗಳಿಂದ ಕೂಡಿರು ತ್ತವೆ, ಸ್ಪಷ್ಟವಾಗಿರುವುದಿಲ್ಲ, ವೈಭವ ಅಥವಾ ಅಲಂಕಾರಿಕ (Pompous)ವಾಗಿರುತ್ತವೆ ಮತ್ತು ಅತ್ಯಂತ ನೀರಸವಾಗಿರುತ್ತವೆ. ಹತ್ತು ಪದಗಳಲ್ಲಿ ಹೇಳುವುದನ್ನು ನೂರು ಪದಗಳಲ್ಲಿ ಹೇಳಿ ಗೊಂದಲ ಸೃಷ್ಟಿಸುತ್ತಾರೆ. ಎಲ್ಲರಿಗೂ ಗೊತ್ತಿರುವ ಪದಗಳನ್ನು ಬಳಸದೇ, ನಿತ್ಯಭಾಷೆಯಲ್ಲಿ ಯಾರೂ ಬಳಸದ, ಚಲಾವಣೆ ಯಲ್ಲಿಲ್ಲದ ಪದಗಳನ್ನು ಬಳಸುತ್ತಾರೆ. ಭಾಷೆ ಸಂವಹನಕ್ಕೆ ಸಹಕಾರಿ ಯಾಗಬೇಕು, ಎಲ್ಲರಿಗೂ ಅರ್ಥವಾಗಬೇಕು. ಆದರೆ  ನ್ಯಾಯಾಂಗದ ಭಾಷೆ ಕಬ್ಬಿಣದ ಕಡಲೆ. ಅರ್ಥ ವಾಗಬಾರದು ಎಂಬ ಆಶಯದಲ್ಲಿ ಬರೆಡಿದ್ದಾರೇನೋ ಎನ್ನುವಂತಿರುತ್ತದೆ. ಹೀಗಾಗಿ ಅದು ಸಂವಹನ ವಿರೋಧಿ ಮತ್ತು ಸಂವಿಧಾನ ವಿರೋಧಿ. ಇವರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಕೋರ್ಟ್, ಈಗಾಗಲೇ ಕೇಂದ್ರದ ಕಾನೂನು ಮತ್ತು ನ್ಯಾಯ ಇಲಾಖೆ ಮತ್ತು ಬಾರ್ ಕೌನ್ಸಿಲ್‌ಗೆ ಉತ್ತರಿಸುವಂತೆ ಸೂಚಿಸಿದೆ.

ಅಷ್ಟರಮಟ್ಟಿಗೆ ಡಾ.ವಿಜಯರನ್ ಪ್ರಸ್ತಾಪಿಸಿದ ವಿಷಯವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ನನಗೆ ಇಲ್ಲಿ ಒಂದು ಅದ್ಭುತವಾದ ತೀರ್ಪಿನ ಒಕ್ಕಣಿಕೆ ನೆನಪಾಗುತ್ತಿದೆ. ಇದನ್ನು ನಾನು ಜೋಪಾನವಾಗಿ ಎತ್ತಿಟ್ಟುಕೊಂಡಿದ್ದೆ. ಅದೊಂದು ಸಾಮಾನ್ಯ ಪ್ರಕರಣ. ಬಾಡಿಗೆದಾರ ಮನೆ ಬಿಡುತ್ತಿಲ್ಲ. ಮನೆ ಮಾಲೀಕ ಬೇರೆ ದಾರಿ ಕಾಣದೇ ತನ್ನ ಮನೆ ಖಾಲಿ ಮಾಡಿಸಿ ಕೊಡಿ ಎಂದು ಕೋರಿ, ಕೋರ್ಟಿನ ಮೊರೆ ಹೋಗುತ್ತಾನೆ. 2016ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಾಧೀಶರೊಬ್ಬರು ತೀರ್ಪು ಕೊಡುತ್ತಾರೆ.

ಅದರ ಒಕ್ಕಣಿಕೆ ಹೀಗಿದೆ – Even if assumingly no efficacious evidence nor any evidence of cogent worth may stand adduced qua the defendants raising any obstruction upon the suit land yet the decree of permanent prohibitory injunction dehors any obstructive act done by the defendants during the pendency of the suit before the learned trial Court or during the pendency of the appeal before the first appellate Court also dehors no scribed relief in consonance therewith standings prayed for by the plaintiffs would not estop this court to permit the executing court to carry the mandate of the conclusively recorded decree of permanent prohibitory injunction pronounced qua the plaintiffs, conspicuously when thereupon the mandate of the conclusively recorded decree pronounced qua the suit land would beget consummation besides would obviate its frustration. ಪರ್ಯಾಯವಾಗಿ, For facilitating its consummation, though the learned executing Court stood enjoined to pronounce an appropriate order, contrarily it by relegating the impact of the aforesaid germane factum probandum comprised in the enforceable executable conclusive decree, has inaptly dismissed the execution petition ಈ ತೀರ್ಪನ್ನು ನಾನು ನಾಲ್ಕು ಸಲ ಓದಿದೆ. ಅರ್ಥವಾಗ ಲಿಲ್ಲ. ಜಪ್ಪಯ್ಯ ಅಂದರೂ ಬಿಡಬಾರದು, ಅರ್ಥ ಮಾಡಿಕೊಳ್ಳಲೇಬೇಕು ಎಂದು ಮತ್ತೊಮ್ಮೆ, ಮಗದೊಮ್ಮೆ ಓದಿದೆ. ಆದರೂ ಅರ್ಥವಾಗಲಿಲ್ಲ. ತಲೆಗೆ ಗುರಿಯಿಟ್ಟು ಬೌನ್ಸರ್ ಎಸೆದಂತೆ ಭಾಸವಾಗುತ್ತಿತ್ತು.

ಹೀಗಾಗಿ ಈ ಎರಡು ವಾಕ್ಯಗಳನ್ನು ಅನುವಾದ ಮಾಡಲು ಸಾಧ್ಯವಾಗಿಲ್ಲ. ಯಾರಿಗಾದರೂ ಅರ್ಥವಾದರೆ, ಅನುವಾದ ಮಾಡಿ
ಪುಣ್ಯಕಟ್ಟಿಕೊಳ್ಳಬೇಕಾಗಿ ವಿನಂತಿ. ಅದ್ಸರಿ, ನಿಮಗೇನಾದ್ರೂ ಅರ್ಥವಾಯಿತಾ ಹೇಳಿ? ನ್ಯಾಯಾಽಶರ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸ ಬಾರದು, ಅದು ನ್ಯಾಯಾಲಯ ನಿಂದನೆ ಎಂದು ಕರೆಯಿಸಿಕೊಳ್ಳುತ್ತದೆ. ಆದರೆ ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಾಽಶರ ತೀರ್ಪನ್ನು ಹತ್ತು ಸಲ ಓದಿದರೂ ಅರ್ಥವಾಗದೇ, ಹತ್ತು ಜನರಿಂದ ಓದಿಸಿದರೂ ಅರ್ಥ ಮಾಡಿಕೊಳ್ಳಲಾಗದೇ, ಧೃತಿಗೆಟ್ಟ ಮನೆ
ಮಾಲೀಕ, ಸುಪ್ರೀಂ ಕೋರ್ಟಿನ ದ್ವಿಸದಸ್ಯಪೀಠದ ಮೊರೆ ಹೋಗುತ್ತಾನೆ.

It is not possible to comprehend the contents of the impugned order passed by the High Court ಎಂದು  ದಯನೀಯ ವಾಗಿ ಪ್ರಾರ್ಥಿಸುತ್ತಾನೆ. ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಆ ಆದೇಶವನ್ನು ಓದಿ, ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ,
ಸೋತು ಹೋಗುತ್ತಾರೆ. ತುಂಬಿದ ಕೋರ್ಟ್ ಹಾಲ್ ಗೊಳ್ ಎಂದು ನಕ್ಕುಬಿಡುತ್ತದೆ! ಸುಬ್ರಮಣಿಯನ್ ಸ್ವಾಮಿ ವರ್ಸಸ್ ಭಾರತ ಸರಕಾರದ ಪ್ರಕರಣದಲ್ಲೂ ನ್ಯಾಯಾಧೀಶರೊಬ್ಬರು ನೀಡಿದ ತೀರ್ಪು, ಒಣ ಪಾಂಡಿತ್ಯ ಪ್ರದರ್ಶನದ ಪರಾಕಾಷ್ಠೆಯಂತಿದೆ.

ಸಾಮಾನ್ಯವಾಗಿ,  ಒಂದು ವಾಕ್ಯದಲ್ಲಿ ಯಾವ ಕಾರಣಕ್ಕೂ ಮೂವತ್ತಕ್ಕಿಂತ ಹೆಚ್ಚು ಪದಗಳು ಇರಬಾರದು, 14 ರಿಂದ 18 ಪದಗಳಿದ್ದರೆ ಓದು ಸಲೀಸು ಎಂದು ಭಾಷಾ ಪಂಡಿತರು ಹೇಳುತ್ತಾರೆ. ಆದರೆ ಆ ನ್ಯಾಯಾಧೀಶರು ಆಶ್ಚರ್ಯಕರ ರೀತಿಯಲ್ಲಿ 227 ಪದಗಳುಳ್ಳ ಒಂದು ವಾಕ್ಯವನ್ನು ಬರೆದು ಸ್ವಲ್ಪದರಲ್ಲಿ ಗಿನ್ನೆಸ್ ದಾಖಲೆ ತಪ್ಪಿಸಿಕೊಂಡಿದ್ದರು. ಅವರು ಬರೆದ ತೀರ್ಪು ಹೀಗಿದೆ – This batch of writ petitions preferred under Article 32 of the Constitution of India exposits cavil in its quintessential conceptuality and percipient discord between venerated and exalted right of freedom of speech and expression of an individual, exploring manifold and multilayered, limitless, unbounded and unfettered spectrums, and the controls, restrictions and constrictions, under the assumed power of reasonableness’ ingrained in the statutory provisions relating to criminal law to reviver and uphold one’s reputation. The assertion by the Union of India and the complainants is that the reasonable restrictions are based on the paradigms and parameters of the
Constitution that are structured and pedestaled on the doctrine of non – absoluteness of any fundamental right,
cultural and social ethos, need and feel of the time, for every right engulfs and incorporates duty to respect the other’s right and ensure mutual compatibility and conviviality of the individuals based on collective harmony and conceptual grace of eventual social order; and the asseveration on the part of the petitioners is that freedom of thought and expression cannot be scuttled or abridged on the threat of criminal prosecution and made paraplegic on the mercurial stance of individual reputation and of societal harmony, for the said aspects are to be treated as things of the past, a symbol of the colonial era where the ruler ruled over the subjects and vanquished concepts of resistance; and, in any case, the individual grievances pertaining to reputation can be agitated in civil courts and thus, there is a remedy and viewed from a prismatic perspective, there is no justification to keep the provision of
defamation in criminal law alive as it creates a concavity and unreasonable restriction in individual freedom and
further progressively mars voice of criticism and dissent which are necessitous for the growth of genuine advance ment and a matured democracy.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ದೀಪಕ್ ಮಿಶ್ರಾ ತಮ್ಮ ತೀರ್ಪಿನ ಮೊದಲ ವಾಕ್ಯವನ್ನು ಹೀಗೆ
ಆರಂಭಿಸುತ್ತಾರೆ A democratic polity, as understood in its quintessential purity, is conceptually abhorrent to corruption and, especially corruption at high places, and repulsive to the idea of criminalization of politics as it corrodes the legitimacy of the collective ethos, frustrates the hopes and aspirations of the citizens and has the
potentiality to obstruct, if not derail, the rule of law and democracy, which has been best defined as the Government of the People, by the People and for the People, expects prevalence of genuine orderliness, positive propriety, dedicated discipline and sanguine sanctity by constant affirmance of constitutional morality which is the pillar stone of good governance.. ಈ ವಾಕ್ಯಗಳನ್ನೇನಾದರೂ ಅತ್ಯಂತ ಸರಳ ಭಾಷೆಯಲ್ಲಿ ತೀರ್ಪುಗಳನ್ನು ಬರೆಯುತ್ತಿದ್ದ ಇಂಗ್ಲಿಷ್ ನ್ಯಾಯಾಧೀಶ ಲಾರ್ಡ್ ಡೆನ್ನಿಂಗ್, Language Made Plain ಎಂಬ ಕೃತಿಯನ್ನು ಬರೆದ ಅಂಥೋನಿ ಬರ್ಗೆಸ್ ಹಾಗೂ ಸರಳ
ಇಂಗ್ಲಿಷ್ ಪ್ರತಿಪಾದಕರಾದ ಮಾರ್ಟಿನ್ ಕಟ್ಸ್, ಅರ್ನೆಸ್ಟ್ ಗೊವೆರ್ಸ್, ಫರ್ನ್ ರಾಕ್, ಜೋಸೆಫ್ ವಿಲಿಯಮ್ಸ್, ಜಾರ್ಜ್ ಆರ್ವೆಲ್ ಅವರೇನಾದರೂ ಓದಿದ್ದರೆ ಖಂಡಿತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು!

ಸ್ವರ್ಗದಲ್ಲಿರುವ ಜ್ಯೋತಿ ಸನ್ಯಾಲ್ ಆತ್ಮ ಈಗಲೂ ಅದೆಷ್ಟು ಜೋರಾಗಿ ಕಿರುಚಿಕೊಳ್ಳುತ್ತಿದೆಯೋ? ವಾಕ್ಯಗಳ ಮಧ್ಯ ಮಧ್ಯದಲ್ಲಿ Cogito ergo sum, carpe diem, sola fide, rigor mortis, non sequiter, in loco parentis, ad astra per aspera ಮುಂತಾದ ಲ್ಯಾಟಿನ್ ಪದಗಳನ್ನು ಯಾಕೆ ಬಳಸುತ್ತಾರೋ ? ಅರವತ್ತು – ಎಪ್ಪತ್ತು ವರ್ಷಗಳ ಹಿಂದೆ, ತಾವು ಬರೆಯುವ ಪದಗಳ ಸಂಖ್ಯೆ ಯನ್ನಾಧರಿಸಿ ವಕೀಲರಿಗೆ ಫೀಸನ್ನು ನಿರ್ಧರಿಸಲಾಗುತ್ತಿತ್ತು. ಹೀಗಾಗಿ ವಕೀಲರು ಹೆಚ್ಚಿನ ಫೀಸಿನ ಆಸೆಯಿಂದ ಬೇಕೆಂದೇ ದೀರ್ಘ ವಾಗಿ ಬರೆಯುತ್ತಿದ್ದರು.

ವಕೀಲರನ್ನು ಸಮ್ಮೋಹನಗೊಳಿಸಲು, ತಮ್ಮ ಪಾಂಡಿತ್ಯ ಪ್ರದರ್ಶಿಸಲು ನ್ಯಾಯಾಧೀಶರೂ ಅಲಂಕಾರಕ ಭಾಷೆಯಲ್ಲಿ ತೀರ್ಪು ನೀಡುತ್ತಿದ್ದರು. ಆದರೆ ಈ ಪರಿಪಾಠ ಈಗಲೂ ಮುಂದುವರಿದು ಕೊಂಡು ಬಂದಿರುವುದು ವಿಚಿತ್ರ. ನ್ಯಾಯಾಧೀಶರಿಗೆ ಅಪರಾಧಿ ಗಳನ್ನು ಶಿಕ್ಷಿಸುವ ಅಧಿಕಾರವಿದೆ. ಆದರೆ ಅವರು ನಿರಪರಾಧಿಯಾದ ಭಾಷೆಯನ್ನು ಶಿಕ್ಷಿಸಿ ಭಾಷಾಪ್ರೇಮಿಗಳ ಕಣ್ಣಲ್ಲಿ ಅಪರಾಧಿ ಯಾಗಬಾರದು

ನ್ಯಾಯಾಧೀಶರ ತೀರ್ಪು ಕಕ್ಷಿದಾರನಿಗೆ ಅರ್ಥವಾಗದಿದ್ದರೆ, ಅದಕ್ಕಿಂತಲೂ ಅಸಹಾಯಕತೆ ಮತ್ತೊಂದಿಲ್ಲ . ಸುಂದರ ಹ್ಯಾಂಡ್ ರೈಟಿಂಗ್ ಇದ್ದವನೂ ವೈದ್ಯನಾದ ಬಳಿಕ ಗೀಚಲಾರಂಭಿಸದ ಎನ್ನುವಂತೆ, ಕೋರ್ಟ್ ಆವರಣ ಪ್ರವೇಶಿಸುತ್ತಿದ್ದಂತೆ ಪ್ರವೇಶಿಸು ತ್ತಿದ್ದಂತೆ ಭಾಷೆ ಕಕ್ಷಿದಾರನ ಉಸಿರುಗಟ್ಟಿಸಬಾರದು. ವಾದ – ವಿವಾದ ಮತ್ತು ತೀರ್ಪು ದಣಿದವನಿಗೆ ಕುಡಿಯುವ ನೀರಿನಂತಿರ ಬೇಕು.