Saturday, 23rd November 2024

ಟಿ20 ಸರಣಿ ಗೆದ್ದು ಬೀಗಿದ ವಿರಾಟ್‌ ಪಡೆ, ಆಸೀಸ್‌’ಗೆ ಮುಖಭಂಗ

ಸಿಡ್ನಿ: ಒಂದು ಪಂದ್ಯ ಬಾಕಿಯಿರುವಂತೆಯೇ ಟೀಂ ಇಂಡಿಯಾ ಆಸೀಸ್‌ ತಂಡವನ್ನು ಎರಡನೇ ಟಿ20 ಪಂದ್ಯದಲ್ಲಿ ಮಣಿಸಿದೆ.

ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಗೆದ್ದುಕೊಂಡಿದೆ.

ಆರಂಭಿಕ ಶಿಖರ್‌ ಧವನ್ ಅವರ ಏಕೈಕ ಅರ್ಧಶತಕ, ಹಾಗೂ ಅಗ್ರ ಕ್ರಮಾಂಕದ ಆಟಗಾರರ ಅತ್ಯಮೂಲ್ಯ ಕೊಡುಗೆಯಿಂದ ಭಾರತ ಎರಡನೇ ಚುಟುಕು ಪಂದ್ಯವನ್ನು ನಾಲ್ಕು ವಿಕೆಟ್ ಗಳಿಂದ ಗೆದ್ದು, ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ ಪಡೆಯ ಬೌಲರ್ ಗಳನ್ನು ಬೆನ್ನಟ್ಟಿದ ಆಸೀಸ್ ಆಟಗಾರರು ಆರಂಭ ದಿಂದಲೇ ಬಿರುಸಿನಿಂದ ಬ್ಯಾಟ್ ಬೀಸಿದರು. ನಾಯಕನ ಸ್ಥಾನ ತುಂಬಿದ ಮ್ಯಾಥ್ಯೂ 58 ರನ್ ಗಳಿಸಿ, ತಂಡದ ಸ್ಕೋರ್ ಬೋರ್ಡ್ ಹೆಚ್ಚುವರಿಕೆಗೆ ಪ್ರಮುಖ ಕಾರಣರಾದರು. ಸ್ಟೀವನ್ ಸ್ಮಿತ್ 46 ರನ್ ಗಳ ಕೊಡುಗೆ ನೀಡಿದರು. ಅಂತಿಮ ಕ್ಷಣದವರೆಗೂ ಆಸೀಸ್ ಆಟಗಾರರ ಅಬ್ಬರದ ಬ್ಯಾಟಿಂಗ್ ನಿಂದ 20 ಓವರ್ ನಲ್ಲಿ 5 ವಿಕಟ್ ನಷ್ಟಕ್ಕೆ 194 ರನ್ ಪೇರಿಸಿ 195 ರ ಬೃಹತ್ ಗುರಿಯನ್ನು ಭಾರತಕ್ಕೆ ನೀಡಿತು.

ಸವಾಲಿಗಿಳಿದ ಭಾರತ ತಂಡಕ್ಕೆ ಧವನ್ ಹಾಗೂ ಕೆ.ಎಲ್ ರಾಹುಲ್ ಜೋಡಿ ಆಶದಾಯಕ ಆರಂಭವನ್ನು ನೀಡಿದರು. ರಾಹುಲ್ 30 ರನ್ ಗಳಿಸಿ ಔಟ್ ಆದರು. ಧವನ್ ಅಮೋಘವಾದ ಬ್ಯಾಟಿಂಗ್ ನಿಂದ 52 ರನ್ ಗಳ ಕೊಡುಗೆ ನೀಡಿ ಜಂಪಾ ಎಸೆತದಲ್ಲಿ ಔಟ್ ಆದರು. ಬಳಿಕ ಬಂದ ನಾಯಕ ಕೊಹ್ಲಿ ಬಿರುಸಿನ ಆಟದಿಂದ ಒತ್ತಡದಿಂದ ತಂಡವನ್ನು ಪಾರು ಮಾಡುವ ಪ್ರಯತ್ನ ಮಾಡಿದರು. 42 ರನ್ ಗಳಿಸಿ ವಿರಾಟ್ ಕೊಹ್ಲಿ ಔಟ್ ಸ್ಯಾಮ್ಸ್ ಎಸೆತಕ್ಕೆ ಕೀಪರ್ ಕ್ಯಾಚ್ ಕೊಟ್ಟು ನಿರ್ಗಮಿಸಿದರು.