Friday, 20th September 2024

ಇಟಲಿಯ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಡಿಯಾಗೋ ಮರಡೋನಾ ಹೆಸರು

ರೋಮ್: ಇತ್ತೀಚೆಗಷ್ಟೇ ನಿಧನರಾಗಿರುವ ಫುಟ್ಬಾಲ್ ದಂತಕತೆ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ಹೆಸರನ್ನು ಇಟಲಿ ಫುಟ್ಬಾಲ್ ತಂಡದ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರುನಾಮಕರಣ ಮಾಡಲಾಗಿದೆ.

ನಪೋಲಿ ತಂಡಕ್ಕೆ ನಾಯಕರಾಗಿ 7 ವರ್ಷಗಳ ಕಾಲ ಮುನ್ನಡೆಸಿದ್ದ ಡಿಯಾಗೋ ಮರಡೊನಾ ಎರಡು ಬಾರಿ ಕಪ್‌ಗಳನ್ನು ಗೆಲ್ಲಿಸಿಕೊಟ್ಟಿದರು. 1984ರಿಂದ 1991ರ ವರೆಗೆ ಡಿಯಾಗೋ ಅವರು ನಪೋಲಿ ತಂಡದ ಬಲವಾಗಿದ್ದರು.

‘ನೆಪೋಲಿಯ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ‘ಸ್ಟೇಡಿಯೋ ಡಿಯಾಗೋ ಅರ್ಮಾಂಡೋ ಮರಡೋನಾ’ ಎಂದು ಮರು ನಾಮಕರಣ ಮಾಡಲು ನೇಪಲ್ಸ್ ನಗರ ಮಂಡಳಿ ಅವಿರೋಧವಾಗಿ ಒಪ್ಪಿಕೊಂಡಿದೆ. ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ಫುಟ್ಬಾಲ್ ದಿಗ್ಗಜ ಮರಡೋನಾ ಅವರು ನವೆಂಬರ್ 25ರಂದು ಹೃದಯಾಘಾತದಿಂದ ನಿಧನರಾಗಿದ್ದರು.