ಮಂಡ್ಯ: ಕೆಎಎಸ್ ಅಧಿಕಾರಿಯೊಬ್ಬರು (KAS Officer) ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಸನ್ಯಾಸ ದೀಕ್ಷೆ (sanyas deeksha) ಪಡೆಯಲಿದ್ದಾರೆ. ಹಾಲಿ ಮಂಡ್ಯ (Mandya news) ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಡಾ. ಹೆಚ್. ಎಲ್. ನಾಗರಾಜು ಅವರು ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ ಎಂದು (Viral news) ತಿಳಿದುಬಂದಿದೆ.
ಆಧ್ಯಾತ್ಮದ ಕಡೆ ಹೆಚ್ಚಿನ ಒಲವು ಹೊಂದಿರುವ ಹೆಚ್. ಎಲ್. ನಾಗರಾಜು ಅವರ ಈ ತೀರ್ಮಾನ ಅನಿರೀಕ್ಷಿತವಾಗಿದ್ದರೂ, ಈ ಹಿಂದೆಯೂ ಒಮ್ಮೆ ಅವರು ಸನ್ಯಾಸ ಸ್ವೀಕರಿಸಿದ್ದು ಇದೆ. 2011ರಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾಗ ಹೆಚ್. ಎಲ್. ನಾಗರಾಜು ಅವರು ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದು ತಮ್ಮ ಹೆಸರನ್ನು ನಿಶ್ಚಲಾನಂದನಾಥ ಸ್ವಾಮೀಜಿ ಎಂದು ಬದಲಾವಣೆ ಮಾಡಿಕೊಂಡಿದ್ದರು. ಆದರೆ ಸಾರ್ವಜನಿಕರು, ಕುಟುಂಬದವರ ವಿರೋಧಕ್ಕೆ ಮಣಿದು ಸರ್ಕಾರಿ ಉದ್ಯೋಗಕ್ಕೆ ವಾಪಸ್ ಆಗಿದ್ದರು.
ಇದೀಗ ಮತ್ತೆ ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆಯಲಿರುವ ಅಧಿಕಾರಿ, ಸನ್ಯಾಸಿಯಾಗಿ ಮುಂದಿನ ಜೀವನವನ್ನು ಕಳೆಯಲಿದ್ದಾರಂತೆ. ಸದ್ಯ ಅವರು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಸುಮಾರು 2 ವರ್ಷಗಳಿಂದ ಮಂಡ್ಯ ಅಪರ ಜಿಲ್ಲಾಧಿಕಾರಿಗಳಾಗಿ ಡಾ. ಹೆಚ್. ಎಲ್ ನಾಗರಾಜು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸದ್ಯ ಅವರು ಡಿಸೆಂಬರ್ 20ರಿಂದ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಮ್ಮೇಳನ ಮುಗಿಯುತ್ತಿದ್ದಂತೆಯೇ ಅವರು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಾಗರಾಜು ಅವರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಈ ಕುರಿತು ಡಾ. ಹೆಚ್. ಎಲ್ ನಾಗರಾಜು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಡಾ. ಹೆಚ್. ಎಲ್. ನಾಗರಾಜು, ಹೊನ್ನೆನಹಳ್ಳಿ ಗ್ರಾಮದ ಲಿಂಗಯ್ಯ, ಹೊನ್ನಮ್ಮ ದಂಪತಿಗಳ ಪುತ್ರ. 2005ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿ. ಸನ್ಯಾಸ ದೀಕ್ಷೆ ಪಡೆಯುವಾಗ ಅವರು ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿರಲಿಲ್ಲ. ಸದ್ಯ ಅವರು ರಜೆ ಮೇಲೆ ಇದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದರು. 15 ದಿನಗಳ ರಜೆಯ ಬಳಿಕ ಸನ್ಯಾಸ ದೀಕ್ಷೆ ತೊರೆದು ಕರ್ತವ್ಯಕ್ಕೆ ಮರಳುತ್ತೇನೆ ಎಂದು ಅವರು ಘೋಷಣೆ ಮಾಡಿದ್ದರು.
ಇದನ್ನೂ ಓದಿ: Aishwarya Rai: ಡಿವೋರ್ಸ್ ರೂಮರ್ ನಡುವೆ ಐಶ್ವರ್ಯ ರೈ ಇನ್ಸ್ಟಾ ಪೋಸ್ಟ್ ಫುಲ್ ವೈರಲ್! ಅಂತಹದ್ದೇನಿದೆ?