Thursday, 5th December 2024

IND vs AUS: ʻಈ ಇಬ್ಬರು ದಿಗ್ಗಜರಿಗೆ ಬದಲಿ ಆಟಗಾರರಿಲ್ಲʼ- ಭಾರತಕ್ಕೆ ಚೇತೇಶ್ವರ್‌ ಪೂಜಾರ ವಾರ್ನಿಂಗ್‌!

IND vs AUS: Cheteshwar Pujara Names Two India Legends For Whom 'There Are No Actual Replacements'

ನವದೆಹಲಿ: ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ (IND vs AUS) ಮುನ್ನ ಭಾರತ ತಂಡಕ್ಕೆ ಚೇತೇಶ್ವರ್‌ ಪೂಜಾರ ಎಚ್ಚರಿಕೆ ನೀಡಿದ್ದಾರೆ. ಸ್ಪಿನ್‌ ಆಲ್‌ರೌಂಡರ್‌ಗಳಾದ ರವಿಚಂದ್ರನ್‌ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಅವರ ಸ್ಥಾನಗಳನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ದದ ತವರು ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 0-3 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತ್ತು. ಇದಾದ ಬಳಿಕ ಹಿರಿಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ಟೆಸ್ಟ್‌ ಭವಿಷ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಇಬ್ಬರೂ ಸ್ಥಾನಗಳಿಗೆ ಬದಲಿ ಆಟಗಾರರನ್ನು ಪತ್ತೆ ಮಾಡಬಹುದು. ಆದರೆ, ಸ್ಪಿನ್‌ ದಿಗ್ಗಜರಾದ ರವಿಚಂದ್ರನ್‌ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಅವರ ಸ್ಥಾನಗಳಿಗೆ ಬದಲಿ ಆಟಗಾರರನ್ನು ಪತ್ತೆ ಮಾಡುವುದು ತುಂಬಾ ಕಷ್ಟ ಎಂದು ಚೇತೇಶ್ವರ್‌ ಪೂಜಾರ ಎಚ್ಚರಿಕೆ ನೀಡಿದ್ದಾರೆ.

ಕಳೆದ ಒಂದು ದಶಕದಿಂದ ಭಾರತ ತಂಡಕ್ಕೆ ರವೀಂದ್ರ ಜಡೇಜಾ ಹಾಗೂ ಆರ್‌ ಅಶ್ವಿನ್‌ ಅವರು ಪ್ರಮುಖ ಆಧಾರ ಸ್ಥಂಭಗಳಾಗಿದ್ದಾರೆ ಹಾಗೂ ಅದರಲ್ಲಿಯೂ ವಿಶೇಷವಾಗಿ ಉಪ ಖಂಡದಲ್ಲಿ ಭಾರತಕ್ಕೆ ಅವರು ಕೀ ಆಟಗಾರರು. ಇವರಿಬ್ಬರೂ ವಿಶ್ವದ ಪ್ರಮುಖ ಸ್ಪಿನ್ನರ್‌ಗಳು ಮಾತ್ರವಲ್ಲ, ಇವರು ದೀರ್ಘಾವಧಿ ಸ್ವರೂಪದಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳಾಗಿದ್ದಾರೆ.

IND vs AUS: ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಭಾರತ

ಅಶ್ವಿನ್‌-ಜಡೇಜಾ ಸ್ಥಾನಕ್ಕೆ ಬದಲಿ ಆಟಗಾರರು ಇಲ್ಲ

ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಚೇತೇಶ್ವರ್‌ ಪೂಜಾರ, “ಆರ್‌ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಅವರ ಗುಣಮಟ್ಟ ನಿಮ್ಮಲ್ಲಿ ಇಲ್ಲ. ದೇಶಿ ಕ್ರಿಕೆಟ್‌ನಲ್ಲಿ ನಾನು ಸಾಕಷ್ಟು ಸ್ಪಿನ್ನರ್‌ಗಳನ್ನು ನೋಡಿದ್ದೇನೆ ಆದರೆ, ಈ ಇಬ್ಬರು ಸ್ಪಿನ್ನರ್‌ಗಳಿಗೆ ಬದಲಿ ಆಟಗಾರರು ಇಲ್ಲವೇ ಇಲ್ಲ. ಹೌದು, ನಮ್ಮ ಬಳಿ ಯುವ ಆಟಗಾರರು ಇದ್ದಾರೆ ಹಾಗೂ ಅವರನ್ನು ಬೆಳೆಸಬೇಕಾದ ಅಗತ್ಯವಿದೆ. ಆದರೆ, ಅಶ್ವಿನ್‌ ಮತ್ತು ಜಡೇಜಾ ದಿಗ್ಗಜರು. ಈ ಇಬ್ಬರಷ್ಟು ಉತ್ತಮ ಸ್ಪಿನ್ನರ್‌ಗಳನ್ನು ಪಡೆಯಲು ಸಾಧ್ಯವಿಲ್ಲ. ಈ ಇಬ್ಬರೂ ಸ್ಪಿನ್ನರ್‌ಗಳು ಇನ್ನೂ ಭಾರತ ತಂಡಕ್ಕೆ ಕೊ೦ಡುಗೆಯನ್ನು ನೀಡುತ್ತಿದ್ದಾರೆ,” ಎಂದು ಗುಣಗಾಣ ಮಾಡಿದ್ದಾರೆ.

ವಾಷಿಂಗ್ಟನ್‌ ಸುಂದರ್‌ ಪರ ಪೂಜಾರ ಒಲವು

ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯ ಬಳಿಕ ಭಾರತ ತಂಡ ಇಂಗ್ಲೆಂಡ್‌ ತೆರಳಲಿದ್ದು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಆಡಬಹುದು. ತದ ನಂತರ ಭಾರತ ತಂಡ, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಆಡಲಿದೆ. ಈ ಸರಣಿಯಲ್ಲಿ ಅಶ್ವಿನ್‌ ಅಥವಾ ಜಡೇಜಾ ಆಡಹುದು. ಆದರೆ, ಈ ಇಬ್ಬರೂ ಬದಲು ಬೇರೆ ಯಾರಾದರೂ ಯುವ ಸ್ಪಿನ್ನರ್‌ ಅನ್ನು ಆಡಿಸಬೇಕೆಂಬುದು ಪೂಜಾರ ಅವರ ಅಭಿಪ್ರಾಯ.

ಖಾಲಿ ಕುರ್ಚಿಗಳ ನಡುವೆ ಆರ್‌.ಅಶ್ವಿನ್‌….ಫೋಟೋ ವೈರಲ್‌

“ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಬಳಿಕ ನಾವು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದೇವೆ. ಇದು ಭಾರತ ತಂಡಕ್ಕೆ ಅತ್ಯಂತ ಪ್ರಮುಖ ಸರಣಿಯಾಗಿದೆ. ಇಲ್ಲಿ ನಾವು ಐದು ಪಂದ್ಯಗಳ ಟೆಸ್ಟ್‌ ಸರೆಣಿಯನ್ನು ಆಡಲಿದ್ದೇವೆ. ಈ ಸರಣಿಗೆ ಅಶ್ವಿನ್‌ ಹಾಗೂ ಜಡೇಜಾ ಸೂಕ್ತವಾಗಲಿದ್ದಾರಾ? ಪ್ಲೇಯಿಂಗ್‌ XIನಲ್ಲಿ ಯಾರಾದರೂ ಒಬ್ಬರು ಆಡಬೇಕಾ? ಆದರೆ, ವಾಷಿಂಗ್ಟನ್‌ ಸುಂದರ್‌ ಅವರಂಥ ಆಟಗಾರ ಪ್ಲೇಯಿಂಗ್‌ XIನಲ್ಲಿ ಆಡಿಸಬಹುದು. ಇಂಥಾ ಆಟಗಾರನನ್ನು ಆಡಿಸಿದರೆ ಉತ್ತಮ,” ಎಂದು ಚೇತೇಶ್ವರ್‌ ಪೂಜಾರ ತಿಳಿಸಿದ್ದಾರೆ.