Thursday, 5th December 2024

IND vs AUS: ಭಾರತದ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಭವಿಷ್ಯ ನುಡಿದ ಹರ್ಭಜನ್‌ ಸಿಂಗ್‌!

Harbhajan Singh's bold call for Rohit Sharma and co

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್‌ 6 ರಂದು ಆರಂಭವಾಗಲಿರುವ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ (IND vs AUS) ಭಾರತ ತಂಡ ಗೆಲುವು ಪಡೆದರೆ, ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಭಾರತ ತಂಡ ಅರ್ಹತೆ ಪಡೆಯಲಿದೆ ಎಂದು ಸ್ಪಿನ್‌ ದಿಗ್ಗಜ ಭವಿಷ್ಯ ನುಡಿದಿದ್ದಾರೆ. ಅಂದ ಹಾಗೆ ಪರ್ತ್‌ ಟೆಸ್ಟ್‌ನಲ್ಲಿ ಭಾರತ ತಂಡ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು ಹಾಗೂ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಪಡೆದಿದ್ದಾರೆ.

ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಭಾರತ ತಂಡ ಅರ್ಹತೆ ಪಡೆಯಬೇಕೆಂದರೆ ಆಸ್ಟ್ರೇಲಿಯಾ ವಿರುದ್ಧ ಟೀಮ್‌ ಇಂಡಿಯಾ 4 ಟೆಸ್ಟ್‌ ಪಂದ್ಯಗಳಲ್ಲಿ ಗೆಲುವು ಪಡೆಯಬೇಕು. ಇಲ್ಲವಾದಲ್ಲಿ ಟೀಮ್‌ ಇಂಡಿಯಾದ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಭವಿಷ್ಯ ಬೇರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.

ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಹರ್ಭಜನ್‌ ಸಿಂಗ್‌, “ನಾವು ಇನ್ನೊಂದು ಪಂದ್ಯವನ್ನು ಗೆದ್ದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಲಿದ್ದೇವೆ. ಇದು ನಮಗೆ ಮುಖ್ಯವಲ್ಲ ಆದರೆ, ಫೈನಲ್‌ಗೆ ತಲುಪಿ ಪ್ರಶಸ್ತಿಯನ್ನು ಗೆಲ್ಲುವುದು ನಮಗೆ ತುಂಬಾ ಮುಖ್ಯ,” ಎಂದು ತಿಳಿಸಿದ್ದಾರೆ.

IND vs AUS: ಕಪಿಲ್‌ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್‌ ಬುಮ್ರಾ

ನ್ಯೂಜಿಲೆಂಡ್‌ ಎದುರು ಭಾರತ ತಂಡ ತವರು ಟೆಸ್ಟ್‌ ಸರಣಿಯಲ್ಲಿ 0-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಎದುರು ಭಾರತ ತಂಡ ಗೆಲ್ಲುವುದಿಲ್ಲ ಎಂದು ಹಲವರು ಅಂದಾಜಿಸಿದ್ದರು. ಆದರೆ, ಇದೀಗ ಪರ್ತ್‌ ಟೆಸ್ಟ್‌ನಲ್ಲಿ ಭಾರತ ತಂಡ ದೊಡ್ಡ ಅಂತರದಲ್ಲಿ ಗೆಲುವು ಪಡೆಯುವ ಮೂಲಕ ಕಮ್‌ಬ್ಯಾಕ್‌ ಮಾಡಿದೆ.

ಜಸ್‌ಪ್ರೀತ್‌ ಬುಮ್ರಾಗೆ ಭಜ್ಜಿ ಮೆಚ್ಚುಗೆ

ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಇದೇ ವೇಳೆ ಹರ್ಭಜನ್‌ ಸಿಂಗ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಇದರಲ್ಲಿ ಅವರ ವೈಯಕ್ತಿಕ ಪ್ರದರ್ಶನ ಕೂಡ ಉತ್ತಮವಾಗಿತು. ಐದು ವಿಕೆಟ್‌ ಸಾಧನೆ ಜೊತೆಗೆ ಒಟ್ಟು 8 ವಿಕೆಟ್‌ಗಳನು ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

IND vs AUS: ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಭಾರತ

“ಜಸ್‌ಪ್ರೀತ್‌ ಬುಮ್ರಾ ಅವರು ಅದ್ಭುತ ಆಟಗಾರ ಹಾಗೂ ಅವರಲ್ಲಿ ಉತ್ತಮ ಮನಸ್ಥಿತಿ ಇದೆ. ಮೊದಲನೇ ದಿನ ನಾನು ಜಸ್‌ಪ್ರೀತ್‌ ಬುಮ್ರಾ ಅವರನ್ನು ತುಂಬಾ ಬೆಂಬಲಿಸಿದ್ದೆ. ಏಕೆಂದರೆ ಅವರು ಮೈದಾನದಲ್ಲಿ ಸಾಕಷ್ಟು ತಾಳ್ಮೆ ಮತ್ತು ಶಾಂತ ಸ್ವಭಾವವನ್ನು ಕಾಯ್ದುಕೊಂಡಿದ್ದರು,” ಎಂದು ಜಸ್‌ಪ್ರೀತ್‌ ಬುಮ್ರಾ ಗುಣಗಾಣ ಮಾಡಿದ್ದಾರೆ.

“ಜಸ್‌ಪ್ರೀತ್‌ ಬುಮ್ರಾಗೆ ಅವರ ಆಟವೇನೆಂದು ಚೆನ್ನಾಗಿ ಗೊತ್ತಿದೆ ಹಾಗೂ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಎಲ್ಲರೂ ಇಷ್ಟಪಡುವ ಆಟಗಾರ ಇವರಾಗಿದ್ದಾರೆ. ಡ್ರೆಸ್ಸಿಂಗ್‌ ರೂಂನಲ್ಲಿ ಬುಮ್ರಾ ಸಾಕಷ್ಟು ಗೌರವನ್ನು ಹೊಂದಿದ್ದಾರೆ ಹಾಗೂ ನಾಯಕನಾಗಿ ಇವರ ಸೂಚನೆಯನ್ನು ಎಲ್ಲರೂ ಖುಷಿಯಿಂದ ಪಾಲಿಸುತ್ತಾರೆ. ಈ ರೀತಿಯ ಗೌರವವನ್ನು ಅವರು ಉಳಿಸಿಕೊಂಡಿದ್ದಾರೆ,” ಎಂದು ಸ್ಪಿನ್‌ ದಂತಕತೆ ಶ್ಲಾಘಿಸಿದ್ದಾರೆ.